ETV Bharat / bharat

ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ರಾತ್ರಿ ಮನೆ ಮನೆಗೆ ಕಳ್ಳಭಟ್ಟಿ ಡೆಲಿವರಿ ಮಾಡುತ್ತಿದ್ದ ಯುವಕನ ಬಂಧನ - ಬಿಹಾರದ ಛಪ್ರಾದಲ್ಲಿ 73 ಮಂದಿ ನಕಲಿ ಮದ್ಯ ಸೇವಿಸಿ

ಈ ಯುವಕ ಬೆಳಗಿನ ಹೊತ್ತು ಪಿಬಿಎಸ್​ಸಿಯಲ್ಲಿ ತಯಾರಿಗೆ ಕೋಚಿಂಗ್​ ಪಡೆಯುತ್ತಿದ್ದು, ರಾತ್ರಿ ಹೊತ್ತು ಮದ್ಯ ಡೆಲಿವರಿ ಮಾರಾಟಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ರಾತ್ರಿ ನಕಲಿ ಮದ್ಯ​ ಹೋಮ್​ ಡೆಲಿವರಿ ಮಾಡುತ್ತಿದ್ದ ಯುವಕನ ಬಂಧನ
arrest-of-a-young-man-who-was-preparing-for-the-competitive-exam-in-the-morning-and-delivering-fake-liquor-at-home-at-night
author img

By

Published : Dec 21, 2022, 11:25 AM IST

ವೈಶಾಲಿ: ಬಿಹಾರದ ಛಪ್ರಾದಲ್ಲಿ 73 ಮಂದಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಸಿವಾನ್​ ಮತ್ತು ಬೆಗುಸರೈನಲ್ಲಿ ಕೂಡ 7 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ವಿಷಪೂರಿತ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ ಬಳಿಕ ಒಂದೊಂದೇ ಪ್ರಕರಣಗಳು ಹೊರ ಬರುತ್ತಿದ್ದು, ಈ ಕುರಿತು ಸರ್ಕಾರ ಮತ್ತು ಆಡಳಿತ ಇಲಾಖೆಗಳು ಎಚ್ಚೆತ್ತುಕೊಂಡಿವೆ. ಮದ್ಯ ಸೇವಿಸುವವರು, ಮಾರುವವರು ಮತ್ತು ತಯಾರಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಮದ್ಯ ಜಾಲವನ್ನು ಭೇದಿಸಲು ಮುಂದಾಗಿದ್ದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈ ಜಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಅಭ್ಯರ್ಥಿಗಳು ಇರುವುದು ಪತ್ತೆಯಾಗಿದೆ. ಹಾಜಿಪುರದ ಜೊಹ್ರಿ ಬಜಾರ್ ರಸ್ತೆಯಿಂದ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಅಬಕಾರಿ ಇಲಾಖೆಯ ತಂಡ ಹಿಡಿದಿದೆ. ಈ ವೇಳೆ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯ ಅಧ್ಯಯನದ ನೆಪದಲ್ಲಿ ಮದ್ಯವನ್ನು ಹೋಮ್ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ. ಈತ ಸೋನ್‌ಪುರ ನಿವಾಸಿ ಅಶುತೋಷ್ ರಾಜ್ ಎಂಬುದು ಪತ್ತೆಯಾಗಿದೆ.

ಈ ಯುವಕ ಬೆಳಗಿನ ಹೊತ್ತು ಬಿಪಿಎಸ್​ಸಿಯಲ್ಲಿ ತಯಾರಿಗೆ ಕೋಚಿಂಗ್​ ಪಡೆಯುತ್ತಿದ್ದು, ರಾತ್ರಿ ಹೊತ್ತು ಮದ್ಯ ಡೆಲಿವರಿ ಮಾರಾಟಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಯುವಕನ ಬಳಿ 25 ಟೆಟ್ರಾ ಪ್ಯಾಕ್​ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಈತ ತನ್ನ ಬ್ಯಾಗ್​ನಲ್ಲಿ ಮದ್ಯವನ್ನು ತುಂಬಿ ರಾತ್ರಿ ಹೊತ್ತು ಸ್ಕೂಟಿಯಲ್ಲಿ ಡೆಲಿವರಿ ಮಾಡುವುದಾಗಿ ತಿಳಿಸಿದ್ದಾನೆ.

ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿಳುತ್ತಿದ್ದಂತೆ ಅಶುತೋಷ್​ ಕುಮಾರ್​ ಕಣ್ಣೀರಾಕಲು ಶುರು ಮಾಡಿದ್ದಾನೆ. ಆರ್ಥಿಕ ಸಂಕಷ್ಟದಿಂದ ಸ್ನೇಹಿತರ ಸಲಹೆಯಂತೆ ಈ ಕೆಲಸಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾನೆ. ಸದ್ಯ ಯುವನಕ ಬಂಧಿಸಿರುವ ಪೊಲೀಸರು ಜೈಲಿಗೆ ಅಟ್ಟಲು ಸಿದ್ಧರಾಗಿದ್ದಾರೆ.

ಈ ಸಂಬಂದ ಪ್ರತಿಕ್ರಿಯಿಸಿರುವ ಅಬಕಾರಿ ಇನ್ಸ್​ಪೆಕ್ಟರ್​ ಅಜಿತ್​ ಕುಮಾರ್​, ಅಧ್ಯಯನದ ಜೊತೆಗೆ ಮದ್ಯವನ್ನು ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಬಂಧಿತ ಯುವಕ ಪಾಟ್ನಾದ ಬೋರಿಂಗ್ ರೋಡ್‌ನಲ್ಲಿರುವ ಐಎಎಸ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಬಿಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದಾನೆ. ಜೊತೆಗೆ ಮದ್ಯದ ಹೋಮ್​ ಡೆಲಿವರಿ ನಡೆಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಪತ್ನಿಯೊಂದಿಗೆ ಸೇರಿಕೊಂಡು ಮಂತ್ರವಾದಿ ಅಪ್ಪನನ್ನು ಕೊಂದ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.