ETV Bharat / bharat

ಡ್ರಗ್ಸ್​​​ ಕೇಸ್​​ನಲ್ಲಿ ಪುತ್ರ ಆರ್ಯನ್​ ಬಂಧನ.. ಶಾರುಖ್ ಖಾನ್​​ ಜಾಹೀರಾತು ಸ್ಥಗಿತಗೊಳಿಸಿದ ಕಂಪನಿ

author img

By

Published : Oct 9, 2021, 5:04 PM IST

Updated : Oct 9, 2021, 5:38 PM IST

ಡ್ರಗ್ಸ್​​ ಕೇಸ್​ನಲ್ಲಿ ಆರ್ಯನ್ ಖಾನ್ ಬಂಧನವಾಗುತ್ತಿದ್ದಂತೆ ಅನೇಕ ಜಾಹೀರಾತು ಕಂಪನಿಗಳು ನಟ ಶಾರುಖ್ ಖಾನ್​ ಅವರೊಂದಿಗಿನ ಸಂಬಂಧ ಕಡಿದುಕೊಳ್ಳಲು ಮುಂದಾಗಿವೆ. ಸದ್ಯ ಪ್ರತಿಷ್ಠಿತ ಎಜ್ಯುಕೇಷನಲ್​​ ಕಂಪನಿವೊಂದು ಜಾಹೀರಾತು ಸ್ಥಗಿತಗೊಳಿಸಿದೆ.

Shahrukh khan
Shahrukh khan

ಮುಂಬೈ(ಮಹಾರಾಷ್ಟ್ರ): ಡ್ರಗ್ಸ್​​ ಕೇಸ್​​ನಲ್ಲಿ ಬಾಲಿವುಡ್ ಬಾದ್​​ಶಾ ಶಾರುಖ್​​ ಖಾನ್​ ಪುತ್ರ ಆರ್ಯನ್​​ ಬಂಧನವಾಗಿದ್ದು, ಇದರ ಪರಿಣಾಮ ಇದೀಗ ತಂದೆಯ ಮೇಲೂ ಬೀರಲು ಶುರುವಾಗಿದೆ.

ನಟ ಶಾರುಖ್​​ ಖಾನ್​​ ನಟನೆ ಮಾಡಿದ್ದ ಜಾಹೀರಾತುವೊಂದನ್ನ ಇದೀಗ ತಡೆಹಿಡಿಯಲಾಗಿದೆ. ಪ್ರತಿಷ್ಠಿತ ಎಜ್ಯುಕೇಷನಲ್​​ ಕಂಪನಿವೊಂದರಲ್ಲಿ ಶಾರುಖ್ ಖಾನ್​ ನಟನೆ ಮಾಡಿದ್ದರು. ಆದರೆ, ಅವರ ಮಗ ಡ್ರಗ್ಸ್​​​ ಕೇಸ್​​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿ ಈ ನಿರ್ಧಾರ ಕೈಗೊಂಡಿದೆ. 2017ರಿಂದಲೂ ಶಾರುಖ್​ ಖಾನ್​​​ ಎಜ್ಯುಕೇಷನಲ್​​​​ ಕಂಪನಿಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದರು. ಇದಕ್ಕಾಗಿ ಪ್ರತಿ ವರ್ಷ ಶಾರುಖ್​ ಖಾನ್​ 3-4 ಕೋಟಿ ರೂ. ವಾರ್ಷಿಕ ಆದಾಯ ಪಡೆದುಕೊಳ್ಳುತ್ತಿದ್ದರು.

ಇದನ್ನೂ ಓದಿರಿ: Rave party ದಾಳಿ 'ಪೂರ್ವ ಯೋಜಿತ ಸಂಚು'.. ಮೂವರು ಬಂಧಿತರನ್ನ NCB ಬಿಡುಗಡೆ ಮಾಡಿದೆ.. NCP ಆರೋಪ

ಯಾವ ಕಾರಣಕ್ಕಾಗಿ ಈ ನಿರ್ಧಾರ?

ಶಾರುಖ್ ಖಾನ್​​​ ಎಜ್ಯುಕೇಷನಲ್​​ ಆ್ಯಪ್​ವೊಂದರ ಮುಖಾಂತರ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದಾಗಿದ್ದು, ಸದ್ಯ ಅವರ ಮಗನಿಗೆ ಸರಿಯಾಗಿ ಪಾಠ ಹೇಳದ ನಟ ಬೇರೆ ಮಕ್ಕಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಶಾರೂಖ್​ ಖಾನ್​ ಕಾರ್​ ಡ್ರೈವರ್​​​​​​ಗೂ ಸಮನ್ಸ್​.. ವಿಚಾರಣೆಗೆ ಹಾಜರು

ಡ್ರಗ್‌ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದ್ದು, ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಡ್ರಗ್ಸ್​ ವಿಚಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಶಾರುಖ್ ಖಾನ್​ ಅವರ ಡ್ರೈವರ್​ಗೆ ಎನ್​​ಸಿಬಿ ನೋಟಿಸ್ ಜಾರಿ ಮಾಡಿದ್ದು, ಇಂದು ಕಚೇರಿಯಲ್ಲಿ ಅಧಿಕಾರಿಗಳ ಎದುರು ಹಾಜರಾದರು.

Last Updated : Oct 9, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.