ಗುವಾಹಟಿ: ಅಸ್ಸೋಂನ ಪ್ರಸಿದ್ಧ, ಅಪರೂಪದ ಮತ್ತು ಸ್ವಾದಭರಿತ ಚಹಾ ಪುಡಿಯಾದ 'ಮನೋಹರಿ ಗೋಲ್ಡ್ ಟೀ' ಈ ಬಾರಿ ದಾಖಲೆ ಪ್ರಮಾಣದಲ್ಲಿ ಮಾರಾಟ ಕಾಣುವ ಮೂಲಕ ತನ್ನದೇ ದಾಖಲೆ ಅಳಿಸಿ ಹಾಕಿದೆ.
ಗುವಾಹಟಿ ಟೀ ಮಾರಾಟ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಮನೋಹರಿ ಚಹಾ ಪುಡಿ ಒಂದು ಕೆ.ಜಿ.ಗೆ ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಗಿದ್ದು, ಇತಿಹಾಸ ಸೃಷ್ಟಿಸಿದೆ. ಸೌರವ್ ಟೀ ಟ್ರೇಡಸ್ ಕಂಪನಿ ಗೋಲ್ಟ್ ಟೀ ಪೌಡರನ್ನು ಇಷ್ಟು ಪ್ರಮಾಣದ ಬಿಡ್ ಹೂಡಿ ಖರೀದಿ ಮಾಡಿದೆ.
ಹಿಂದಿನ ವರ್ಷ ಕಂಟೆಂಪರರಿ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಹರಾಜಿಗಿಟ್ಟಿದ್ದ ಇದೇ ಮನೋಹರಿ ಗೋಲ್ಡ್ ಟೀ ಪ್ರತಿ ಕಿಲೋಗೆ 75 ಸಾವಿರ ರೂಪಾಯಿ ಮಾರಾಟವಾಗಿ ದಾಖಲೆ ಬರೆದಿತ್ತು. ಇದೀಗ ಮತ್ತೆ 99,999 ರೂಪಾಯಿಗೆ ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ: ಹೈಕೋರ್ಟ್‌ನಿಂದ ಬಿಸಿಸಿಐಗೆ ನ್ಯಾಯಾಂಗ ನಿಂದನೆ ನೋಟಿಸ್
ಈ ಚಹಾಪುಡಿ ವಿಶೇಷತೆ ಏನು?
ಈ ಚಹಾಪುಡಿ ಬಹಳ ವಿಶೇಷವಾಗಿದ್ದು, ಇದನ್ನು ಅತ್ಯುತ್ತಮವಾದ ಮತ್ತು ಎಳೆಯ ಪಕಳೆಗಳಿಂದ ತಯಾರು ಮಾಡಲಾಗುತ್ತದೆ. ಈ ಮಾದರಿಯ ಟೀ ಪುಡಿಯ ಎಲೆಗಳು ಬೆಳಗಿನ ಜಾವದಲ್ಲಿ ಮಾತ್ರ ಹೆಕ್ಕಲು ಸಿಗುತ್ತವೆ. ಇದರಿಂದಾಗಿ ಗೋಲ್ಡ್ ಟೀ ಭಾರೀ ಮಹತ್ವ ಪಡೆದುಕೊಂಡಿದೆ.
ಇದೀಗ ಮನೋಹರಿ ಗೋಲ್ಡ್ ಟೀ ಪೌಡರ್ ಅನ್ನು ಗುವಾಹಟಿ ಮೂಲದ ಚಹಾ ವ್ಯಾಪಾರಿ ವಿಷ್ಣು ಟೀ ಕಂಪನಿ ಖರೀದಿಸಿದ್ದು, ಅದನ್ನು ತಮ್ಮ ವೆಬ್‌ಸೈಟ್ 9amtea.com ನಲ್ಲಿ ಪ್ರಪಂಚದಾದ್ಯಂತ ಮಾರಾಟಕ್ಕಿಟ್ಟಿದೆ.