ETV Bharat / bharat

ಅಷ್ಟವಕ್ರಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ವೈದ್ಯೆ: ಗಿನ್ನಿಸ್​​ ರೆಕಾರ್ಡ್​ ಸೇರಲು ಸಜ್ಜು - ವೈದ್ಯೆ ಪ್ರಿಯಾ ಅಹುಜಾ

ಹರಿದ್ವಾರದ ವೈದ್ಯೆ ಪ್ರಿಯಾ ಅಹುಜಾ ಯೋಗದ ಎಂಟು ಕೋನದ ಭಂಗಿ ಅಂದರೆ ಅಷ್ಟಾವಕ್ರಾಸನ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

doctor Priya Ahuja
ವೈದ್ಯೆ ಪ್ರಿಯಾ ಅಹುಜಾ
author img

By

Published : Jun 15, 2022, 9:15 AM IST

ಹರಿದ್ವಾರ(ಉತ್ತರಾಖಂಡ): ಹರಿದ್ವಾರದ ವೈದ್ಯೆ ಡಾ.ಪ್ರಿಯಾ ಅಹುಜಾ, 3 ನಿಮಿಷ 29 ಸೆಕೆಂಡ್​​​ಗಳ ಕಾಲ ಅಷ್ಟವಕ್ರಾಸನ(ಯೋಗದ ಎಂಟು ಕೋನದ ಭಂಗಿ) ಮಾಡಿ ವಿಶ್ವ ದಾಖಲೆ ಪಟ್ಟಿಗೆ ಸೇರಲು ಸಜ್ಜಾಗಿದ್ದಾರೆ. ಪ್ರಿಯಾ ಅಹುಜಾ ಅವರು ಈ ಹಿಂದೆ ಯೋಗಾಸನ ಗಿನ್ನಿಸ್ ವಿಶ್ವ ದಾಖಲೆಯಲ್ಲಿ 2 ನಿಮಿಷ 6 ಸೆಕೆಂಡುಗಳ ದಾಖಲೆ ಮುರಿದಿದ್ದಾರೆ. 3 ನಿಮಿಷ 29 ಸೆಕೆಂಡುಗಳ ಕಾಲ ಅಷ್ಟಾವಕ್ರಾಸನ ಯೋಗಾಸನ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

doctor Priya Ahuja
ವೈದ್ಯೆ ಪ್ರಿಯಾ ಅಹುಜಾ

'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌'ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು. ಈಗ ಅದು ಈಡೇರುತ್ತಿದೆ. ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ನಾನು ಬಯಸುತ್ತೇನೆ. ಎರಡು ಮಕ್ಕಳ ತಾಯಿಯಾದ ನಾನು ಈ ಕಠಿಣ ದಾಖಲೆ ಮುರಿಯಲು ಏಳು ವರ್ಷಗಳಿಂದ ತಯಾರಿ ನಡೆಸುತ್ತಿದ್ದೆ. ಇದಕ್ಕೆ ಇಡೀ ಕುಟುಂಬದ ಬೆಂಬಲವಿದೆ ಎನ್ನುತ್ತಾರೆ ಪ್ರಿಯಾ ಅಹುಜಾ.

ಹರಿದ್ವಾರದ ಗುರುಕುಲ ಕಾಂಗ್ರಿಯ ಪ್ರಸಿದ್ಧ ಯೋಗಾಚಾರ್ಯ ಬಲ್ಯಾನ್ ಮಾತನಾಡಿ, ಈ ಹಿಂದೆ ಈ ದಾಖಲೆಯನ್ನು ಭಾಗ್ಯಶ್ರೀ ಎಂಬುವವರು ಮಾಡಿದ್ದರು. ಇದು 2 ನಿಮಿಷ 6 ಸೆಕೆಂಡುಗಳವರೆಗೆ ಈ ದಾಖಲೆ ಇತ್ತು. ಇಂದು ಅದನ್ನು ಪ್ರಿಯಾ ಅಹುಜಾ ಮುರಿದಿದ್ದಾರೆ ಎಂದರು.

