ETV Bharat / bharat

ರಾಷ್ಟ್ರೀಯ ಲಾಂಛನ ವಿವಾದ: ಹೊಸ ಸಂಸತ್ ಭವನದಲ್ಲಿನ ಸಿಂಹಗಳ ಬಗ್ಗೆ ಯಾಕಿಷ್ಟು ಪ್ರಶ್ನೆ?

author img

By

Published : Jul 12, 2022, 10:53 PM IST

Updated : Jul 12, 2022, 10:58 PM IST

ಅಶೋಕನ ಕಾಲದಲ್ಲಿನ ಸಿಂಹಗಳ ನೋಟಕ್ಕಿಂತ ಸದ್ಯ ನೂತನ ಸಂಸತ್ ಭವನದಲ್ಲಿ ಲೋಕಾರ್ಪಣೆಯಾಗಿರುವ ರಾಷ್ಟ್ರೀಯ ಲಾಂಛದಲ್ಲಿರುವ ಸಿಂಹಗಳ ನೋಟ ವಿಭಿನ್ನವಾಗಿದೆ. ಇದನ್ನೇ ಗುರಿಯಾಗಿಸಿಕೊಂಡಿರುವ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಘರ್ಜಿಸಲು ಮುಂದಾಗಿವೆ .

There has been a debate about this national symbol that these lions are different from the lions of Sarnath and Sanchi

ಹೈದರಾಬಾದ್: ನೂತನ ಸಂಸತ್ ಭವನದ ಮೇಲ್ಛಾವಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನ ಸದ್ಯ ವಿವಾದಕ್ಕೆ ಗುರಿಯಾಗಿದೆ. ಅಶೋಕನ ಲಾಂಛನದ ಆಕರ್ಷಕ ಮತ್ತು ಭವ್ಯ ನೋಟದ ಸಿಂಹಗಳ ಬದಲಿಗೆ ಘರ್ಜಿಸುತ್ತಿರುವ ಸಿಂಹಗಳನ್ನು ಚಿತ್ರಿಸುವ ಮೂಲಕ ಸರ್ಕಾರವು ರಾಷ್ಟ್ರೀಯ ಲಾಂಛನದ ನೋಟವನ್ನೇ ಬದಲಾಯಿಸುತ್ತಿದೆ ಎಂಬುದು ವಿರೋಧ ಪಕ್ಷಗಳ ಗಂಭೀರ ಆರೋಪ. ಕೂಡಲೇ ಇದನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿರೋಧ ಪಕ್ಷಗಳ ಆರೋಪವೇನು?: ಅಶೋಕನ ಕಾಲದಲ್ಲಿನ ಸಿಂಹಗಳ ನೋಟಕ್ಕಿಂತ ಪ್ರಸ್ತುತ ಸಿಂಹಗಳ ನೋಟ ವಿಭಿನ್ನವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಅವರ ಪ್ರಕಾರ, ಇದನ್ನು ಆಕ್ರಮಣಕಾರಿ ಭಂಗಿಯಲ್ಲಿ ಮಾಡಲಾಗಿದೆ ಎಂದು ಟ್ವೀಟ್‌ನಲ್ಲಿ ದೂರಿದ್ದಾರೆ. ಇನ್ನು ನೂತನ ಸಂಸತ್ ಭವನದಲ್ಲಿ ರಾಷ್ಟ್ರೀಯ ಲಾಂಛನ ಅನಾವರಣಕ್ಕೆ ಪ್ರತಿಪಕ್ಷಗಳನ್ನು ಆಹ್ವಾನಿಸದಿರುವುದು ಪ್ರಜಾಸತ್ತಾತ್ಮಕವಲ್ಲ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅದರ ಮೇಲೆ ಸತ್ಯಮೇವ ಜಯತೆ ಎಂದು ಬರೆಯದಿರುವುದು ಕೂಡ ದೊಡ್ಡ ತಪ್ಪು. ಅದನ್ನು ಈಗಲೂ ಸರಿಪಡಿಸಬಹುದು ಎಂದು ಹೇಳಿದೆ.

  • Thread for the neo-experts, who have recently discovered their love for the national emblem… https://t.co/WmbONkYEmy

    — Amit Malviya (@amitmalviya) July 12, 2022 " class="align-text-top noRightClick twitterSection" data=" ">

