ಅಸ್ಸೋಂ: ಬುಡಕಟ್ಟು ಮತ್ತು ಇತರ ಸ್ಥಳೀಯ ಸಮುದಾಯಗಳಿಗೆ ಸೇರಿದ ಜನರ ಸಂಸ್ಕೃತಿ ಮತ್ತು ಆಚರಣೆಗಳನ್ನು ರಕ್ಷಿಸಲು ಹೊಸ ಇಲಾಖೆಯನ್ನು ಸ್ಥಾಪಿಸಲು ಅಸ್ಸೋಂ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದನೆ ನೀಡಿದೆ ಎಂಬ ಅಂಶವು ಮುಖ್ಯವಾಗಿ ಪಶ್ಚಿಮ ಮತ್ತು ಮಧ್ಯ ಅಸ್ಸೋಂನಲ್ಲಿ ಸ್ಥಳೀಯ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗೆ ಸಾಕ್ಷಿಯಾಗಿದೆ.
ರಾಜ್ಯದ ಜನಸಂಖ್ಯೆ ನೀತಿಯು ಜನಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಕುಟುಂಬದ ಗಾತ್ರವನ್ನು ನಿರ್ಬಂಧಿಸುತ್ತದೆ. ಆದರೆ ಜನಸಂಖ್ಯೆಯ ಸಮತೋಲನವನ್ನು ಅದು ಖಚಿತಪಡಿಸಿಕೊಳ್ಳುವುದಿಲ್ಲ ಎಂದು ಅಸ್ಸಾಂ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿಯ (ಎಎಮ್‌ಡಿಬಿ) ಅಧ್ಯಕ್ಷ ಡಾ. ಸೈಯದ್ ಮುಮಿನುಲ್ ಆವಾಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಅಸ್ಸೋಂನಲ್ಲಿ ಅನೇಕ ಸ್ಥಳೀಯ ಸಮುದಾಯಗಳಿವೆ, ಹೀಗಾಗಿ ಜನಸಂಖ್ಯೆ ನಿಯಂತ್ರಿಸುವ ಬದಲು ಅವರ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸಬೇಕು. ಉದಾಹರಣೆಗೆ, ಹಜೊಂಗ್ ಅಥವಾ ದೇವ್ರಿ ಬುಡಕಟ್ಟು ಸಮುದಾಯಗಳಲ್ಲಿ, ಹಜೊಂಗ್ ಸಮುದಾಯವು ಕಳೆದ 150 ವರ್ಷಗಳಲ್ಲಿ ಯಾವುದೇ ಜನಸಂಖ್ಯೆಯ ಬೆಳವಣಿಗೆಯನ್ನು ಕಂಡಿಲ್ಲ. ಅವರು ಅಸ್ಸಾಂನಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಸ್ಸಾಂನ 12 ಜಿಲ್ಲೆಗಳಲ್ಲಿ ಹರಡಿರುವ ಡ್ಯೂರಿಸ್ 2 ಲಕ್ಷಕ್ಕಿಂತ ಹೆಚ್ಚಿಲ್ಲ. ಅವುಗಳ ಗಾತ್ರವು ಬಹುತೇಕ ಸ್ಥಿರವಾಗಿದೆ ಎಂದು ಡಾ. ಸೈಯದ್ ಹೇಳಿದರು.
ಎಎಮ್‌ಡಿಬಿಯನ್ನು ರಾಜ್ಯ ಸರ್ಕಾರವು 1985ರಲ್ಲಿ ಅಲ್ಪಸಂಖ್ಯಾತ ಮತ್ತು ಅಭಿವೃದ್ಧಿ ಕಲ್ಯಾಣ ಇಲಾಖೆಯಡಿಯಲ್ಲಿ "ಅಸ್ಸೋಂನ ಅಲ್ಪಸಂಖ್ಯಾತ ವರ್ಗಗಳನ್ನು ಉನ್ನತೀಕರಿಸಲು, ಆದಾಯ ಉತ್ಪಾದನೆ, ಕೌಶಲ್ಯ ಅಭಿವೃದ್ಧಿ ಮತ್ತು ಸ್ವ-ಉದ್ಯೋಗಕ್ಕಾಗಿ ಸ್ಥಾಪಿಸಿತು.
ನಾವು ಅಸ್ಸೋಂನ ಸ್ಥಳೀಯರನ್ನು ರಕ್ಷಿಸಬೇಕಾದರೆ, ನಾವು ಈ ಅಂತರ್-ಕ್ಷೇತ್ರದ ವಲಸೆಯನ್ನು ನಿಲ್ಲಿಸಬೇಕಾಗುತ್ತದೆ, ಇದರಿಂದಾಗಿ ಬಾಂಗ್ಲಾದೇಶ ಮೂಲದ ಮುಸ್ಲಿಂ ಮತದಾರರು ಕೇವಲ 28-30 ಸ್ಥಾನಗಳಿಗೆ ಸೀಮಿತರಾಗಿದ್ದಾರೆ ಎಂದು ಅವರು ಹೇಳಿದ್ರು.
