ETV Bharat / bharat

Monsoon session update: ಸಂಸತ್ ನಿಯಮಗಳಿಗೆ ಅನುಗುಣವಾಗಿದ್ರೆ​​ ಯಾವುದೇ ಚರ್ಚೆಗೆ ಸಿದ್ಧ: ಮೋದಿ - petrol and diesel prices

ಚೀನಾ ಜೊತೆ ಗಡಿ ಗಲಾಟೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ಮತ್ತು ಲಸಿಕೆ ಕೊರತೆ, ಕೃಷಿ ಕಾಯ್ದೆಗಳು ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ.

At all-party meet, PM Modi calls for healthy debates, says Oppn suggestions key
ಸಂಸತ್​ನ ನಿಯಮಗಳಿಗೆ ಅನುಗುಣವಾಗಿದ್ದರೆ ಮಾನ್ಸೂನ್​​ ಅಧಿವೇಶನದಲ್ಲಿ ಯಾವುದೇ ಚರ್ಚೆಗೆ ಸಿದ್ಧ: ಮೋದಿ
author img

By

Published : Jul 18, 2021, 4:43 PM IST

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವುದಕ್ಕೆ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ನಡೆಸಿದರು. ಈ ಸಭೆಯಲ್ಲಿ 33 ಪಕ್ಷಗಳ 40ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದ್ದಾರೆ.

  • PM Narendra Modi, Union Ministers Amit Shah, Rajnath Singh among others leave as the NDA Floor Leaders' Meet at Parliament House concluded pic.twitter.com/0wEhYvCQxp

    — ANI (@ANI) July 18, 2021 " class="align-text-top noRightClick twitterSection" data=" ">

ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾನ್ಸೂನ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಸದಸ್ಯರು ನೀಡುವ ಸಲಹೆ ಮತ್ತು ಸೂಚನೆಗಳು ತುಂಬಾ ಮೌಲ್ಯಯುತವಾಗಿವೆ ಎಂದಿದ್ದಾರೆ ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಪ್ರಹ್ಲಾದ್​ ಜೋಶಿ ಹೇಳುವಂತೆ, ಸಂಸತ್ತಿನಲ್ಲಿ ಆರೋಗ್ಯಕರ ಮತ್ತು ಫಲಪ್ರದ ಚರ್ಚೆಗಳು ನಡೆಯಬೇಕು. ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿದ್ದರೆ ಆಡಳಿತ ಪಕ್ಷ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ, ಸಚಿವ ಪ್ರಹ್ಲಾದ್ ಜೋಷಿ ಮಾತ್ರವಲ್ಲದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್​ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಭಾಗವಹಿಸಿದ್ದರು.

ಟಿಎಂಸಿಯ ಡೆರೆಕ್ ಒಬ್ರಿಯಾನ್, ಡಿಎಂಕೆಯಿಂದ ತಿರುಚ್ಚಿ ಶಿವ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಮತ್ತು ಬಿಎಸ್ಪಿಯ ಸತೀಶ್ ಮಿಶ್ರಾ, ಅಪ್ನಾ ದಳದ ಮುಖಂಡರಾದ ಅನುಪ್ರಿಯಾ ಪಟೇಲ್ ಮತ್ತು ಎಲ್‌ಜೆಪಿ ಮುಖಂಡ ಪಶುಪತಿ ಪರಾಸ್ ಕೂಡ ಸಭೆಯಲ್ಲಿದ್ದರು.

ಇದನ್ನೂ ಓದಿ: ನೋಡಿ: ಬಿಜೆಪಿ ನಾಯಕರಿದ್ದ 'ಐತಿಹಾಸಿಕ' ವಿಮಾನ ಚಲಾಯಿಸಿದ ಸಂಸದ ರಾಜೀವ್ ಪ್ರತಾಪ್ ರೂಡಿ!

ಇನ್ನು ಚೀನಾ ಜೊತೆ ಗಡಿ ಸಮಸ್ಯೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ, ಕೋವಿಡ್ ನಿರ್ವಹಣೆ ಮತ್ತು ಲಸಿಕೆ ಕೊರತೆ, ಕೃಷಿ ಕಾಯ್ದೆಗಳು ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ.

ಈ ಬಾರಿ ಲೋಕಸಭೆಯಲ್ಲಿ ಸುಮಾರು 17 ಮಸೂದೆಗಳನ್ನು ಮಂಡಿಸಲು ಮತ್ತು ಅಂಗೀಕಾರಕ್ಕೆ ಐದು ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಇದೇ ಮಸೂದೆಗಳನ್ನು ರಾಜ್ಯಸಭೆಯಲ್ಲೂ ಮಂಡಿಸುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.