ತಿರುಚ್ಚಿ (ತಮಿಳುನಾಡು): ವಂಚನೆ ಆರೋಪದಲ್ಲಿ ಬಂಧಿಸಲ್ಪಟ್ಟ ಎಐಎಡಿಎಂಕೆ ಮಾಜಿ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಅವರನ್ನು ಶ್ರೀವಿಲ್ಲಿಪುತ್ತೂರು ಜಿಲ್ಲಾ ಕ್ರಿಮಿನಲ್ ಆರ್ಬಿಟ್ರೇಷನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ 15 ದಿನಗಳ ಅವಧಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭದ್ರತೆ ಮತ್ತು ಕಾರಾಗೃಹ ನಿರ್ವಹಣೆಯ ಕಾರಣಗಳಿಂದ ಅವರನ್ನು ಮಧುರೈ ಜೈಲಿನಿಂದ ತಿರುಚ್ಚಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲು ಕಾರಾಗೃಹ ಇಲಾಖೆ ನಿರ್ಧರಿಸಿದೆ.
ಸರ್ಕಾರಿ ಸಂಸ್ಥೆಯಾದ ಆವಿನ್ ಮಿಲ್ಕ್ನಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ 3 ಕೋಟಿ ರೂಪಾಯಿ ವಂಚಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಇದರ ಆಧಾರದ ಮೇಲೆ ವಿರುಧ್‌ನಗರ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು, ಕಳೆದ ನವೆಂಬರ್‌ನಲ್ಲಿ ಕೆ.ಟಿ.ರಾಜೇಂದ್ರ ಬಾಲಾಜಿ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದರು.
ಇದನ್ನೂ ಓದಿ: ಹಾಸನದಲ್ಲಿ ತಮಿಳುನಾಡು ಪೊಲೀಸರಿಂದ ಸಿನಿಮೀಯ ಶೈಲಿ ಕಾರು ಚೇಸ್ : AIADMKಯ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಬಂಧನ
ಈ ಪ್ರಕರಣದಿಂದ ರಕ್ಷಿಸಿಕೊಳ್ಳಲು ಮಾಜಿ ಸಚಿವರು ಜಾಮೀನು ಕೋರಿ ಚೆನ್ನೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಲು ವಿರುಧ್‌ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ್ 8 ವಿಶೇಷ ತಂಡಗಳನ್ನು ರಚಿಸಿದ್ದರು. ನಿನ್ನೆ (ಜನವರಿ 5) ರಂದು ಅವರನ್ನು ಹಾಸನದಲ್ಲಿ ಬಂಧಿಸಲಾಗಿದೆ.