ETV Bharat / state

ಹುಬ್ಬಳ್ಳಿ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು ನೀಡಿದ ಲೇಡಿ ಪಿಎಸ್ಐ - firing on accused - FIRING ON ACCUSED

ಕೃತ್ಯವೊಂದಕ್ಕೆ ಸಂಬಂಧಿಸಿ ಆರೋಪಿಯು ಪೊಲೀಸರ ಬಳಿ ಇತರ ಆರೋಪಿಗಳನ್ನು ತೋರಿಸುವುದಾಗಿ ಸ್ಥಳಕ್ಕೆ ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಕಳ್ಳತನ ಪ್ರಕರಣದ ಆರೋಪಿ ಮೇಲೆ ಮಹಿಳಾ ಪಿಎಸ್​ಐ ಗುಂಡು ಹಾರಿಸಿದ್ದಾರೆ.

ಆರೋಪಿ ಕಾಲಿಗೆ ಶೂಟ್
ಆರೋಪಿ ಕಾಲಿಗೆ ಶೂಟ್ (ETV Bharat)
author img

By ETV Bharat Karnataka Team

Published : Sep 23, 2024, 7:00 PM IST

ಹುಬ್ಬಳ್ಳಿ: ಕಳ್ಳತನ ಪ್ರಕರಣದ ತನ್ನ ಸಹಚರರನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಳ್ಳತನದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ತಾರಿಹಾಳ ಬಳಿ ಸೋಮವಾರ ನಡೆದಿದೆ.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಬೆಂಡಿಗೇರಿ ಎಂಬಾತನನ್ನು ಭಾನುವಾರ ಬಂಧಿಸಲಾಗಿತ್ತು. ಇಂದು ಇತರ ಆರೋಪಿಗಳನ್ನು ತಾರಿಹಾಳ ಸೇತುವೆಯ ಬಳಿ ತೋರಿಸಲು ತನಿಖಾ ತಂಡವನ್ನು ಕರೆದುಕೊಂಡು ಹೋದಾಗ ಆರೋಪಿ ವಿನೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬೆಂಡಿಗೇರಿ ಠಾಣೆಯ ಪೊಲೀಸ್ ಸಬ್​ ಇನ್ಸ್​ಪೆಕ್ಟರ್ ಜಯಶ್ರೀ ಚಲವಾದಿ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸ್ ಕಮಿಷನರ್​ ಎನ್​. ಶಶಿಕುಮಾರ್ ಮಾಹಿತಿ (ETV Bharat)

ಕೆಎಂಸಿಗೆ ಭೇಟಿ‌ ನೀಡಿದ ಪೊಲೀಸ್ ಕಮಿಷನರ್​ ಎನ್​. ಶಶಿಕುಮಾರ್​ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದರು. "ಹುಬ್ಬಳ್ಳಿ - ಧಾರವಾಡ ಕಮಿಷನರೇಟ್​ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನಜಾವ ಸುಮಾರು ಮೂರು ಗಂಟೆಗೆ ಅಪರಾಧ​ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂರರಿಂದ ನಾಲ್ಕು ಜನ ಹೊರವಲಯದಲ್ಲಿದ್ದಂತಹ ಟ್ರಕ್​ನ್ನು ಅಡ್ಡಗಟ್ಟಿ ​ನಿಲ್ಲಿಸಿ ಆ ಚಾಲಕನಿಂದ ಮೊಬೈಲ್​, 20 ಸಾವಿರ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ದರೋಡೆ ಟೀಂ ನಲ್ಲಿ 7 ರಿಂದ 8 ಜನರಿದ್ದಾರೆ. ಅವರಲ್ಲಿ ಮೂವರನ್ನು ನಮ್ಮ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಬೆಂಡಿಗೇರಿ ಪೊಲೀಸ್​ ಠಾಣೆ ವ್ಯಾಪ್ತಿಯ ಆರೋಪಿಗಳಾಗಿದ್ದಾರೆ" ಎಂದರು.

"ಅದರಲ್ಲಿ ಒಬ್ಬ ಆರೋಪಿ ವಿನೋದ್​ ಅನ್ನುವವನು ಕಳೆದ 10- 12 ವರ್ಷದಿಂದ ಅಪರಾಧ ಮಾಡಿಕೊಂಡು ಬಂದಿದ್ದು, ಈಗಾಗಲೇ ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ. ಇಂದು ಆತ ಸುಮಾರು 12 ರಿಂದ 1 ಗಂಟೆ ಸಮಯದಲ್ಲಿ ಇನ್ನು, ಇತರ ಆರೋಪಿಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಗಾಡಿ ಎಲ್ಲ ಒಂದೇ ಕಡೆ ಇಟ್ಟಿದ್ದೀನಿ ಎಂದು ಸ್ಥಳದ ಬಗ್ಗೆ ಮಾಹಿತಿ ನೀಡಿದ್ದ. ಅದರ ಪರಿಶೀಲನೆ ನಡೆಸಲು ಹೋದಾಗ ಏಕಾಏಕಿ ಆರೋಪಿ ವಿನೋದ್​ ನಮ್ಮ ಸಿಬ್ಬಂದಿಗಳನ್ನು ತಳ್ಳಿ ಓಡಿ ಹೋಗಲು ಕಲ್ಲು ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ".

"ಈ ಸಂದರ್ಭದಲ್ಲಿ ನಮ್ಮ ಒಬ್ಬ ಸಿಬ್ಬಂದಿ ರಮೇಶ್​ ಹಿತ್ತಲಮನಿ ಅವರಿಗೆ ಮತ್ತು ಪಿಎಸ್​ಐ ಜಯಶ್ರೀ ಚಲವಾದಿ ಅವರಿಗೆ ಗಾಯಗಳಾಗಿವೆ. ಇನ್ಸ್​ಪೆಕ್ಟರ್​ ಮೇಲೆಯೂ ಹಲ್ಲೆ ಮಾಡಲು ಬಂದಿದ್ದಾನೆ. ಹೀಗಾಗಿ ಪಿಎಸ್​ಐ ಜಯಶ್ರೀ ಚಲವಾದಿ ಅವರು ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಶಸ್ತ್ರಾಸ್ತ್ರದಿಂದ ಗಾಳಿಯಲ್ಲಿ ಒಂದು ಸುತ್ತು ಹಾಗೂ ಆರೋಪಿ ಕಾಲಿಗೆ ಒಂದು ಗುಂಡು ಹಾರಿಸಿದ್ದಾರೆ. ಇದರಿಂದ ಕುಸಿದುಬಿದ್ದ ಆರೋಪಿಯನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ ಸಿಬ್ಬಂದಿಗೂ ಗಾಯಗಳಾಗಿದ್ದು ಅವರಿಗೂ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಮೂರು ಪ್ರಕರಣಗಳು ದಾಖಲಾಗಿವೆ. ಅದನ್ನು ಹೊರತುಪಡಿಸಿ ಬಹಳ ಅಪರಾಧವನ್ನು ಈ ಆರೋಪಿಗಳು ಮಾಡಿದ್ದಾರೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು; ದರ್ಶನ್​ಗಿಲ್ಲ ರಿಲೀಫ್ - Three accused got bail

ETV Bharat Logo

Copyright © 2025 Ushodaya Enterprises Pvt. Ltd., All Rights Reserved.