ಅಷ್ಟವಕ್ರಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ವೈದ್ಯೆ ಪ್ರಿಯಾ ಅಹುಜಾ

ಅಷ್ಟವಕ್ರಾಸನ: ಅಷ್ಟವಕ್ರಾಸನವು ಒಂದು ಸಂಕೀರ್ಣವಾದ ಯೋಗಾಸನ. ಇದನ್ನು ಸಾಮಾನ್ಯವಾಗಿ ಯೋಗ ಬೋಧಕರ ಸಹಾಯದಿಂದ ಅಭ್ಯಾಸ ಮಾಡಲಾಗುತ್ತದೆ. ಈ ಯೋಗಾಸನದಲ್ಲಿ, ದೇಹದ ಸ್ನಾಯುಗಳ ಶಕ್ತಿ ಮತ್ತು ದೈಹಿಕ ಸಮತೋಲನದ ಅಗತ್ಯವಿದೆ. ಇಂಗ್ಲಿಷಿನಲ್ಲಿ ಇದನ್ನು 'Eight Angle Pose' ಎನ್ನುತ್ತಾರೆ.

ಅಷ್ಟವಕ್ರಾಸನ ಭಂಗಿ ಕುಳಿತುಕೊಳ್ಳುವ ಭಂಗಿಯಿಂದ ಆರಂಭವಾಗುತ್ತದೆ. ಒಂದು ಕೈ ಪಾದಗಳ ನಡುವೆ ನಿಂತಿದೆ. ಇನ್ನೊಂದು ಪಾದದ ಹೊರಭಾಗದಲ್ಲಿ ಮತ್ತು ಅಂಗೈಗಳು ನೆಲದ ಮೇಲೆ ಇರುತ್ತವೆ. ನೆಲದಿಂದ ಎರಡೂ ಪಾದಗಳನ್ನು ಎತ್ತುವ ಮೂಲಕ ವಿಭಿನ್ನ ಅಥವಾ ಆರಂಭಿಕ ಸ್ಥಾನವನ್ನು ನೀಡಲಾಗುತ್ತದೆ. ಎರಡೂ ಕಾಲುಗಳು ಬಾಗುತ್ತದೆ, ಒಂದು ಕಾಲು ಒಂದು ಮುಂದೋಳಿನ ಮೇಲೆ ಇದೆ. ಕಾಲುಗಳನ್ನು ನೇರಗೊಳಿಸಿದಾಗ ಪೂರ್ಣ ಭಂಗಿಯನ್ನು ನೀಡುತ್ತದೆ.

ದಂತಕಥೆ ಏನು ಹೇಳುತ್ತದೆ: ಯೋಗದಲ್ಲಿ ವಿವರಿಸಲಾದ 'ಅಷ್ಟವಕ್ರಾಸನ' ಅಭ್ಯಾಸವು ದೇಹದ ಎಂಟು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟವಕ್ರಾಸನ ಎಂಬ ಸಂಸ್ಕೃತ ಪದದ ಅರ್ಥ ಎಂಟು + ವಕ್ರ + ಭಂಗಿ. ಅಂದರೆ ಎಂಟು ಸ್ಥಳಗಳಿಂದ ವಕ್ರವಾದ ದೇಹ ರಚನೆ. ಅಷ್ಟವಕ್ರಸನವನ್ನು ಮಹಾನ್ ಋಷಿ 'ಅಷ್ಟವಕ್ರ' ರಚಿಸಿದ. ವಾಸ್ತವವಾಗಿ, ಅಷ್ಟವಕ್ರ ಎಂಟು ದೈಹಿಕ ದೌರ್ಬಲ್ಯಗಳೊಂದಿಗೆ ಜನಿಸಿದನು. ಈತ ಸೀತೆಯ ತಂದೆ ಜನಕನ ಆಧ್ಯಾತ್ಮಿಕ ಗುರು.

ಮಹರ್ಷಿ ಪತಂಜಲಿಯಿಂದ ಆರಂಭ: ಯೋಗದ ಅಷ್ಟವಕ್ರಾಸನವನ್ನು ಬಹಳ ಕಷ್ಟಕರ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡಲು ಕಠಿಣ ಅಭ್ಯಾಸದ ಅಗತ್ಯವಿದೆ. ಮಹರ್ಷಿ ಪತಂಜಲಿ ಯೋಗದ ಅಷ್ಟವಕ್ರಾಸನವನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ.

ಮಹರ್ಷಿ ಪತಂಜಲಿ ಯಾರು?: ಮಹರ್ಷಿ ಪತಂಜಲಿ ಯೋಗದ 195 ಸೂತ್ರಗಳನ್ನು ಪ್ರತಿಪಾದಿಸಿದರು. ಇದನ್ನು ಯೋಗ ತತ್ತ್ವಶಾಸ್ತ್ರದ ಆಧಾರ ಸ್ತಂಭಗಳೆಂದು ಪರಿಗಣಿಸಲಾಗಿದೆ. ಈ ಸೂತ್ರಗಳನ್ನು ಓದುವುದನ್ನು ಭಾಷ್ಯ ಎಂದು ಕರೆಯಲಾಗುತ್ತದೆ. ನಂಬಿಕೆ, ಮೂಢನಂಬಿಕೆ ಮತ್ತು ಧರ್ಮದ ಹೊರತಾಗಿ ಯೋಗಕ್ಕೆ ವ್ಯವಸ್ಥಿತ ರೂಪ ನೀಡಿದ ಮೊದಲ ಮತ್ತು ಏಕೈಕ ವ್ಯಕ್ತಿ ಪತಂಜಲಿ.

