ETV Bharat / bharat

ಪಂಚರಾಜ್ಯ ಫೈಟ್​​: ಅಸ್ಸೋಂನಲ್ಲಿ ಶೇ. 82, ಬಂಗಾಳದಲ್ಲಿ ಶೇ.78ರಷ್ಟು ಸೇರಿ ಯಾವ ರಾಜ್ಯದಲ್ಲಿ ಎಷ್ಟು ಮತದಾನ!?

author img

By

Published : Apr 6, 2021, 9:14 PM IST

Updated : Apr 6, 2021, 9:45 PM IST

ಪಂಚಾರಾಜ್ಯ ಚುನಾವಣೆಗಳ ಪೈಕಿ ಇಂದು ತಮಿಳುನಾಡು, ಕೇರಳ, ಅಸ್ಸೋಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಐದು ರಾಜ್ಯಗಳ ಒಟ್ಟು 475 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

Assembly Election
Assembly Election

ಹೈದರಾಬಾದ್​​: ಪಂಚರಾಜ್ಯಗಳ ವಿಧಾನಸಭೆಯ 475 ಕ್ಷೇತ್ರಳಿಗೆ ಇಂದು ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಮೂರನೇ ಹಂತದ ವೋಟಿಂಗ್​ ನಡೆಯಿತು.

ಯಾವ ರಾಜ್ಯದಲ್ಲಿ ಎಷ್ಟು ಮತದಾನ!?

ಸಂಜೆ 7 ಗಂಟೆವರೆಗಿನ ಮಾಹಿತಿ ಪ್ರಕಾರ ಅಸ್ಸೋಂನಲ್ಲಿ ಶೇ. 82.33, ಕೇರಳದಲ್ಲಿ ಶೇ. 70.29. ತಮಿಳುನಾಡು ಶೇ.65.19, ಪಶ್ಚಿಮ ಬಂಗಾಳದಲ್ಲಿ ಶೇ.78 ಹಾಗೂ ಪುದುಚೆರಿಯಲ್ಲಿ ಶೇ. 78.90ರಷ್ಟು ವೋಟಿಂಗ್​ ಆಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

  1. ತಮಿಳುನಾಡು: 234 ಕ್ಷೇತ್ರಗಳು, 3,998 ಅಭ್ಯರ್ಥಿಗಳು, 6.28 ಕೋಟಿ ಮತದಾರರು
  2. ಪುದುಚೇರಿ: 30 ಕ್ಷೇತ್ರಗಳು, 324 ಅಭ್ಯರ್ಥಿಗಳು, 10.03 ಲಕ್ಷ ಮತದಾರರು
  3. ಪಶ್ಚಿಮ ಬಂಗಾಳ: 31 ಕ್ಷೇತ್ರಗಳು, 205 ಅಭ್ಯರ್ಥಿಗಳು, 75.8 ಲಕ್ಷ ಮತದಾರರು
  4. ಅಸ್ಸೋಂ: 40 ಕ್ಷೇತ್ರಗಳು, 337 ಅಭ್ಯರ್ಥಿಗಳು, 79.19 ಲಕ್ಷ ಮತದಾರರು ಇದ್ದರು.
  5. ಕೇರಳದಲ್ಲಿ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ

ಪ್ರಮುಖವಾಗಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನಿರ್​ ಸೇಲ್ವಂ, ಡಿಎಂಕೆ ನಾಯಕ ಸ್ಟಾಲಿನ್​, ಬಿಜೆಪಿ ಖುಷ್ಬೂ, ಅಣ್ಣಾಮಲೈ, ಮಕ್ಕಳ್​ ನಿಧಿ ಪಕ್ಷದ ಕಮಲ್​ಹಾಸನ್​ ಪ್ರಮುಖರಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಆಡಳಿತರೂಢ ಪಕ್ಷ ಎಐಎಡಿಎಂಕೆ ನಡುವೆ ನೇರ ಸ್ಪರ್ಧೆ ಉಂಟಾಗಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಹಾಗೂ ಮೊದಲ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಭಾರತೀಯ ಜನತಾ ಪಾರ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

Actor Ajeet
ಹಕ್ಕು ಚಲಾಯಿಸಿದ ನಟ ಅಜೀತ್​

ಕೇರಳದಲ್ಲಿ ಮೆಟ್ರೋಮ್ಯಾನ್​ ಇ. ಶ್ರೀಧರನ್​ ನೇತೃತ್ವದಲ್ಲಿ ಬಿಜೆಪಿ, ಎಲ್​ಡಿಎಫ್​ ಹಾಗೂ ಯುಡಿಎಫ್​ ನಡುವೆ ನೇರ ಸ್ಪರ್ಧೆ ಇದೆ. ಪುದುಚೇರಿಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಅಸ್ಸೋಂನಲ್ಲಿ ಕಾಂಗ್ರೆಸ್​​ ಹಾಗೂ ಬಿಜೆಪಿಯ ಮಿತ್ರ ಪಕ್ಷ ಯುಪಿಪಿಎಲ್​ ನಡುವೆ ಸ್ಪರ್ಧೆ ಇದೆ.

Last Updated : Apr 6, 2021, 9:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.