ETV Bharat / bharat

764 ಬಾಕ್ಸ್​ಗಳಲ್ಲಿ ಸಾಗಿಸುತ್ತಿದ್ದ 9 ಕೆಜಿ ಹೆರಾಯಿನ್​ ವಶ.. ಆರೋಪಿ ಬಂಧನ - heroin seizes in assam

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟ್ಯಂತರ ರೂಪಾಯಿ 9 ಕೆಜಿಗೂ ಅಧಿಕ ಹೆರಾಯಿನ್​ ಅನ್ನು ಪೊಲೀಸರು ಅಸ್ಸೋಂನಲ್ಲಿ ವಶಕ್ಕೆ ಪಡೆದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

assam-police-seizes-more-than-9-kg-of-heroin
ಅಸ್ಸೋಂನಲ್ಲಿ 764 ಬಾಕ್ಸ್​ಗಳಲ್ಲಿ ಸಾಗಿಸುತ್ತಿದ್ದ 9 ಕೆಜಿ ಹೆರಾಯಿನ್​ ವಶ
author img

By

Published : Oct 11, 2022, 11:14 AM IST

ಅಸ್ಸೋಂ: 764 ಸೋಪ್​ ಬಾಕ್ಸ್​ಗಳಲ್ಲಿ ತುಂಬಿ ಅಕ್ರಮವಾಗಿ ಟ್ರಕ್​​ನಲ್ಲಿ ಸಾಗಿಸಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 9 ಕೆಜಿಗೂ ಅಧಿಕ ತೂಕದ ಹೆರಾಯಿನ್​ ಅನ್ನು ಅಸ್ಸೋಂನಲ್ಲಿ ಇಂದು ವಶಪಡಿಸಿಕೊಂಡು, ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.

ಟ್ರಕ್​​ನಲ್ಲಿ ಹೆರಾಯಿನ್​ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆಗಿಳಿದ ಮಿಜೋರಾಂನ 7 ನೇ ಬೆಟಾಲಿಯನ್, ಬಿಎಸ್​ಎಫ್​ ಮತ್ತು ಕರೀಮ್‌ಗಂಜ್‌ನ ಕ್ಯಾಚಾರ್ ಫ್ರಾಂಟಿಯರ್ ಪೊಲೀಸರು ಇಲ್ಲಿನ ನ್ಯೂ ಕರೀಂಗಂಜ್ ರೈಲ್ವೆ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಟ್ರಕ್​​ ತಡೆದು ಪರಿಶೀಲಿಸಿದಾಗ ಡ್ರಗ್ಸ್​ ಪತ್ತೆಯಾಗಿದೆ.

ಬಾಕ್ಸ್​ಗಳಲ್ಲಿ ಸಾಗಿಸುತ್ತಿದ್ದ ಹೆರಾಯಿನ್​
ಬಾಕ್ಸ್​ಗಳಲ್ಲಿ ಸಾಗಿಸುತ್ತಿದ್ದ ಹೆರಾಯಿನ್​

ಟ್ರಕ್‌ನಲ್ಲಿ 764 ಸೋಪ್ ಬಾಕ್ಸ್​ಗಳಲ್ಲಿ ತುಂಬಿಡಲಾಗಿದ್ದ 9 ಕೆಜಿಗೂ ಅಧಿಕ ತೂಕದ ಹೆರಾಯಿನ್ ವಶಪಡಿಸಿಕೊಂಡಿದ್ದಲ್ಲದೇ, ಸಾಗಿಸುತ್ತಿದ್ದ ಒಬ್ಬ ಮಾದಕವಸ್ತು ವ್ಯಾಪಾರಿಯನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯವುಳ್ಳದ್ದಾಗಿದ್ದು ಎಂದು ಅಂದಾಜಿಸಲಾಗಿದೆ.

ಓದಿ: ಶಿವಮೊಗ್ಗದಲ್ಲಿ ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು.. ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.