ಮಹರ್ಷಿ ಪತಂಜಲಿ ಅವರು ಆರೋಗ್ಯಪೂರ್ಣ ಜೀವನಕ್ಕೆ ಪ್ರಮುಖ ಎಂದು ಪರಿಗಣಿಸಲಾದ ಅಷ್ಟಾಂಗ ಯೋಗದ ಮಹಿಮೆಯನ್ನು ತಿಳಿಸಿದರು. ಅಷ್ಟಾಂಗ ಯೋಗ ಎಂದರೆ..

  • ಯಮ
  • ನಿಯಮ
  • ಆಸನ
  • ಪ್ರಾಣಾಯಾಮ
  • ಪ್ರತ್ಯಾಹಾರ
  • ಧಾರಣ
  • ಧ್ಯಾನ
  • ಸಮಾಧಿ

ಈ ಮೇಲಿನ ಯೋಗಗಳು ತಮ್ಮದೇ ಆದ ಉಪ-ಭಾಗಗಳನ್ನು ಹೊಂದಿವೆ. ಪ್ರಸ್ತುತ ಯೋಗದ ಕೇವಲ 3 ಭಾಗಗಳು ಚಾಲ್ತಿಯಲ್ಲಿವೆ. ಅವುಗಳೆಂದರೆ..

  • ಆಸನ
  • ಪ್ರಾಣಾಯಾಮ
  • ಧ್ಯಾನ.

ಭಗವಾನ್ ಶಿವ ಮೊದಲ ಮಹಾಯೋಗಿ: ಯೋಗದ ಸಂಪ್ರದಾಯವು ಸಾವಿರಾರು ವರ್ಷಗಳಿಂದ ಭಾರತದಲ್ಲಿ ನಡೆದುಕೊಂಡು ಬಂದಿದೆ. ಯೋಗ ತತ್ತ್ವಶಾಸ್ತ್ರದ ಪ್ರವರ್ತಕ ಮಹರ್ಷಿ ಪತಂಜಲಿಯಿಂದ 'ಯೋಗ ಸೂತ್ರ' ರಚಿಸುವ ಮೊದಲು ಭಾರತದಲ್ಲಿ ಯೋಗ ಇತ್ತು. ಭಾರತೀಯ ಸಂಸ್ಕೃತಿಯಲ್ಲಿ ಶಿವನನ್ನು ಮೊದಲ ಮಹಾಯೋಗಿ ಎಂದು ಪರಿಗಣಿಸಲಾಗಿದೆ.

ಅಷ್ಟವ್ರಕಾಸನದ ಪ್ರಯೋಜನಗಳು: ಅಷ್ಟವ್ರಕಾಸನವು ಅತ್ಯಂತ ಪ್ರಯೋಜನಕಾರಿ ಆಸನವಾಗಿದ್ದು, ಅದು ದೇಹದ ಅನೇಕ ಭಾಗಗಳಲ್ಲಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಆ ಅಂಗಗಳು ಬಲವಾಗಿರುವುದು ಮಾತ್ರವಲ್ಲ, ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಷ್ಟಾವಕ್ರಾಸನ ಮಾಡುವಾಗ ಒಂದಲ್ಲ ಎರಡಲ್ಲ ಹಲವು ಸ್ನಾಯುಗಳು ಏಕಕಾಲದಲ್ಲಿ ವ್ಯಾಯಾಮ ಮಾಡುವುದರಿಂದ ಅವುಗಳ ಶಕ್ತಿ ಹೆಚ್ಚುತ್ತದೆ. ಇದರೊಂದಿಗೆ ದೇಹವು ಉತ್ತಮ ಆಕಾರವನ್ನು ಪಡೆಯುತ್ತದೆ. ಇದು ಭುಜಗಳ ಜೊತೆಗೆ ಎದೆ, ಸೊಂಟ, ಮೊಣಕಾಲು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ದೇಹದ ವಾಸನೆ ನಿಯಂತ್ರಣಕ್ಕೆ ಏನೆಲ್ಲಾ ಮಾಡಬಹುದು? ಏನಿದು ಬೆವರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.