ETV Bharat / bharat

ಬಟ್ಟೆ ತೊಳೆಯುವ ವಿಚಾರಕ್ಕೆ ಗಲಾಟೆ: ಕೃಷ್ಣಗಿರಿಯಲ್ಲಿ ಯೋಧನ ಹೊಡೆದು ಹತ್ಯೆ - ರಾಜಕೀಯ ಆರೋಪ ಮತ್ತು ಪ್ರತ್ಯಾರೋಪ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಯೋಧನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

army-personal-murder-in-krishnagiri-tamil-nadu
ತಮಿಳುನಾಡಿನಲ್ಲಿ ರಜೆ ಮೇಲೆ ಬಂದಿದ್ದ ಯೋಧನ ಹೊಡೆದು ಕೊಲೆ
author img

By

Published : Feb 16, 2023, 3:31 PM IST

Updated : Feb 16, 2023, 4:18 PM IST

ಕೃಷ್ಣಗಿರಿ (ತಮಿಳುನಾಡು): ಯೋಧನೊಬ್ಬನನ್ನು ಹೊಡೆದು ಕೊಲೆಗೈದ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. 29 ವರ್ಷದ ಭಾರತೀಯ ಸೇನೆಯ ಲ್ಯಾನ್ಸ್​ ನಾಯಕ್ ಎಂ.ಪ್ರಭು ಎಂಬವರು ಹತ್ಯೆಯಾಗಿದ್ದಾರೆ. ಆಪ್ತ ಸಂಬಂಧಿಕರರೇ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ರಾಜಕೀಯ ಆರೋಪ- ಪ್ರತ್ಯಾರೋಪಗಳು ಶುರುವಾಗಿವೆ.

"ಬೊಚಂಪಲ್ಲಿ ಮೂಲದ ನಿವಾಸಿ ಪ್ರಭು ರಜೆ ಮೇಲೆ ಊರಿಗೆ ಬಂದಿದ್ದರು. ಫೆಬ್ರವರಿ 8ರಂದು ಪಂಚಾಯಿತಿಯ ಸಾರ್ವಜನಿಕ ನೀರಿನ ಟ್ಯಾಂಕ್​ ಸಮೀಪ ಬಟ್ಟೆ ತೊಳೆಯುವ ವಿಚಾರವಾಗಿ ಸಂಬಂಧಿಕರ ಮಧ್ಯೆ ಗಲಾಟೆ ನಡೆದಿತ್ತು. ಇದೇ ವೇಳೆ ಯೋಧ ಪ್ರಭು ಮತ್ತು ಸಹೋದರ ಪ್ರಭಾಕರನ್​ ಅವರೊಂದಿಗೆ ಆರೋಪಿಯಾದ ಸಂಬಂಧಿಯೂ ಆಗಿರುವ ಚಿನ್ನಸ್ವಾಮಿ ವಾಗ್ವಾದ ನಡೆಸಿದ್ದಾನೆ'' ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸರೋಜ್​ ಕುಮಾರ್​ ತಿಳಿಸಿದರು.

  • போச்சம்பள்ளி ராணுவ வீரர் பிரபு கொலை வழக்கு தொடர்பாக கிருஷ்ணகிரி மாவட்ட எஸ்.பி. சரோஜ் குமார் தாக்கூர் அளித்த விளக்கம்#Krishnagiri #JusticeForPrabhu #dmk #bjp #Annamalai pic.twitter.com/P4TGUMNVX4

    — ETVBharat Tamilnadu (@ETVBharatTN) February 16, 2023 " class="align-text-top noRightClick twitterSection" data=" ">

''ಇದಾದ ನಂತರ ಸಂಜೆ ಚಿನ್ನಸ್ವಾಮಿ ತನ್ನ ಸಹಚರರೊಂದಿಗೆ ಆಗಮಿಸಿ ಪ್ರಭಾಕರನ್ ಹಾಗೂ ಪ್ರಭು ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಭು ಅವರನ್ನು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಫಲಕಾರಿಯಾಗದೆ ಫೆಬ್ರವರಿ 14ರಂದು ಅವರು ಮೃತಪಟ್ಟರು" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

''ನಾಗರಸಂಪ್ಯಾಟಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 307ರಡಿ ಕೊಲೆ ಯತ್ನ ಮತ್ತು 302ರಡಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆಗೆ ಯಾವುದೇ ರಾಜಕೀಯ ಕಾರಣ ಇಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ" ಎಂದು ಎಸ್​ಪಿ ವಿವರಿಸಿದರು.

ಬಿಜೆಪಿ ಆರೋಪವೇನು?: ಯೋಧನ ಕೊಲೆ ಆರೋಪಿಯಾದ ಚಿನ್ನಸ್ವಾಮಿ ಡಿಎಂಕೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾನೆ. ಕೊಲೆಗೆ ಡಿಎಂಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಯೋಧರ ಘಟಕದ ಅಧ್ಯಕ್ಷ ರಮಣ್​ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹತ್ಯೆ ಖಂಡಿಸಿ ರಾಜ್ಯಾದ್ಯಂತ ಎಲ್ಲ ಮಾಜಿ ಸೈನಿಕರು ಹೋರಾಟ ಮಾಡಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟ್ವೀಟ್​ ಮಾಡಿದ್ದಾರೆ.

  • As a mark of respect to the Army man Thiru Prabhu who was beaten to death by a DMK councillor, members of @BJP4TamilNadu Ex-Servicemen wing wearing their Badge & Cap will protest against the DMK govt for this cruel disrespect to our Indian Army. #DMK_Kills_Soldier (1/3)

    — K.Annamalai (@annamalai_k) February 15, 2023 " class="align-text-top noRightClick twitterSection" data=" ">

''ಡಿಎಂಕೆಯ ಅರಾಜಕತೆಯಿಂದಾಗಿ ಯೋಧರಿಗೆ ನಮ್ಮ ತವರುನೆಲದಲ್ಲೂ ಸುರಕ್ಷೆ ಇಲ್ಲ. ಡಿಎಂಕೆ ಮತ್ತದರ ಮಿತ್ರ ಪಕ್ಷಗಳು ಯೋಧರ ಕುಟುಂಬಗಳಿಗೆ ಬೆದರಿಕೆಯೊಡ್ಡುವ ಮಟ್ಟಕ್ಕೆ ಬಂದುಬಿಟ್ಟಿವೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ಸೈನಿಕರ ಮೇಲೆ ದಾಳಿ ಮಾಡಿ, ಕೊಲೆ ಮಾಡಲಾಗುತ್ತಿದೆ'' ಎಂದು ಅವರು ದೂರಿದ್ದಾರೆ.

''ತಮಿಳುನಾಡು ಮುಖ್ಯಮಂತ್ರಿ ಪೊಲೀಸರನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ನಾನು ತಮಿಳುನಾಡು ಬಿಜೆಪಿ ಪರವಾಗಿ, ಹಂತಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಇಂತಹ ಸಮಾಜಘಾತಕ ಕೃತ್ಯಗಳು ಮುಂದೆ ನಡೆಯದಂತೆ ತಡೆಯಬೇಕು'' ಎಂದು ಅಣ್ಣಾಮಲೈ ತಮ್ಮ ಆಗ್ರಹಿಸಿದ್ಧಾರೆ.

ಇದನ್ನೂ ಓದಿ: ಆನೆ ದಂತದ ಕಲಾಕೃತಿಗಳ ಮಾರಾಟ.. ಹುಬ್ಬಳ್ಳಿಯಲ್ಲಿ ಐವರು ಆರೋಪಿಗಳ ಬಂಧನ

Last Updated : Feb 16, 2023, 4:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.