ETV Bharat / bharat

'ಮತ ಹಾಕುವಾಗ ಅಲ್ಲಾಹು ಅಕ್ಬರ್ ಎಂದು ಜಪಿಸುವಂತೆ ಕೇಳಿದರೆ'?..ಕಾಂಗ್ರೆಸ್, ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ

ಕರ್ನಾಟಕ ರಾಜ್ಯಾದ್ಯಂತ ಆಂಜನೇಯ ದೇವಾಲಯಗಳ ನಿರ್ಮಾಣವನ್ನು ತ್ವರಿತಗೊಳಿಸುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಕೆಡವಲಾದ ದರ್ಗಾವನ್ನು ಪುನರ್ ನಿರ್ಮಿಸುತ್ತದೆಯೇ? ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

Asaduddin Owaisi
ಅಸಾದುದ್ದೀನ್ ಓವೈಸಿ
author img

By

Published : May 5, 2023, 2:49 PM IST

ಹೈದರಾಬಾದ್: ಬಹುಸಂಖ್ಯಾತ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಆಲ್ - ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

  • What happened to Model Code of Conduct?

    92% of Class 3 kids in Karnataka cannot read Class 2 books. Only 3.6% kids in the state get minimum acceptable diet

    BJP & INC don’t want to talk about future of our kids. They’d rather compete over “Sabse Bada Hindu Kaun?”

    — Asaduddin Owaisi (@asadowaisi) May 4, 2023 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು "ಕರ್ನಾಟಕದಲ್ಲಿ ಬಹುಸಂಖ್ಯಾತ ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಬಹಿರಂಗವಾಗಿ ಮತ ಕೇಳುತ್ತಿವೆ. ಹಾಗೇಯೇ ನಾವು ಅಲ್ಲಾಹು ಅಕ್ಬರ್ ಎಂದು ಜಪಿಸಿ ಮತ ಹಾಕುವಾಗ ಕೇಳಬಹುದೇೆ?. ಎರಡು ದಿನಗಳ ಹಿಂದೆ ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಭರವಸೆಯ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ನಂತರ ಕಾಂಗ್ರೆಸ್ ರಾಜ್ಯಾದ್ಯಂತ ಹನುಮಾನ್ ಮಂದಿರಗಳನ್ನು ನಿರ್ಮಿಸಿ ಜೀರ್ಣೋದ್ಧಾರ ಮಾಡುವುದಾಗಿ ಭರವಸೆ ನೀಡಿತು. ಆದರೆ, ಹುಬ್ಬಳ್ಳಿಯಲ್ಲಿ ಕೆಡವಲಾದ ದರ್ಗಾವನ್ನು ಪುನರ್ ನಿರ್ಮಿಸುತ್ತದೆಯೇ?. ನಿರ್ಣಾಯಕ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯ ಮುಂದೆ ಶರಣಾಗಿದೆ ಕಿಡಿಕಾರಿದರು.

  • Congress & BJP are openly demanding votes on the basis of majority religion.

    Will Congress promise reconstruction of demolished dargah in Hubli? It has surrendered on its ideological battle with BJP. Will Modi be ok if I asked people to raise TAKBIR? The skies would fall pic.twitter.com/11eyGZvp8Z