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟ್ವೀಟ್ ಮಾಡಿ, ನರೇಂದ್ರ ಮೋದಿ ಜೀ, ದಯವಿಟ್ಟು ಸಿಂಹದ ಮುಖವನ್ನು ನೋಡಿ. ಇದು ಮಹಾನ್ ಸಾರನಾಥದ ಪ್ರತಿಮೆಯೋ ಅಥವಾ ಗಿರ್ ಸಿಂಹದ ವಿಕಾರ ರೂಪವೋ? ದಯವಿಟ್ಟು ಅದನ್ನು ನೋಡಿ, ಬೇಕಾದರೆ ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಪ್ರತಿಕ್ರಿಯಿಸಿ, ನಮ್ಮ ರಾಷ್ಟ್ರೀಯ ಲಾಂಛನಕ್ಕೆ ಅವಮಾನವಾಗಿದೆ. ಅಶೋಕನ ಕಾಲದಲ್ಲಿ ಚಿತ್ರಿಸಲಾದ ಭವ್ಯವಾದ ಸಿಂಹಗಳು ಇಲ್ಲ, ಬದಲಾಗಿ ಘರ್ಜಿಸುವ, ಅನಗತ್ಯವಾಗಿ ಕೋಪಗೊಂಡ ಮತ್ತು ವಿಚಿತ್ರ ಆಕಾರದ ಸಿಂಹಗಳನ್ನು ಚಿತ್ರಿಸಲಾಗಿದೆ. ಇದು ನಾಚಿಕೆಗೇಡು. ತಕ್ಷಣ ಅದನ್ನು ಬದಲಾಯಿಸಿ ಎಂದು ಆಗ್ರಹ ಮಾಡಿದ್ದಾರೆ.

  • मैं 130 करोड़ भारतवासियों से पूछना चाहता हूँ राष्ट्रीय चिन्ह बदलने वालों को “राष्ट्र विरोधी”बोलना चाहिये की नही बोलना चाहिये। https://t.co/JxhsROGMRi

    — Sanjay Singh AAP (@SanjayAzadSln) July 11, 2022 " class="align-text-top noRightClick twitterSection" data=" ">

ಇತಿಹಾಸಕಾರ ಎಸ್ ಇರ್ಫಾನ್ ಹಬೀಬ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ರಾಷ್ಟ್ರೀಯ ಲಾಂಛನವನ್ನು ಹಾಳು ಮಾಡುವುದು ಸಂಪೂರ್ಣವಾಗಿ ಅನಗತ್ಯ ಮತ್ತು ಅದನ್ನು ತಪ್ಪಿಸಬೇಕು. ನಮ್ಮ ಸಿಂಹಗಳು ಏಕೆ ತುಂಬಾ ಉಗ್ರವಾಗಿ ಮತ್ತು ಚಂಚಲವಾಗಿ ಕಾಣುತ್ತಿವೆ? ಎಂದು ಪ್ರಶ್ನಿಸಿದ್ದಾರೆ.

ಹಿರಿಯ ವಕೀಲ ಮತ್ತು ಹೋರಾಟಗಾರ ಪ್ರಶಾಂತ್ ಭೂಷಣ್ ಮಾತನಾಡಿ, ಗಾಂಧಿಯಿಂದ ಗೋಡ್ಸೆಯವರೆಗೆ ನಮ್ಮ ರಾಷ್ಟ್ರೀಯ ಲಾಂಛನವಾದ ಸಿಂಹಗಳು ಆಕರ್ಷಕವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್ ವಿಸ್ಟಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನದ ಛಾವಣಿಯ ಮೇಲೆ ಹಲ್ಲುಗಳನ್ನು ತೋರಿಸುವ ಸಿಂಹಗಳ ಹೊಸ ರಾಷ್ಟ್ರೀಯ ಲಾಂಛನ. ಇದು ಮೋದಿಯವರ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.

  • To completely change the character and nature of the lions on Ashoka's pillar at Sarnath is nothing but a brazen insult to India’s National Symbol! pic.twitter.com/JJurRmPN6O

    — Jairam Ramesh (@Jairam_Ramesh) July 12, 2022 " class="align-text-top noRightClick twitterSection" data=" ">

ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ, ಸಂಸತ್ ಭವನದ ಮೇಲಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣ ಮಾಡಬಾರದಿತ್ತು. ಪ್ರಧಾನಿಯವರು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ. ಇನ್ನು ಎಎಪಿ ಸಂಸದ ಸಂಜಯ್ ಸಿಂಗ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಂವಿಧಾನಿಕ ಪರಂಪರೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಬಿಜೆಪಿ ಸಮರ್ಥನೆ ಏನು?: ಮೂಲ ಮತ್ತು ಈ ವಿಗ್ರಹಕ್ಕೆ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವೀಯ ಹೇಳಿದ್ದಾರೆ. ಪ್ರತಿಪಕ್ಷಗಳು ಮುದ್ರಿತ 2ಡಿ ಮಾದರಿಯನ್ನು ನೋಡಿದ್ದು, ಈಗ ಅದನ್ನು 3ಡಿ ಅಂಕಿ ಅಂಶದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಸಂಪೂರ್ಣ ದಾರಿ ತಪ್ಪಿವೆ ಎಂದಿದ್ದಾರೆ. ಕಾಳಿ ದೇವಿಯನ್ನು ಗೌರವಿಸಲಾಗದವರು ಅಶೋಕ ಸ್ತಂಭವನ್ನು ಹೇಗೆ ಗೌರವಿಸುತ್ತಾರೆ? ವಿರೋಧ ಪಕ್ಷಗಳ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ ಹೇಳಿದ್ದಾರೆ.

