ದಿಬ್ರುಗಢ(ಅಸ್ಸೋಂ): ಕಾಡಿನಲ್ಲಿ ಬೆಳೆಯುವ ವಿಷಕಾರಿ ಅಣಬೆ ಸೇವನೆ ಮಾಡಿರುವ ಪರಿಣಾಮ ಒಂದೇ ವಾರದ ಅಂತರದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 39 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅಸ್ಸೋಂನ ದಿಬ್ರುಗಢದಲ್ಲಿ ಈ ಘಟನೆ ನಡೆದಿದೆ.
ವಿಷಪೂರಿತ ಅಣಬೆ ಸೇವನೆ ಮಾಡಿರುವ ಪರಿಣಾಮ ಎಲ್ಲರೂ ಮೂತ್ರಪಿಂಡ ಮತ್ತು ಯಕೃತ್ತಿ ತೊಂದರೆಯಿಂದ ಬಳಲುತ್ತಿದ್ದು, ಇಲ್ಲಿಯವರೆಗೆ 13 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆಂದು ವೈದ್ಯಾಧಿಕಾರಿ ಡಾ. ಪ್ರಶಾಂತ್ ದಹಿಂಗಿಯಾ ತಿಳಿಸಿದ್ದಾರೆ. ಅಸ್ಸೋಂನ ತಿನ್ಸುಕಿಯಾ, ಚರೈಡಿಯೊ,ಶಿವಸಾಗರ್ ಮತ್ತು ದಿಬ್ರುಗಢ ಜಿಲ್ಲೆಯ ಜನರು ಸಾವನ್ನಪ್ಪಿದ್ದು, ಇದರಲ್ಲಿ ಹೆಚ್ಚಿನವರು ಟೀ ಗಾರ್ಡನ್ಗಳಲ್ಲಿ ಕೆಲಸ ಮಾಡ್ತಿದ್ದರು.
-
Assam | 13 people died in Dibrugarh after consuming wild poisonous mushrooms over the period of one week
— ANI (@ANI) April 13, 2022 " class="align-text-top noRightClick twitterSection" data="
39 patients were admitted here, mostly with kidney and liver complications. 13 patients have died so far, all are from garden areas:Dr Prasanta Dihingia, Superintendent, AMCH pic.twitter.com/zlW9D5afwg
">Assam | 13 people died in Dibrugarh after consuming wild poisonous mushrooms over the period of one week
— ANI (@ANI) April 13, 2022
39 patients were admitted here, mostly with kidney and liver complications. 13 patients have died so far, all are from garden areas:Dr Prasanta Dihingia, Superintendent, AMCH pic.twitter.com/zlW9D5afwgAssam | 13 people died in Dibrugarh after consuming wild poisonous mushrooms over the period of one week
— ANI (@ANI) April 13, 2022
39 patients were admitted here, mostly with kidney and liver complications. 13 patients have died so far, all are from garden areas:Dr Prasanta Dihingia, Superintendent, AMCH pic.twitter.com/zlW9D5afwg
ಬೇಸಿಗೆ ಸಂದರ್ಭದಲ್ಲಿ ಅಸ್ಸೋಂನ ವಿವಿಧ ಪ್ರದೇಶದ ಕಾಡುಗಳಲ್ಲಿ ಹೆಚ್ಚಾಗಿ ಅಣಬೆ ಬೆಳೆಯುತ್ತವೆ. ಅವುಗಳನ್ನು ಸೇವಿಸಿರುವ ಪರಿಣಾಮ ಎಲ್ಲರೂ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಇವರಲ್ಲಿ 13 ಜನರು ಸಾವನ್ನಪ್ಪಿದ್ದಾರೆ.