ETV Bharat / bharat

ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ... ಛತ್ತೀಸ್​ಗಢದಲ್ಲಿ 2ಹಂತದ ವೋಟಿಂಗ್​.. ಡಿಸೆಂಬರ್ 3ಕ್ಕೆ ಚುನಾವಣಾ ಫಲಿತಾಂಶ ಪ್ರಕಟ - ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ

Assembly elections 2023: ಚುನಾವಣಾ ಆಯೋಗವು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ 23 ರಂದು ರಾಜಸ್ಥಾನ, ಮಧ್ಯಪ್ರದೇಶ ನವೆಂಬರ್ 17, ತೆಲಂಗಾಣ ನವೆಂಬರ್ 30, ಛತ್ತೀಸ್​ಗಢ ನವೆಂಬರ್ 7ರಂದು ಮೊದಲನೇ ಹಂತ ಹಾಗೂ 17 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ಜರುಗಲಿದೆ.

Etv Bharat
Etv Bharat
author img

By ETV Bharat Karnataka Team

Published : Oct 9, 2023, 12:22 PM IST

Updated : Oct 9, 2023, 1:43 PM IST

ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ 2023ರ ದಿನಾಂಕಗಳನ್ನು ಚುನಾವಣಾ ಆಯೋಗವು ಪ್ರಕಟಿಸಿದೆ.

ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 23 ರಂದು ರಾಜಸ್ಥಾನ, ನವೆಂಬರ್ 30 ರಂದು ತೆಲಂಗಾಣ, ಛತ್ತೀಸ್‌ಗಢದಲ್ಲಿ ನವೆಂಬರ್ 7ಕ್ಕೆ ಮೊದಲ ಹಂತದ ಮತದಾನ ನಡೆದರೆ, ನ.17 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

assembly-elections-2023-date-announcement-of-election-commission
ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ

ಇಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,"40 ದಿನಗಳಲ್ಲಿ ಎಲ್ಲಾ 5 ರಾಜ್ಯಗಳಿಗೆ ಭೇಟಿ ನೀಡಿ ರಾಜಕೀಯ ಪಕ್ಷಗಳು, ಕೇಂದ್ರ ಮತ್ತು ರಾಜ್ಯ ಜಾರಿ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ" ಎಂದು ಅವರು ತಿಳಿಸಿದರು.

  • With over 940 inter-state border check posts in five states, we will be able to check any cross-border movement of illicit cash, liquor, freebies and drugs: Chief Election Commissioner Rajiv Kumar on 5 States elections pic.twitter.com/AOKsKq7SUE

    — ANI (@ANI) October 9, 2023 " class="align-text-top noRightClick twitterSection" data=" ">

''ಮಿಜೋರಾಂನಲ್ಲಿ ಒಟ್ಟು ಮತದಾರರು 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಮತ್ತು ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ. ಸುಮಾರು 60 ಲಕ್ಷ ಮೊದಲ ಬಾರಿಗೆ ಮತದಾರರು (18-19 ವರ್ಷ) 5 ರಾಜ್ಯಗಳ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಅರ್ಹತಾ ದಿನಾಂಕಗಳ ತಿದ್ದುಪಡಿಯಿಂದಾಗಿ 15.39 ಲಕ್ಷ ಯುವ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಯುವ ಮತದಾರರನ್ನು ಪ್ರೇರೇಪಿಸಲು, 2,900ಕ್ಕೂ ಹೆಚ್ಚು ಮತಗಟ್ಟೆಗಳನ್ನು ಯುವಕರು ನಿರ್ವಹಿಸುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

  • For the upcoming Assembly elections 2023 in five states, 1.77 lakh polling stations will be set up in 679 assembly constituencies: Chief Election Commissioner Rajiv Kumar pic.twitter.com/VZm8RWZhF9

1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪನೆ: ''ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 17,734 ಮಾದರಿ ಮತಗಟ್ಟೆಗಳಿದ್ದು, 621 ಮತಗಟ್ಟೆಗಳನ್ನು ಪಿಡಬ್ಲ್ಯೂಡಿ ಸಿಬ್ಬಂದಿ ನಿರ್ವಹಿಸುತ್ತಾರೆ. 8,192 ಪಿಎಸ್ ಮಹಿಳೆಯರು ಕಮಾಂಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ'' ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

  • Around 60 lakh first time voters(18-19 Yrs) will participate in elections of 5 states. 15.39 lakh young voters are eligible to participate in elections due to amendment on qualifying dates. To inspire young voters, over 2900 polling stations will be managed by youth: Chief… pic.twitter.com/l0iIwSJLPD

  • There will be 17,734 Model polling stations, 621 Polling stations will be managed by PwD staff, and at 8,192 PS women will be in command: Chief Election Commissioner Rajiv Kumar on five States elections pic.twitter.com/vEl61kpspe

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ವಿಷಯ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, "ಭದ್ರತಾ ಪರಿಸ್ಥಿತಿ ಮತ್ತು ರಾಜ್ಯದ ಇತರ ಏಕಕಾಲಿಕ ಚುನಾವಣೆಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಉತ್ತರಿಸಿದರು.

ಇದನ್ನೂ ಓದಿ: Assembly elections 2023: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟಣೆ ಸಾಧ್ಯತೆ

Last Updated : Oct 9, 2023, 1:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.