ETV Bharat / bharat

ದಶಕಗಳ ಅಸ್ಸೋಂ-ಮೇಘಾಲಯ ಗಡಿ ಸಮಸ್ಯೆ ಇತ್ಯರ್ಥ: ಮಹತ್ವದ ಒಪ್ಪಂದಕ್ಕೆ ಅಮಿತ್‌ ಶಾ ಸಮ್ಮುಖದಲ್ಲಿ ಸಹಿ - ಅಸ್ಸೋಂ-ಮೇಘಾಲಯ ಗಡಿ ಸಮಸ್ಯೆ

ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದುಕೊಂಡಿದ್ದ ಅಸ್ಸೋಂ-ಮೇಘಾಲಯ ನಡುವಿನ ಅಂತರರಾಜ್ಯ ಗಡಿ ಸಮಸ್ಯೆ ಕೊನೆಗೂ ಬಗೆಹರಿದಿದೆ.

boundary dispute assam
boundary dispute assam
author img

By

Published : Mar 29, 2022, 5:00 PM IST

ನವದೆಹಲಿ​: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಸ್ಸೋಂ-ಮೇಘಾಲಯ ನಡುವೆ ಉಂಟಾಗಿದ್ದ ಸುದೀರ್ಘ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದ್ದು, ಉಭಯ ರಾಜ್ಯದ ಮುಖ್ಯಮಂತ್ರಿಗಳು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿದರು. ಈ ಮೂಲಕ 50 ವರ್ಷಗಳಿಂದ ಉಂಟಾಗಿದ್ದ ಗಡಿ ಸಂಘರ್ಷ ಅಂತ್ಯಗೊಂಡಿತು.

ದಶಕಗಳಿಂದಲೂ ಜೀವಂತವಾಗಿದ್ದ ಗಡಿ ವಿವಾದ ಇದೀಗ ಮುಕ್ತಾಯಗೊಂಡಿರುವ ಕಾರಣ ಈಶಾನ್ಯ ಭಾಗಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ. ಗೃಹ ಸಚಿವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮೇಘಾಲಯದ ಸರ್ಕಾರದ ಪರವಾಗಿ 11 ಪ್ರತಿನಿಧಿಗಳು ಹಾಗೂ ಅಸ್ಸೋಂ ಪರವಾಗಿ 9 ಪ್ರತಿನಿಧಿಗಳು ಭಾಗಿಯಾಗಿದ್ದರು. ಪ್ರಮುಖವಾಗಿ ಅಸ್ಸೋಂ ಮುಖ್ಯಮಂತ್ರಿ ಹೇಮಂತ್​​ ಬಿಸ್ವಾ ಶರ್ಮಾ ಹಾಗೂ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಉಪಸ್ಥಿತರಿದ್ದರು.

  • #WATCH Assam CM Himanta Biswa Sarma and Meghalaya CM Conrad K Sangma sign an agreement to resolve the 50-year-old pending boundary dispute between their states, in the presence of Union Home Minister Amit Shah in Delhi pic.twitter.com/hnP6hs8yMm

    — ANI (@ANI) March 29, 2022 " class="align-text-top noRightClick twitterSection" data=" ">

ಇದನ್ನೂ ಓದಿ:ಬಾಯ್‌ಫ್ರೆಂಡ್​ ಎದುರೇ ಯುವತಿ ಮೇಲೆ ಅತ್ಯಾಚಾರ: ಮೂವರು ಕಾಮುಕರ ಬಂಧನ

ಸುದೀರ್ಘ ಕಾಲದಿಂದ ಬಗೆಹರಿಯದೆ ಉಳಿದುಕೊಂಡಿದ್ದ ಗಡಿ ಭಿನ್ನಾಭಿಪ್ರಾಯ ತಾರಕಕ್ಕೇರಿ ಉಭಯ ರಾಜ್ಯಗಳ ಜನರು ಅನೇಕ ಬಾರಿ ಹೊಡೆದಾಡಿಕೊಂಡಿದ್ದರು. ಆದರೆ, ಇಂದು ನಡೆದ ಮಹತ್ವದ ಒಪ್ಪಂದದ ಪ್ರಕಾರ ಎರಡೂ ಸರ್ಕಾರಗಳು ರಾಜ್ಯದ ಗಡಿಯಲ್ಲಿ 885 ಕಿಲೋ ಮೀಟರ್ ಉದ್ದದ ಗಡಿ ಭೂಮಿ ಹಂಚಿಕೊಳ್ಳಲು ನಿರ್ಧರಿಸಿವೆ. ಪ್ರಮುಖವಾಗಿ ತರಾಬರಿ ಮೇಲ್ದಂಡೆ, ಗಂಜಾಗ್ ಮೀಸಲು ಅರಣ್ಯ ಪ್ರದೇಶ, ಹಾಹಿಂ, ಲಾಂಗ್​ಪಿಹ್​, ಬೋರ್ಡುವಾರ್​, ಬೊಕ್ಲಾಪಾರಾ, ನೋಂಗ್​ವಾ, ಮಾಟಮುರ್​, ಖಾನಾಪಾರಾ-ಪಿಲಂಕಾಟಾ, ಖಂಡುಲಿ ಮತ್ತು ರೆಟಾಚೆರಾ ಪ್ರದೇಶದಲ್ಲಿ ಉಭಯ ರಾಜ್ಯಗಳ ಮಧ್ಯೆ ಗಡಿ ಸಮಸ್ಯೆ ಇತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.