ಅಸ್ಸೋಂನಲ್ಲಿ ದೇಶದಲ್ಲೇ ಅತಿ ಹೆಚ್ಚು, ಸರಿಸುಮಾರು 1.6 ಕೋಟಿ ಮುಸ್ಲಿಮರಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಸುಮಾರು 1.2 ಕೋಟಿ ಜನರು ಬಾಂಗ್ಲಾದೇಶ ಮೂಲದ ಮುಸ್ಲಿಮರು ಅಸ್ಸಾಂನಲ್ಲಿ ವಿವಿಧ ಅವಧಿಯಲ್ಲಿ ನೆಲೆಸಿದ್ದಾರೆ. ಡಾ.ಆವಲ್ ಸೇರಿದ ಸ್ಥಳೀಯ ಮುಸ್ಲಿಂ ಸಮುದಾಯವು 45 ಲಕ್ಷಕ್ಕಿಂತ ಹೆಚ್ಚಿಲ್ಲ. ಅಸ್ಸೋಂನ ಸ್ಥಳೀಯ ಕುಟುಂಬಗಳಲ್ಲಿ, ಮಕ್ಕಳ ಸಂಖ್ಯೆ ಸಾಮಾನ್ಯವಾಗಿ ಒಂದು ಅಥವಾ ಎರಡು ಮತ್ತು ವಿರಳವಾಗಿ ಮೂರು ಎಂದು ಅವರು ಹೇಳುತ್ತಾರೆ. "ಈ ಪ್ರವೃತ್ತಿ ಮುಂದುವರಿದರೆ, 2041 ರ ಚುನಾವಣೆಯಲ್ಲಿ, ಅಸ್ಸಾಂನ ಮುಖ್ಯಮಂತ್ರಿ ಬಾಂಗ್ಲಾದೇಶ-ಮುಸ್ಲಿಂ ಮೂಲದ ವ್ಯಕ್ತಿಯಾಗುತ್ತಾರೆ" ಎಂದು ಡಾ. ಸೈಯದ್ ಮುಮಿನುಲ್ ಆವಾಲ್ ಹೇಳಿದ್ದಾರೆ.
ಇಲ್ಲಿಯವರೆಗೆ, ಸ್ಥಳೀಯ ಅಸ್ಸಾಮಿಗಳು ಯಾರೆಂಬುದಕ್ಕೆ ಸ್ಪಷ್ಟತೆ ಅಥವಾ ಸರಿಯಾದ ವ್ಯಾಖ್ಯಾನವಿಲ್ಲ. ಸ್ಥಳೀಯ ಮುಸ್ಲಿಮರನ್ನು ಗುರುತಿಸುವ ಕೆಲಸವು ಹೆಚ್ಚು ಕಷ್ಟಕರವಾಗಿದೆ. ಅಸ್ಸಾಂನ ಮುಸ್ಲಿಮರು ಏಕರೂಪದವರಲ್ಲ. ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಮುಸ್ಲಿಮರಿಗೆ ಸಹ ಹಲವಾರು ವರ್ಗಗಳಿವೆ. ಕೆಲವು ಅವಿಭಜಿತ ಭಾರತದಲ್ಲಿ ಸ್ವಾತಂತ್ರ್ಯದ ಮೊದಲು ಬಂದವು-ಪಶ್ಚಿಮ ಅಸ್ಸಾಂನ ಅನೇಕ ಸ್ಥಳಗಳಲ್ಲಿರುವಂತೆ-ಮತ್ತು ಕೆಲವು ನಂತರ ಬಂದವು. ಅವರ ಪ್ರಕರಣವು ಬಾಂಗ್ಲಾದೇಶದಲ್ಲಿರುವ ಅನೇಕ ಕೋಚ್-ರಾಜ್‌ಬಾಂಗ್‌ಶಿಗಳು, ಹಜೊಂಗ್ಸ್ ಮತ್ತು ಬೋಡೋಸ್‌ಗಳಿಗೆ ಹೋಲುತ್ತದೆ. ಈ ವರ್ಗವನ್ನು ವಲಸಿಗರು ಎಂದು ಕರೆಯಲಾಗುವುದಿಲ್ಲ ಆದರೆ ಅವರು ಬಾಂಗ್ಲಾದೇಶ ಮೂಲದವರು ಎಂದು ಡಾ. ಸೈಯದ್ ಮಾಹಿತಿ ನೀಡಿದ್ರು.