ETV Bharat / bharat

ತಿರುವನಂತಪುರಂ ಮೇಯರ್​ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಪ್ರಮಾಣವಚನ ಸ್ವೀಕಾರ - New Mayor for Thiruvananthapuram municipality

ದೇಶದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದ ತಿರುವನಂತಪುರಂ ನೂತನ ಮೇಯರ್​ ಆರ್ಯ ರಾಜೇಂದ್ರನ್ ಪ್ರಮಾಣ ವಚನ ಸ್ವೀಕರಿಸಿದರು.

New Mayor for Thiruvananthapuram municipality
ಮೇಯರ್​ ಆಗಿ ಪ್ರಮಾಣವಚನ ಸ್ವೀಕರಿಸಿದ ಆರ್ಯ ರಾಜೇಂದ್ರನ್
author img

By

Published : Dec 28, 2020, 5:49 PM IST

ತಿರುವನಂತಪುರಂ (ಕೇರಳ) : ಇತ್ತೀಚೆಗೆ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್​ ಸ್ಥಾನಕ್ಕೆ ಆಯ್ಕೆಯಾಗಿದ್ದ 21 ವರ್ಷದ ಆರ್ಯ ರಾಜೇಂದ್ರನ್ ಇಂದು ಪ್ರಮಾಣ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.

ತಿರುವನಂತಪುರಂ ಜಿಲ್ಲಾಧಿಕಾರಿ ನವಜ್ಯೋತಿ ಖೋಸಾ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಭಾರತದ ಅತಿ ಕಿರಿಯ ವಯಸ್ಸಿನ ಮೇಯರ್​ ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಆರ್ಯ ಪಾತ್ರರಾದರು.

ಮೇಯರ್​ ಆಗಿ ಪ್ರಮಾಣವಚನ ಸ್ವೀಕರಿಸಿದ ಆರ್ಯ ರಾಜೇಂದ್ರನ್

ಓದಿ : ಕೇರಳದ ಕಿರಿಯ ಮೇಯರ್​ಗೆ ಕರೆ ಮಾಡಿ ಶುಭ ಕೋರಿದ ನಟ ಮೋಹನ್​ ಲಾಲ್

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ 100 ಮಂದಿ ಕೌನ್ಸಿಲರ್​ಗಳ ಪೈಕಿ 54 ಮಂದಿ ಆರ್ಯ ರಾಜೇಂದ್ರನ್ ಅವರನ್ನು ಬೆಂಬಲಿಸಿದ್ದರು. ಈ ಮೂಲಕ ಸಣ್ಣ ವಯಸ್ಸಿನಲ್ಲೇ ಆರ್ಯ ಮೇಯರ್ ಎಂಬ ದೊಡ್ಡ​ ಸ್ಥಾನಕ್ಕೆ ಆಯ್ಕೆಯಾಗಿ, ಜಗತ್ತಿನ ಗಮನ ಸೆಳೆದಿದ್ದರು. ಈ ಹಿಂದೆ, ಆರ್ಯ ರಾಜೇಂದ್ರನ್, ಕೇರಳದ ಅತಿ ದೊಡ್ಡ ಮಕ್ಕಳ ಸಂಘಟನೆಗಳಲ್ಲಿ ಒಂದಾದ ಬಾಲಸಂಗಂನ ರಾಜ್ಯಾಧ್ಯಕ್ಷೆ ಮತ್ತು ಎಸ್‌ಎಫ್‌ಐ ರಾಜ್ಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.