ಮಾದರಿ ನೀತಿ ಸಂಹಿತೆ ಏನಾಯಿತು?: ಇವಿಎಂನಲ್ಲಿ ಮತ ಹಾಕಲು ಬಟನ್ ಒತ್ತಿದ ನಂತರ ಕರ್ನಾಟಕದ ಮತದಾರರು 'ಜೈ ಬಜರಂಗ್ ಬಲಿ' ಎಂದು ಜಪಿಸುವಂತೆ ಪ್ರಧಾನಿ ಮೋದಿ ಹೇಳುತ್ತಿರುವ ವಿಡಿಯೋವನ್ನು ಓವೈಸಿ ಹಂಚಿಕೊಂಡಿದ್ದಾರೆ. "ಇದು ಯಾವ ರೀತಿಯ ಜಾತ್ಯತೀತತೆ?, ಇದು ಸೆಕ್ಯುಲರ್ ಆಗಬಹುದೇ? ನಾನು ಇಲ್ಲಿ ನಿಂತಿದ್ದೇನೆ ಮತ್ತು ನೀವು ಮತ ಚಲಾಯಿಸುವಾಗ 'ಅಲ್ಲಾಹು ಅಕ್ಬರ್' ಎಂದು ಜಪಿಸು ಎಂದು ನಾನು ಕೇಳಿದರೆ? ಮಾಧ್ಯಮಗಳು ಧರ್ಮದ ಪರ ನಿಂತಿದ್ದಕ್ಕೆ ನನ್ನನ್ನು ದೂಷಿಸುತ್ತಾರೆ. ಆದರೆ, ಮೋದಿ ಅದನ್ನು ಮಾಡಿದಾಗ ಯಾರು ಪ್ರಶ್ನಿಸಲಿಲ್ಲ ಎಂದು ಕಿಡಿಕಾರಿದರು.

ನಿಂದನೆ ಒಪ್ಪಿಕೊಳ್ಳುತ್ತಾರೆಯೇ?: ಬುಧವಾರ ಕರ್ನಾಟಕದ ಜನರು ಮತದಾನ ಮಾಡುವಾಗ 'ಜೈ ಬಜರಂಗಬಲಿ' ಎಂದು ಘೋಷಣೆ ಕೂಗುವ ಮೂಲಕ ನಿಂದಿಸುವವರನ್ನು ನಿಂದಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಕರ್ನಾಟಕದಲ್ಲಿ ನೀವು ಹೇಗೆ ಮತ ಕೇಳುತ್ತೀರಿ?. ನಿಂದನೆಯ ಸಂಸ್ಕೃತಿಯನ್ನು ಜನರು ಒಪ್ಪಿಕೊಳ್ಳುತ್ತಾರೆಯೇ ಎಂದು ಓವೈಸಿ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಡಿಕೆಶಿ ವಿರುದ್ಧ ವಾಗ್ದಾಳಿ: ರಾಜ್ಯದ ವಿವಿಧ ಭಾಗಗಳಲ್ಲಿ ಭಗವಾನ್ ಹನುಮಾನ್ ದೇವಾಲಯಗಳ ನಿರ್ಮಾಣಕ್ಕೆ ನಮ್ಮ ಪಕ್ಷ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಇತರರಿಗಿಂತ ಯಾರು ಹೆಚ್ಚು ಹಿಂದೂ ಎಂದು ಕಂಡು ಹಿಡಿಯಲು ಎರಡೂ ಪಕ್ಷಗಳು ಹಗ್ಗ ಜಗ್ಗಾಟದಲ್ಲಿವೆ ಎಂದು ಓವೈಸಿ ದೂರಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ಇರುವ ಆಂಜನೇಯ (ಹನುಮಾನ್) ದೇಗುಲಗಳ ಅಭಿವೃದ್ಧಿಗೆ ನಮ್ಮ ಬದ್ಧತೆ ಇದೆ. ರಾಜ್ಯದ ವಿವಿಧೆಡೆ ನೂತನ ಹನುಮಾನ್ ಮಂದಿರ ನಿರ್ಮಾಣಕ್ಕೂ ನಮ್ಮ ಪಕ್ಷ ಆದ್ಯತೆ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.

ಮಂಗಳವಾರ ಕಾಂಗ್ರೆಸ್ ತನ್ನ ಕರ್ನಾಟಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದು ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಪಕ್ಷ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಿತ್ತು.

ಇದನ್ನೂ ಓದಿ: ಕಾಂಗ್ರೆಸ್​​ನವರದ್ದು ಕೇವಲ ಓಟ್‌ಬ್ಯಾಂಕ್‌ ಪಾಲಿಟಿಕ್ಸ್: ಅಸಾದುದ್ದೀನ್ ಓವೈಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.