ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಲೀಲಾ ಕಾರ್ಯಕ್ರಮವೊಂದರಲ್ಲಿ ರಾವಣನ ಪಾತ್ರ ಮಾಡುತ್ತಿದ್ದ, ಕಲಾವಿದರೊಬ್ಬರು ಹೃದಯಾಘಾತದಿಂದ ವೇದಿಕೆಯಲ್ಲೇ ಮೃತಪಟ್ಟಿದ್ದಾರೆ. ಫತೇಪುರ್ ಜಿಲ್ಲೆಯಲ್ಲಿ ರಾಮಲೀಲಾ ಧಾರಾವಾಹಿಯ 'ಲಂಕಾ ದಹನ್' ಸಂಚಿಕೆಯ 'ಹನುಮಾನ್' ಪಾತ್ರವನ್ನು ನಿರ್ವಹಿಸುತ್ತಿದ್ದ, 50 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.
60 ವರ್ಷದ ಕಲಾವಿದ ಪತಿರಾಮ್ ಅವರು ಅಯೋಧ್ಯೆಯ ಐಹಾರ್ ಗ್ರಾಮದಲ್ಲಿ 'ಸೀತಾ ಹರಣ್' ಸಂಚಿಕೆಯಲ್ಲಿ 'ರಾವಣ' ಪಾತ್ರವನ್ನು ನಿರ್ವಹಿಸುತ್ತಿದ್ದಾಗ ನೋವಿನಿಂದ ಎದೆಯನ್ನು ಹಿಡಿದುಕೊಂಡರು. ಅಷ್ಟರಲ್ಲಿ ಸ್ಥಳದಲ್ಲಿರುವ ವೇದಿಕೆಗೆ ಬರುವ ಮೊದಲೇ, ಅವರು ಕುಸಿದುಬಿದ್ದರು. ತಕ್ಷಣ ಪತಿರಾಮ್ ಅವರನ್ನು ರಾಮಲೀಲಾ ಸಮಿತಿಯ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದ್ರೆ ಅಷ್ಟರಲ್ಲೇ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನೂ ಓದಿ: ಗರ್ಬಾ ನೃತ್ಯ ವೇಳೆ ಯುವಕ ಸಾವು.. ಆಘಾತಕ್ಕೆ ತಂದೆಯೂ ನಿಧನ
ಗ್ರಾಮದ ಮುಖ್ಯಸ್ಥ ಪುನೀತ್ ಕುಮಾರ್ ಸಾಹು ಮಾತನಾಡಿ, ಪತಿರಾಮ್ ರಾವಣನ ಪಾತ್ರವನ್ನು ಹಲವು ವರ್ಷಗಳಿಂದ ನಿರ್ವಹಿಸುತ್ತಿದ್ದರು. ಅವರು ಪತ್ನಿ ದೇವಮತಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರಲ್ಲಿ ಒಬ್ಬರಿಗೆ ವಿವಾಹವಾಗಿದೆ ಎಂದು ತಿಳಿಸಿದರು.