ನವದೆಹಲಿ : ದೇಶದಲ್ಲಿ ಕೊರೊನಾ, ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೆಬ್ರವರಿ 11ರವರೆಗೆ ಯಾವುದೇ ರೀತಿಯ ರೋಡ್ ಶೋ ಹಾಗೂ ರ್‍ಯಾಲಿ ನಡೆಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
-
#AssemblyElections2022 | ECI extends ban on rallies till Feb 11 pic.twitter.com/rrbCwgu4rx
— ANI (@ANI) January 31, 2022 " class="align-text-top noRightClick twitterSection" data="
">#AssemblyElections2022 | ECI extends ban on rallies till Feb 11 pic.twitter.com/rrbCwgu4rx
— ANI (@ANI) January 31, 2022#AssemblyElections2022 | ECI extends ban on rallies till Feb 11 pic.twitter.com/rrbCwgu4rx
— ANI (@ANI) January 31, 2022
ಜನವರಿ 8ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದ ಚುನಾವಣಾ ಆಯೋಗ, ಜನವರಿ 15ರವರೆಗೆ ಸಾರ್ವಜನಿಕ ರ್‍ಯಾಲಿ, ರೋಡ್ ಶೋಗಳು ಮತ್ತು ಪ್ರಚಾರ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿತ್ತು.
ಇದಾದ ಬಳಿಕ ಈ ದಿನಾಂಕವನ್ನ ಜನವರಿ 31ರವರೆಗೆ ವಿಸ್ತರಣೆ ಮಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ಮಹತ್ವದ ನಿರ್ಧಾರ ಕೈಗೊಂಡಿರುವ ಚುನಾವಣಾ ಆಯೋಗ ಫೆ.11ರವರೆಗೆ ಇದನ್ನ ಮುಂದುವರಿಕೆ ಮಾಡಿದೆ.
ಇದನ್ನೂ ಓದಿರಿ: SP ತಂತ್ರಕ್ಕೆ BJP ಪ್ರತಿತಂತ್ರ.. ಅಖಿಲೇಶ್ ವಿರುದ್ಧ ಕೇಂದ್ರ ಮಂತ್ರಿ ಕಣಕ್ಕೆ..
ಕೆಲವೊಂದು ಸಡಲಿಕೆ ನೀಡಿದ ಆಯೋಗ : ಅಭ್ಯರ್ಥಿಗಳು ಪ್ರಚಾರ ನಡೆಸಲು ಕೇಂದ್ರ ಚುನಾವಣಾ ಆಯೋಗ ಕೆಲವೊಂದಿಷ್ಟು ಸಡಲಿಕೆ ನೀಡಿದೆ. ಪ್ರಮುಖವಾಗಿ ಗರಿಷ್ಠ ಸಾವಿರ ಜನರೊಂದಿಗೆ ರ್‍ಯಾಲಿ ನಡೆಸಲು ಅನುಮತಿ ನೀಡಿದ್ದು, ಒಳಾಂಗಣ ಸಭೆಯಲ್ಲಿ ಗರಿಷ್ಠ 500 ಜನರು ಹಾಗೂ ಮನೆ ಮನೆ ಪ್ರಚಾರಕ್ಕೆ 20 ಜನರಿಗೆ ಅವಕಾಶ ನೀಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