ಜೈಪುರ (ರಾಜಸ್ಥಾನ): ರಾಜಸ್ಥಾನದ ಉದಯಪುರವನ್ನು ಲೇಕ್ ಸಿಟಿ ಎಂದು ಕರೆಯಲಾಗುತ್ತದೆ. ಇಲ್ಲಿ ಏಷ್ಯಾದ ಎರಡನೇ ಅತಿ ದೊಡ್ಡ ಕೃತಕ ಕೆರೆಯನ್ನು ನಿರ್ಮಿಸಲಾಗಿದೆ.
ಅದುವೇ ಉದಯಪುರ ಜಿಲ್ಲಾ ಕೇಂದ್ರದಿಂದ 48 ಕಿಲೋಮೀಟರ್ ದೂರದಲ್ಲಿರುವ ಜೈಸಮಂದ್ ಸರೋವರ. ಇದು ಏಷ್ಯಾದ ಎರಡನೇ ಅತಿದೊಡ್ಡ ಕೆರೆಯೂ ಹೌದು. ಈ ಸರೋವರವನ್ನು 1687 ಮತ್ತು 1691ರ ನಡುವೆ ನಿರ್ಮಿಸಲಾಯಿತು.
ಈ ಸರೋವರದ ಮೂಲ ಹೆಸರು ದೇಬರ್ ಅಂತ. ಎರಡು ಬೆಟ್ಟಗಳ ನಡುವೆ ಈ ದೇಬರ್ ನಿರ್ಮಾಣಗೊಂಡಿದೆ. ಈ ಸರೋವರವನ್ನು ರಾಜಾ ಮಹಾರಾಣ ಜೈಸಿಂಗ್ ನಿರ್ಮಿಸಿದ್ದಾರೆ. ಆದ್ದರಿಂದ ಈ ಸರೋವರವನ್ನು ಅವರ ಹೆಸರಿನಲ್ಲಿಯೇ ಜೈಸಮಂದ್ ಕೆರೆ ಎಂದು ಕರೆಯಲು ಪ್ರಾರಂಭಿಸಿದರು.
ಈ ಸಿಹಿನೀರಿನ ಸರೋವರದಲ್ಲಿ 7 ದ್ವೀಪಗಳಿವೆ. ಈ ಸರೋವರವು 36 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಇದು 14 ಕಿಲೋಮೀಟರ್ ಉದ್ದ ಮತ್ತು 9 ಕಿಲೋಮೀಟರ್ ಅಗಲಕ್ಕೆ ವಿಸ್ತರಿಸಿದೆ. ಇಲ್ಲಿ ಗೋಮತಿ, ಜಾವರಿ ಸೇರಿದಂತೆ 9 ನದಿಗಳು ಮತ್ತು 99 ತೊರೆಗಳ ನೀರು ಬರುತ್ತದೆ.
ಇಲ್ಲಿ ನಿರ್ಮಿಸಲಾದ ಅಣೆಕಟ್ಟು ವಾಸ್ತುಶಿಲ್ಪದ ದೃಷ್ಟಿಕೋನದಿಂದ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಇದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಸರೋವರದಲ್ಲಿ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ.
ಈ ಸರೋವರದ ದಕ್ಷಿಣ ಭಾಗದಲ್ಲಿರುವ ಬೆಟ್ಟಗಳ ಮೇಲೆ ಮಹಾರಾಣಾ ಫತಾಹ್ ಸಿಂಗ್ ಅರಮನೆಗಳನ್ನು ನಿರ್ಮಿಸಿದರು. ಇಲ್ಲಿ ನಿರ್ಮಿಸಲಾದ ಹವಾ ಮಹಲ್ ಮತ್ತು ರೂತಿ ರಾಣಿಯ ಅರಮನೆ ಬಹಳ ಪ್ರಸಿದ್ಧವಾಗಿದೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಜೈಸಮಂದ್ ಸರೋವರವನ್ನು ನೋಡಲು ಇಲ್ಲಿಗೆ ಬರುತ್ತಾರೆ.
ಜೈಸಮಂದ್ ಸರೋವರದ ದಡದಲ್ಲಿ ವನ್ಯಜೀವಿ ಅಭಯಾರಣ್ಯವೂ ಇದೆ. ಸರೋವರದಲ್ಲಿ ದೋಣಿ ಕಾರ್ಯಾಚರಣೆಯೂ ಇದೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ಕೆರೆಯ ನೋಟ ರಮಣೀಯವಾಗಿದೆ.