ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಕೇಸ್ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಉದ್ಯಮಿ ವಿಜಯ್ ಪಗಾರೆ, ಇದು ಪೂರ್ವನಿಯೋಜಿತ ದಾಳಿ. ಆರ್ಯನ್ ಖಾನ್ನನ್ನು ಉದ್ದೇಶಪೂರ್ವಕವಾಗಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಶಾರುಖ್ ಖಾನ್ ಅವರಿಂದ ಹಣ ಕೀಳಲು ಹುನ್ನಾರ ನಡೆಸಿದ್ದರಿಂದಲೇ ಆರ್ಯನ್ ಖಾನ್ ಮೇಲೆ ದಾಳಿ ನಡೆಯಿತು. ಅಕ್ಟೋಬರ್ 3 ರಂದು ಆರ್ಯನ್ ಖಾನ್ ಬಂಧನದ ನಂತರ ಅನೇಕರು ಹಣ ಗಳಿಸಲು ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.
ಆರ್ಯನ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಸೇರಿದಂತೆ ಬಾಡಿ ಗಾರ್ಡ್ ಪ್ರಭಾಕರ್ ಸೈಲ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಕೆಲವು ಅಧಿಕಾರಿಗಳು ಆರ್ಯನ್‌ನನ್ನು ಬಿಟ್ಟುಕೊಡಲು ಹಣ ವಸೂಲಿಗೆ ಪ್ರಯತ್ನಿಸಿದ್ದಾರೆ. ಈ ಸಂಚಿನಲ್ಲಿ ಭಾಗಿಯಾಗಿರುವವರು ಯಾರು ಅನ್ನೋದು ತನಗೆ ತಿಳಿದಿದೆ ಎಂದು ಉದ್ಯಮಿ ಹೇಳಿದ್ದಾರೆ.
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ವಿವಾದಿತ ಕ್ರೂಸ್ ಡ್ರಗ್ಸ್ ಪ್ರಕರಣ ಸೇರಿದಂತೆ ಆರು ಪ್ರಕರಣಗಳ ತನಿಖೆಯನ್ನು ದೆಹಲಿಯ ಎನ್‌ಸಿಬಿ (NCB)ಯ ಎಸ್‌ಐಟಿ (SIT) ತನಿಖೆ ನಡೆಸುತ್ತಿದೆ.