ETV Bharat / bharat

ಅತ್ಯಾಚಾರ ಕೇಸ್​ನಲ್ಲಿ ಜೈಲು ಪಾಲಾದ ಅಸಾರಾಂ ಬಾಪೂಗೆ ಕೊರೊನಾ: ಐಸಿಯುನಲ್ಲಿ ಚಿಕಿತ್ಸೆ!

author img

By

Published : May 6, 2021, 11:14 AM IST

Updated : May 6, 2021, 11:34 AM IST

ಈ ವರ್ಷದ ಫೆಬ್ರವರಿಯಲ್ಲಿ ಎದೆನೋವು ಕಂಡುಬಂದ ನಂತರ ಅಸಾರಾಂ ಬಾಪೂ ಅವರನ್ನು ಜೋಧಪುರದ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸಾರಾಂ ಬಾಪು 2013ರ ಆಗಸ್ಟ್ 15ರ ರಾತ್ರಿ ಜೋಧ್‌ಪುರ ಸಮೀಪದ ಮನೈ ಪ್ರದೇಶದಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣದಡಿ ಬಂಧಿಸಲಾಗಿತ್ತು.

Asaram Bapu
Asaram Bapu

ಜೋಧ್‌ಪುರ: ಸ್ವಯಂಘೋಷಿತ ದೇವಮಾನವ ಮತ್ತು ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಅಸಾರಾಂ ಬಾಪೂಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಎದೆನೋವು, ಚಡಪಡಿಕೆ ಮತ್ತು ಇತರ ಕಾಯಿಲೆಗಳಿಂದಾಗಿ ಐಸಿಯು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಬಾಪೂ ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಅವರ ಎಸ್‌ಪಿಒ ಮಟ್ಟ 90ಕ್ಕಿಂತ ಕಡಿಮೆ ಇದೆ. ಪ್ರಸ್ತುತ, ಅವರು ಜೋಧಪುರದ ಎಂಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.

ಅವರ ಆರೋಗ್ಯದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಕೂಡಲೇ ಅನುಯಾಯಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Last Updated : May 6, 2021, 11:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.