ETV Bharat / bharat

ನಾನು ಭಯೋತ್ಪಾದಕನಲ್ಲ, ನಿಜವಾದ ‘ದೇಶಭಕ್ತ’ ಎಂಬುದನ್ನು ಜನ ತೋರಿಸಿದ್ದಾರೆ: ಕೇಜ್ರಿವಾಲ್​ - CM Kejriwal reaction Punjab victory

CM Kejriwal reaction on Punjab victory.. ಯಾವುದೇ ವಿದ್ಯಾರ್ಥಿಯೂ ಉಕ್ರೇನ್‌ಗೆ ವೈದ್ಯಕೀಯ ಅಧ್ಯಯನಕ್ಕೆ ಹೋಗದಂತಹ ಭಾರತವನ್ನು ನಾವು ಮಾಡುತ್ತೇವೆ. ಈ ಫಲಿತಾಂಶಗಳ ಮೂಲಕ ಜನರು ಕೇಜ್ರಿವಾಲ್ ಭಯೋತ್ಪಾದಕನಲ್ಲ, ನಿಜವಾದ ‘ದೇಶಭಕ್ತ’ ಎಂಬುದನ್ನು ತೋರಿಸಿದ್ದಾರೆ ಎಂದು ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

ನಾನು ಭಯೋತ್ಪಾದಕನಲ್ಲ, ನಿಜವಾದ ‘ದೇಶಭಕ್ತ’ ಎಂದು ಜನ ತೋರಿಸಿದ್ದಾರೆ: ಕೇಜ್ರಿವಾಲ್​

author img

By

Published : Mar 10, 2022, 7:14 PM IST

Updated : Mar 10, 2022, 8:12 PM IST

ನವದೆಹಲಿ: ಪಂಜಾಬ್ ಜನರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ.

ಪಂಜಾಬ್ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಎಪಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಎಲ್ಲ ಪಕ್ಷಗಳ ನಾಯಕರಿಗೆ ಸಾರ್ವಜನಿಕರು ತಕ್ಕ ಉತ್ತರ ನೀಡಿದ್ದಾರೆ. ಆಮ್ ಆದ್ಮಿಯು ಚುನಾವಣೆಯಲ್ಲಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದೆ ಎಂದು ಹೇಳಿದ್ದಾರೆ.

ಯಾವುದೇ ವಿದ್ಯಾರ್ಥಿಯೂ ಉಕ್ರೇನ್‌ಗೆ ವೈದ್ಯಕೀಯ ಅಧ್ಯಯನಕ್ಕೆ ಹೋಗದಂತಹ ಭಾರತವನ್ನು ನಾವು ಮಾಡುತ್ತೇವೆ. ಈ ಫಲಿತಾಂಶಗಳ ಮೂಲಕ ಜನರು ಕೇಜ್ರಿವಾಲ್ ಭಯೋತ್ಪಾದಕನಲ್ಲ, ನಿಜವಾದ ‘ದೇಶಭಕ್ತ’ ಎಂಬುದನ್ನು ತೋರಿಸಿದ್ದಾರೆ. ನಾವು ಬದಲಾಗದಿದ್ದರೆ ಬ್ರಿಟಿಷರು ನಿರ್ಗಮಿಸಿದ ನಂತರದ ವ್ಯವಸ್ಥೆಯಲ್ಲಿ ಏನೂ ಬದಲಾಗುವುದಿಲ್ಲ ಎಂದು ಒಮ್ಮೆ ಭಗತ್ ಸಿಂಗ್ ಹೇಳಿದ್ದರು. ದುಃಖಕರವೆಂದರೆ ಕಳೆದ 75 ವರ್ಷಗಳಲ್ಲಿ ಈ ಪಕ್ಷಗಳು ಮತ್ತು ನಾಯಕರು ಅದೇ ಬ್ರಿಟಿಷ್ ವ್ಯವಸ್ಥೆಯನ್ನು ಅನುಸರಿಸಿದ್ದರು. ದೇಶವನ್ನು ಲೂಟಿ ಮಾಡುತ್ತಿದ್ದರು. ಶಾಲೆಗಳು/ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಿಲ್ಲ. ಆದರೆ ಎಎಪಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದು ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ: ಈ ಮಟ್ಟಕ್ಕೆ ಬೆಳೆಯುವ ಪಕ್ಷದ ಶ್ರಮ ಎಂತಹುದು ಗೊತ್ತಾ!?

ಸುಖ್ಬೀರ್ ಸಿಂಗ್ ಬಾದಲ್ ಸೋತರು, ಮಾಜಿ ಸಿಎಂ ಕ್ಯಾಪ್ಟನ್ ಸಾಹೇಬ್ ಸೋತರು, ಸಿಎಂ ಚನ್ನಿ ಸಾಹೇಬ್ ಮಣ್ಣು ಮುಕ್ಕಿದರು, ಪ್ರಕಾಶ್ ಸಿಂಗ್ ಬಾದಲ್ ಸೋತರು, ನವಜೋತ್ ಸಿಂಗ್ ಸಿಧು ಸೋತಿದ್ದಾರೆ, ಬಿಕ್ರಮ್ ಸಿಂಗ್ ಮಜಿಥಿಯಾ ಸೋಲುಂಡರು. ಇದನ್ನೆಲ್ಲಾ ನೋಡಿದರೆ ಪಂಜಾಬ್ ಅದ್ಭುತ ಸಾಧನೆ ಮಾಡಿದೆ ಎಂದು ಕೇಜ್ರಿವಾಲ್​ ತಿಳಿಸಿದರು.

ಪಂಜಾಬ್‌ನಲ್ಲಿ ಆಪ್​ ಮುನ್ನಡೆಯನ್ನು ಸೂಚಿಸುತ್ತಿದ್ದಂತೆ, ಕೇಜ್ರಿವಾಲ್ ಅವರು ಆಪ್​ ಸಂಸದ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರೊಂದಿಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು ಎಂದು ಕೇಜ್ರಿವಾಲ್ ಬರೆದುಕೊಂಡಿದ್ದಾರೆ. ಪಂಜಾಬ್‌ನಲ್ಲಿ ಬಹುಮತ ಪಡೆಯುವ ಮೂಲಕ ಎಎಪಿ ಇತಿಹಾಸವನ್ನು ಸೃಷ್ಟಿಸಿದ್ದು, ದೆಹಲಿಯ ನಂತರ ಎಎಪಿ ಈಗ ಪಂಜಾಬ್‌ನಲ್ಲಿ ಸರ್ಕಾರ ರಚಿಸಲು ಹೊರಟಿದೆ.

ಪಂಜಾಬ್​ (117/117)
ಕಾಂಗ್ರೆಸ್​ಆಪ್​ಎಸ್​ಎಡಿ+ಬಿಜೆಪಿ+ಇತರೆ
1893321

Last Updated : Mar 10, 2022, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.