ETV Bharat / bharat

Shocking: ಭಾರತದಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದು 4.8 ಲಕ್ಷವಲ್ಲ.. 32 ಲಕ್ಷ ಜನ ಎನ್ನುತ್ತಿದೆ ಈ ಅಧ್ಯಯನ!! - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಡಾ. ಪ್ರಭಾತ್ ಝಾ

ಭಾರತ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೆ 4,83,178 ಜನರು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ಆದರೆ 'ಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಸುಮಾರು 3.2 ಮಿಲಿಯನ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

3.2 million covid deaths in India
ಭಾರತದಲ್ಲಿ ಕೋವಿಡ್‌ ಮೃತರ ಸಂಖ್ಯೆ
author img

By

Published : Jan 8, 2022, 1:45 PM IST

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿರುವ ಈ ವೇಳೆಯಲ್ಲಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸಾಂಕ್ರಾಮಿಕ ಆರಂಭದಿಂದ ಈವರೆಗೆ ಭಾರತದಲ್ಲಿ ಕೊರೊನಾ ವೈರಸ್​​ಗೆ ಬಲಿಯಾದವರ ಸಂಖ್ಯೆ 32 ಲಕ್ಷ ಎಂದು ಅಧ್ಯಯನವೊಂದು ಅಂದಾಜಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ನಿನ್ನೆಯವರೆಗೆ 4,83,178 ಜನರು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ಆದರೆ 'ಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಭಾರತ ಸರ್ಕಾರ ಅಧಿಕೃತವಾಗಿ ನೀಡಿದ ಸಾವಿನ ಸಂಖ್ಯೆಗಿಂತ ಆರು ಪಟ್ಟು ಹೆಚ್ಚು, ಅಂದರೆ ಸುಮಾರು 3.2 ಮಿಲಿಯನ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಡಾ. ಪ್ರಭಾತ್ ಝಾ ನೇತೃತ್ವದಲ್ಲಿ ಭಾರತ, ಕೆನಡಾ ಮತ್ತು ಅಮೆರಿಕದ ಸಂಶೋಧಕರು 1,40,000 ಜನರ ರಾಷ್ಟ್ರೀಯ ಪ್ರತಿನಿಧಿ ದೂರವಾಣಿ ಸಮೀಕ್ಷೆಯ ಡೇಟಾವನ್ನು, 2,00,000 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ವರದಿ ಹಾಗೂ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ದಾಖಲಾದ ಸಾವುಗಳ ವರದಿ ಬಳಸಿ ಈ ಅಧ್ಯಯನ ನಡೆಸಿದ್ದಾರೆ.

  • Our study on excess mortality in India is out:

    Excess deaths close to 3 million.
    1. Far higher than official totals.
    2. Implies global COVID death count off by >2 million (and more given undercounting elsewhere)

    Short 🧵https://t.co/A8fqRgErQQ

    — Paul Novosad (@paulnovosad) January 6, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಒಂದೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು.. ಏರುತ್ತಲೇ ಇದೆ ಕೋವಿಡ್​ ಭಯದ ಅಲೆ!

ಅಧ್ಯಯನದ ಪ್ರಕಾರ, 3.2 ಮಿಲಿಯನ್ ಮೃತರ ಪೈಕಿ ಕೋವಿಡ್​ ಎರಡನೇ ಅಲೆಯ ಸಂದರ್ಭ ಡೆಲ್ಟಾ ರೂಪಾಂತರದ ಅಟ್ಟಹಾಸದಿಂದಾಗಿ ಶೇ.71ರಷ್ಟು ಅಂದರೆ 2.7 ಮಿಲಿಯನ್ ಸಾವುಗಳು 2021ರ ಏಪ್ರಿಲ್ ಮತ್ತು ಜೂನ್ ನಡುವೆಯೇ ಸಂಭವಿಸಿವೆ.

  • Multiple data sources and different analytical approaches all agree: there were more than 2 million COVID deaths in India thru summer 2021.

    India alone accounts for a huge share of global COVID deaths. WHO should be updating their global numbers taking this into account. 9/N

"ಜಾಗತಿಕ ಕೋವಿಡ್ ಸಾವುಗಳಲ್ಲಿ ಭಾರತದ ಪಾಲು ಹೆಚ್ಚಿದೆ. ಇದನ್ನು ಗಣನೆಗೆ ತೆಗೆದುಕೊಂಡು ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಕೋವಿಡ್​ ಮೃತರ ಸಂಖ್ಯೆಯನ್ನು ನವೀಕರಿಸಬೇಕು" ಎಂದು ಡಾ ಪೌಲ್​ ನೊವೊಸಾದ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.