ETV Bharat / bharat

ಬಾಬ್ಬಿ ಕಟಾರಿಯಾ ವಿರುದ್ಧ ಬಂಧನ ವಾರಂಟ್: ಜೈಲೂಟ ಅಭ್ಯಾಸವಾಗಿದೆ ಎಂದ ಯೂಟ್ಯೂಬರ್ - ಈಟಿವಿ ಭಾರತ ಕನ್ನಡ

ಕಟಾರಿಯಾ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಜೈಲಿನಲ್ಲಿ ಊಟ ಮಾಡುವುದು ನನಗೆ ಅಭ್ಯಾಸವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಪೊಲೀಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಟಾರಿಯಾ, ತಾನು ಯುಎಇಗೆ ಹಾರುತ್ತಿದ್ದೇನೆ ಎಂದು ಹೇಳಿದ್ದಾರೆ.

Arrest warrant against Bobby Kataria
Arrest warrant against Bobby Kataria
author img

By

Published : Aug 19, 2022, 1:58 PM IST

ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಯೂಟ್ಯೂಬರ್ ಬಾಬ್ಬಿ ಕಟಾರಿಯಾನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಮದ್ಯದ ಅಮಲಿನಲ್ಲಿ ಡೆಹ್ರಾಡೂನ್​ನ ರಸ್ತೆಯೊಂದರಲ್ಲಿ ರಸ್ತೆ ಮಧ್ಯೆ ಕುರ್ಚಿ ಹಾಕಿಕೊಂಡು ಅದರ ಮೇಲೆ ಕುಳಿತು ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಮತ್ತು ಈ ಸಂದರ್ಭದಲ್ಲಿ ಪೊಲೀಸರನ್ನೇ ಬೆದರಿಸಿದ ಆರೋಪಗಳನ್ನು ಈತ ಎದುರಿಸುತ್ತಿದ್ದಾನೆ.

ಈ ಪ್ರಕರಣದಲ್ಲಿ ಈಗ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಬಾಬ್ಬಿ ಕಟಾರಿಯಾಗಾಗಿ ಹುಡುಕಾಟ ನಡೆಸಿದ್ದಾರೆ. ಡೆಹ್ರಾಡೂನ್​ನ ಕಿಮಾಡಿ ಮಾರ್ಗ್ ಎಂಬಲ್ಲಿ ರಸ್ತೆಯಲ್ಲಿ ಈತ ಸಾರಾಯಿ ಕುಡಿದ ವಿಡಿಯೋ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ಈತನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದ ಹಾಡಿನ ಹಿನ್ನೆಲೆಯಲ್ಲಿ ರೋಡ್ಸ್ ಅಪ್ನೆ ಬಾಪ್ ಕಿ ಎಂಬ ಹಾಡನ್ನು ಪ್ಲೇ ಮಾಡಲಾಗಿದೆ. ಡಿಜಿಪಿ ಅಶೋಕ್ ಕುಮಾರ್ ಅವರು ಕಟಾರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಡೆಹ್ರಾಡೂನ್‌ಗೆ ಆದೇಶಿಸಿದ್ದರು. ಈ ಕುರಿತು ಕ್ಯಾಂಟೊನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಾಗಿ ಒಂದು ದಿನದ ನಂತರ ವಿಚಾರಣೆಗಾಗಿ ಕಟಾರಿಯಾಗೆ ಪೊಲೀಸರು ನೋಟಿಸ್ ನೀಡಿದ್ದರು. ಸಕಾಲದಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಅಶೋಕ್ ಕುಮಾರ್ ಎಚ್ಚರಿಕೆ ನೀಡಿದ್ದರು.

ಡಿಜಿಪಿ ಅವರ ಎಚ್ಚರಿಕೆಯ ನಂತರ, ಕಟಾರಿಯಾ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ "ಜೈಲಿನಲ್ಲಿ ಊಟ ಮಾಡುವುದು ನನಗೆ ಅಭ್ಯಾಸವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಪೊಲೀಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಟಾರಿಯಾ, ತಾನು ಯುಎಇಗೆ ಹಾರುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 6.3 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕಟಾರಿಯಾ, ಈ ಹಿಂದೆ ಸ್ಪೈಸ್‌ಜೆಟ್ ವಿಮಾನದ ಹಿಂದಿನ ಸಾಲಿನಲ್ಲಿ ಕುಳಿತು ಸಿಗರೇಟ್ ಹಚ್ಚುತ್ತಿರುವ ವೀಡಿಯೊ ಮಾಡಿ ಅದನ್ನು ವೈರಲ್ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.