ಗುವಾಹಟಿ(ಅಸ್ಸೋಂ): ಅಸ್ಸೋಂ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಣ ಹಾಗೂ ಮದ್ಯ ಹೇರಳವಾಗಿ ಹರಿದಾಡುತ್ತಿದ್ದು, ಇದೀಗ ಅಪಾರ ಪ್ರಮಾಣದ ಹಣ ಹಾಗೂ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಳೆದ 48 ಗಂಟೆಯಲ್ಲಿ 53 ಲಕ್ಷ ರೂ ನಗದು ಹಾಗೂ 3.93 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಲ್ಲಿನ ಹಿರಿಯ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
42,647 ಲೀಟರ್ ಮದ್ಯ, 799 ಗ್ರಾಂ ಹೆರಾಯಿನ್, 92.2 ಕೆಜಿ ಗಾಂಜಾ ಹಾಗೂ 85 ಗ್ರಾಂ ಬ್ರೌನ್ ಶುಗರ್ಸ್ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿಸಿದ್ದು, ಎಲ್ಲ ಕ್ಷೇತ್ರಗಳ ಮೇಲೂ ನಿಗಾ ಇಡಲಾಗಿದೆ ಎಂದಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಣೆ ಮಾಡಿದ್ದಕ್ಕಾಗಿ 23ಕ್ಕೂ ಅಧಿಕ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: 'ನಾನು ಹಿಂದೂ ಹುಡುಗಿ' ನಂದಿಗ್ರಾಮದಲ್ಲಿ 'ದುರ್ಗಾ ಸ್ತೋತ್ರ' ಪಠಿಸಿದ ಮಮತಾ
ಅಸ್ಸೋಂನ 126 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, 47 ಸ್ಥಾನಗಳಿಗೆ ಮಾರ್ಚ್ 27ರಂದು, 39 ಸ್ಥಾನಗಳಿಗೆ ಏಪ್ರಿಲ್ 1 ಹಾಗೂ 40 ಸ್ಥಾನಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.