ಹೈದರಾಬಾದ್: ಈವರೆಗೆ ಒಬ್ಬ ವ್ಯಕ್ತಿಗೆ ಕೋವಿಡ್ ಅಥವಾ ಅದರ ರೂಪಾಂತರ ಆಲ್ಫಾ ಅಥವಾ ಡೆಲ್ಟಾ ರೂಪಾಂತರಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಒಂದೇ ಸಮಯಲ್ಲಿ ಒಬ್ಬ ವ್ಯಕ್ತಿಗೆ ಆಲ್ಫಾ ಮತ್ತು ಡೆಲ್ಟಾ ವೈರಸ್ಗಳು ವಕ್ಕರಿಸಿರುವ ಅಪರೂಪದ ಪ್ರಕರಣ ದೇಶದಲ್ಲಿ ಕಂಡು ಬಂದಿದೆ.
ಹೌದು, ಅಸ್ಸೋಂ ಮೂಲದ ವೈದ್ಯರೊಬ್ಬರಲ್ಲಿ ಆಲ್ಫಾ ಹಾಗೂ ಡೆಲ್ಟಾ ವೈರಸ್ಗಳೆರಡೂ ಕಾಣಿಸಿಕೊಂಡಿವೆ. ವೈದ್ಯಕೀಯ ತಜ್ಞರ ಪ್ರಕಾರ ಎರಡೂ ವೈರಸ್ಗಳು ಒಬ್ಬ ವ್ಯಕ್ತಿಯಲ್ಲಿ ಒಂದೇ ಬಾರಿಗೆ ಕಾಣಿಸಿಕೊಂಡಿರುವ ಮೊದಲ ಪ್ರಕರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಎಂಆರ್ ಅಧಿಕಾರಿ ವಿಶ್ವಜ್ಯೋತಿ ಬೋರ್ಕಕೋಟಿ, ಮೊದಲಿಗೆ ವೈದ್ಯರ ಮಾದರಿಗಳನ್ನು ಪರೀಕ್ಷಿಸಲಾಯಿತು. ಆಗ ಎರಡೂ ರೂಪಾಂತರಗಳಿರುವುದು ಪತ್ತೆಯಾಯಿತು. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗಲೂ ಎರಡು ರೂಪಾಂತರಗಳಿರುವುದು ಸ್ಪಷ್ಟವಾಯಿತು. ಕೆಲ ದಿನಗಳ ಹಿಂದೆ ವೈದ್ಯೆ ಪತಿಗೆ ಆಲ್ಫಾ ರೂಪಾಂತರ ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.
ಅವರು ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದಾರೆ. ಸದ್ಯ, ವೈದ್ಯೆಗೆ ಗಂಭೀರವಾದ ರೋಗ ಲಕ್ಷಣಗಳಿಲ್ಲದಿರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಲ್ಜಿಯಂನಲ್ಲಿ ಮೊದಲ ಪ್ರಕರಣ
ಇತ್ತೀಚೆಗೆ ಬೆಲ್ಜಿಯಂನ 90 ವರ್ಷದ ವೃದ್ಧೆಗೆ ಈ ಎರಡೂ ರೂಪಾಂತರಗಳು ದೃಢಪಟ್ಟಿದ್ದವು. ಆಕೆಗೆ ಗಂಭೀರವಾದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬದುಕುಳಿಯಲಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆಕೆ ಲಸಿಕೆ ಪಡೆದಿರಲಿಲ್ಲ.
ಇದನ್ನೂ ಓದಿ:'ಕೋವ್ಯಾಕ್ಸಿನ್' EULಗೆ ಸೇರ್ಪಡೆ ವಿಚಾರ: ಡೋಸ್ನ ಡೇಟಾ ಪರಿಶೀಲಿಸುತ್ತಿದೆ WHO