  • They made Smiling Hanuman Ji into Angry Hanuman, now have turned Lions of Ashoka into Angry and Ugly! https://t.co/ArnX4Ad0vc

    — Ashok Swain (@ashoswai) July 12, 2022 " class="align-text-top noRightClick twitterSection" data=" ">

ಶಿಲ್ಪಿ ಹೇಳುವುದೇನು?: ಈ ವಿಗ್ರಹವನ್ನು ತಯಾರಿಸಿದ ಕಲಾವಿದನ ಹೇಳಿಕೆ ಮಾಧ್ಯಮ ವರದಿಯಲ್ಲಿ ಹೊರಬಿದ್ದಿದೆ. ವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ಈ ಪ್ರತಿಮೆಯ ಬಗ್ಗೆ ನನಗೆ ಯಾರಿಂದಲೂ ಮಾಹಿತಿ ಬಂದಿಲ್ಲ ಅಥವಾ ಬಿಜೆಪಿಯಿಂದ ನಾನು ನೇರವಾಗಿ ಗುತ್ತಿಗೆ ಪಡೆದಿಲ್ಲ. ಸುನಿಲ್ ಡಿಯೋರ್ ಎಂಬ ಶಿಲ್ಪಿ ಟಾಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರತಿಯನ್ನು ತನಗೆ ಹಸ್ತಾಂತರಿಸಿದ್ದು, ಅದೇ ರೀತಿ ನಾನು ನಿರ್ಮಾಣ ಮಾಡಿದ್ದೇನೆ ಎಂದಿದ್ದಾರೆ.

ಹೊಸ ವಿಗ್ರಹದ ವಿಶೇಷತೆ ಏನು?: ಆರೂವರೆ ಮೀಟರ್​ ಇರುವ ಈ ವಿಗ್ರಹವನ್ನು ಕಂಚಿನಿಂದ ಮಾಡಲಾಗಿದೆ. ಇದರ ತೂಕ 9,500 ಕೆಜಿ. ಅದಕ್ಕೆ ಆಧಾರವಾಗಿ 6,500 ಕೆಜಿ ಉಕ್ಕನ್ನು ಬಳಸಲಾಗಿದೆ. 100 ಕ್ಕೂ ಹೆಚ್ಚು ಕುಶಲಕರ್ಮಿಗಳು ಇದಕ್ಕೆ ಕೆಲಸ ಮಾಡಿದ್ದಾರೆ.

ಹಿನ್ನೆಲೆ ಏನು?: ಅಶೋಕ ಚಕ್ರವರ್ತಿ ಮೌರ್ಯರ ಕಾಲದ ಅತ್ಯಂತ ಶಕ್ತಿಶಾಲಿ ಚಕ್ರವರ್ತಿ. ಅವರನ್ನು ಚಕ್ರವರ್ತಿ ಎಂದು ಕರೆಯಲಾಯಿತು. ಅವರ ಆಳ್ವಿಕೆಯು ಇಂದಿನ ಅಫ್ಘಾನಿಸ್ತಾನ, ಬಲೂಚಿಸ್ತಾನ್ ಮತ್ತು ಇರಾನ್‌ನ ಭಾಗಗಳಿಗೆ ವಿಸ್ತರಿಸಿತ್ತು, ದಕ್ಷಿಣದಲ್ಲಿ ಮೈಸೂರಿನವರೆಗೂ ವ್ಯಾಪ್ತಿ ಹೊಂದಿದ್ದರು. ಅಶೋಕ ಸ್ತಂಭವನ್ನು ಚಕ್ರವರ್ತಿ ಅಶೋಕನ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ.

'ರಾಜನ ಕಣ್ಣು ನಿನ್ನ ಮೇಲಿದೆ, ಬಂಡಾಯದ ಯೋಚನೆ ಬೇಡ' ಎಂಬುದೇ ಅದರ ನೇರ ಸಂದೇಶವಾಗಿತ್ತು. ವೈಶಾಲಿ ಮತ್ತು ಲೌರಿಯಾದಲ್ಲಿ ನಿರ್ಮಿಸಲಾದ ಕಂಬಗಳು ಸಾರನಾಥ ಮತ್ತು ಸಾಂಚಿಯಲ್ಲಿರುವ ಕಂಬಗಳಿಗಿಂತ ಸ್ವಲ್ಪ ಭಿನ್ನವಾಗಿವೆ ಎಂದು ನಂಬಲಾಗಿದೆ. ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇ ಇದಕ್ಕೆ ಕಾರಣ. ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ, ಅಶೋಕ ಸಾರನಾಥ ಮತ್ತು ಸಾಂಚಿಯಲ್ಲಿ ಶಾಂತಿಯುತ ಭಂಗಿಯಲ್ಲಿ ಸಿಂಹಗಳನ್ನು ಪ್ರತಿಷ್ಠಾಪನೆ ಮಾಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಅವರಿಗೆ ಮುರುಘಾ ಮಠದಿಂದ ಜಯದೇವ ಶ್ರೀ ಪ್ರಶಸ್ತಿ ಪ್ರದಾನ

Last Updated : Jul 12, 2022, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.