ETV Bharat / bharat

ಭಾರಿ ಹಿಮದಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಿದ ಸೇನೆ - ಸೇನೆಯ ಬಗ್ಗೆ ಲೇಟೆಸ್ಟ್ ಸುದ್ದಿ

ಸಿಕ್ಕಿಂನ ಸ್ಯಾಮ್​ಡಾಂಗ್​ನಿಂದ ಪಶ್ಚಿಮ ಬಂಗಾಳದ ಸಿಲಿಗುರಿಗೆ ಹಿಂದಿರುಗುತ್ತಿದ್ದಾಗ ಹಿಮಪಾತ ಸಂಭವಿಸಿದ್ದು, ಅದರಲ್ಲಿ ಸಿಲುಕಿದ್ದ ಐದು ಮಂದಿಯನ್ನು ಸೇನೆ ರಕ್ಷಿಸಿದೆ..

Army rescues 5 persons from snow-bound Sikkim
ಹಿಮದಲ್ಲಿ ಸಿಲುಕಿದ್ದ ಐದು ಮಂದಿಯನ್ನು ರಕ್ಷಿಸಿದ ಸೇನೆ
author img

By

Published : Jan 31, 2021, 9:39 PM IST

ಗೌಹಾಟಿ, ಅಸ್ಸೋಂ : ಭಾರಿ ಹಿಮದಲ್ಲಿ ಸಿಲುಕಿದ್ದ ಮೂವರು ಟ್ರಕ್ ಚಾಲಕರು ಮತ್ತು ಅವರ ಸಹ ಪ್ರಯಾಣಿಕರು ಸೇರಿ ಐದು ಜನರನ್ನು ಸೇನೆಯು ರಕ್ಷಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಉತ್ತರ ಸಿಕ್ಕಿಂನ ಸ್ಯಾಮ್‌ಡಾಂಗ್ ಮತ್ತು ಲಾಚೆನ್ ನಡುವಿನ ಪ್ರದೇಶದಲ್ಲಿ ಭಾರಿ ಹಿಮದಲ್ಲಿ ಐದು ಮಂದಿ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೊಂಗ್ಸೈ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ದೇಶದ ಸ್ವಚ್ಛ ನಗರಿ ಇಂದೋರ್​​ ಹೇಗಾಯ್ತು ಗೊತ್ತಾ? ಯಾವ ರಾಜ್ಯವೂ ಇಷ್ಟು ಸ್ವಚ್ಛವಾಗಬಾರದು!!

ಇವರು ಸಿಕ್ಕಿಂನ ಸ್ಯಾಮ್​ಡಾಂಗ್​ನಿಂದ ಪಶ್ಚಿಮ ಬಂಗಾಳದ ಸಿಲಿಗುರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಹಿಮಪಾತ ಸಂಭವಿಸಿದ್ದು, ಎರಡು ಅಡಿಗಳಿಗಿಂತ ಹೆಚ್ಚು ಎತ್ತರ ಹಿಮದಲ್ಲಿ ಅವರ ವಾಹನ ಸಿಲುಕಿತ್ತು ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಅವರನ್ನು ರಕ್ಷಿಸಿದ ನಂತರ ಸೈನಿಕರಿದ್ದ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಯೇ ಔಷಧಿ, ಆಹಾರ, ಬಟ್ಟೆಗಳನ್ನು ವಿತರಣೆ ಮಾಡಲಾಗಿದೆ. ಇದರ ಜೊತೆಗೆ ಔಷಧಿಯನ್ನೂ ನೀಡಿ, ಉಪಚರಿಸಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.