ETV Bharat / bharat

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಸಂಜೀವಿನಿಯಾದ ಭಾರತೀಯ ಸೇನೆ

author img

By

Published : May 19, 2023, 8:44 AM IST

Updated : May 19, 2023, 10:53 AM IST

ಜಮ್ಮು ಕಾಶ್ಮೀರದ ಸಾಧನಾ ಪಾಸ್‌ನಲ್ಲಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ಗರ್ಭಿಣಿ ಭಾರತೀಯ ಸೇನೆಯ ಸಹಾಯದಿಂದ ಮಗುವಿಗೆ ಜನ್ಮ ನೀಡಿದರು.

army
ಭಾರತೀಯ ಸೇನೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಾಧನಾ ಪಾಸ್​ ಪ್ರದೇಶದ ಬಳಿ ತುರ್ತು ಪರಿಸ್ಥಿತಿಗೆ ಒಳಗಾಗಿದ್ದ ತುಂಬು ಗರ್ಭಿಣಿಗೆ ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಯಿಂದ ಹೆರಿಗೆ ಮಾಡಿಸಿದರು. ಈ ಘಟನೆ ಗುರುವಾರ ನಡೆಯಿತು. ಮಹಿಳೆಗೆ ಹೆಣ್ಣು ಮಗುವು ಜನಿಸಿತು. ತಾಯಿ ಮತ್ತು ಮಗು ಇಬ್ಬರೂ ಇದೀಗ ಆರೋಗ್ಯವಾಗಿದ್ದಾರೆ. ಮಗು ಹುಟ್ಟಿದ ಸ್ಥಳದ ಹೆಸರಾದ 'ಸಾಧನಾ' ಎಂಬುದನ್ನೇ ನಾಮಕರಣ ಮಾಡಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಯಿಯ ಹೆಸರು ಹರ್ಮಿದ್​ ಬೇಗಂ. ಈಕೆ ತಂಗ್​ಧರ್​ನ ಜಡ್ಡಾ ಗ್ರಾಮದ ನಿವಾಸಿ. ಹರ್ಮಿದ್​ ತುಂಬು ಗರ್ಭಿಣಿಯಾಗಿದ್ದರು. ಆಕೆಗೆ ತುರ್ತು ಚಿಕಿತ್ಸೆಯ ನೆರವು ಬೇಕಿತ್ತು. ಈ ವಿಷಯ ತಿಳಿದ ಸೇನೆಯ ವೈದ್ಯಕೀಯ ಸಿಬ್ಬಂದಿ ಆ್ಯಂಬುಲೆನ್ಸ್​ ಮೂಲಕ ಮಹಿಳೆಯನ್ನು ಕುಪ್ವಾರ ಕಡೆಗೆ ಕರೆದೊಯ್ದಿದ್ದರು.

ಆ್ಯಂಬುಲೆನ್ಸ್​ನಲ್ಲಿ ತೆರಳುತ್ತಿರುವಾಗ ಹೆರಿಗೆ ನೋವು ತೀವ್ರವಾಗಿದೆ. ಸಾಧನಾ ಪಾಸ್​ ಸಮೀಪ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ ತುರ್ತು ಹೆರಿಗೆಗೆ ತಯಾರು ಮಾಡಿಕೊಳ್ಳಲಾಗಿತ್ತು. ಕೆಲವು ತೊಂದರೆಗಳ ನಡುವೆಯೂ ಅನುಭವಿ ಸೇನಾ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವರನ ಮುಂದೆ ವಧುವಿಗೆ ಸಿಂಧೂರ ಇಡಿಸಿದ ಹುಚ್ಚು ಪ್ರೇಮಿ.. ಗ್ರಾಮಸ್ಥರಿಂದ ಥಳಿತ

ಇದರಿಂದಾಗಿ ಮಹಿಳೆ ಹಾಗು ಆಕೆಯ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಭಾರತೀಯ ಸೇನೆಯ ಕರ್ತವ್ಯವನ್ನು ಗೌರವಿಸಲು ಮತ್ತು ಮಗು ಹುಟ್ಟಿದ ಸ್ಥಳ ಗುರುತಿಸಿ ಮಗುವಿನ ಪೋಷಕರು ಸಾಧನಾ ಎಂದು ನಾಮಕರಣ ಮಾಡಿದ್ದಾರೆ ಎಂದು ಸೇನೆ ತಿಳಿಸಿದೆ. ಮಗುವಿನ ಕುಟುಂಬದವರು ಸೇನೆಗೆ ಕೃತಜ್ಞತೆ ತಿಳಿಸಿದ್ದಾರೆ. ಸೇನಾ ಸಿಬ್ಬಂದಿಗೂ ಇದೊಂದು ವಿಸ್ಮರಣೀಯ ಘಟನೆಯಾಗಿದೆ. ಕಾಶ್ಮೀರದ ನಾಗರಿಕರಿಗೆ ಭಾರತೀಯ ಸೇನೆಯ ಬೆಂಬಲ ಈ ಘಟನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಗರ್ಭಿಣಿಯ ಪ್ರಾಣ ಉಳಿಸಿದ್ದ ಸೇನೆ: ಕಳೆದ ತಿಂಗಳ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ನವಪಾಚಿ ಪ್ರದೇಶದಲ್ಲಿ ಆಸ್ಪತ್ರೆ ವ್ಯವಸ್ಥೆ ಇಲ್ಲದ ಕಾರಣ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಭಾರತೀಯ ಸೇನೆ ಹೆಗಲ ಮೇಲೆ ಹೊತ್ತುಕೊಂಡು ಹೆಲಿಪ್ಯಾಡ್​ವರೆಗೂ ಕರೆತಂದಿದ್ದರು. ಅಲ್ಲಿಂದ ಏರ್​ಲಿಪ್ಟ್​ ಮೂಲಕ ಕಿಶ್ತ್ವಾರ್​ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದರಿಂದ ಗರ್ಭಿಣಿ ಹಾಗು ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ ಉಳಿಯಿತು. ಸೈನಿಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.

ಬಸ್​ನಲ್ಲೇ ಹೆರಿಗೆ ಮಾಡಿಸಿದ ಮಹಿಳಾ ನಿರ್ವಾಹಕಿ: ಕೆಸ್​ಆರ್​ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾರ್ಗ ಮಧ್ಯೆಯೇ ಮಹಿಳಾ ನಿರ್ವಾಹಕಿಯೇ ಹೆರಿಗೆ ಮಾಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಮೇ 15 ರಂದು ನಡೆದಿತ್ತು. ಚಿಕ್ಕಮಗಳೂರು-ಬೆಂಗಳೂರು ಮಧ್ಯೆ ಸೋಮವಾರ ಮಧ್ಯಾಹ್ನ 1.25 ರ ಸುಮಾರಿಗೆ ಕೆಸ್​ಆರ್​ಟಿಸಿ ಬಸ್ ಸಂಚರಿಸುತ್ತಿತ್ತು. ಬಸ್​ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆವಿರದ ಕಾರಣ ಮಹಿಳಾ ಕಂಡಕ್ಟರ್​ ವಾಹನ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆ ಮಾಡಿಸಿದ್ದಾರೆ. ನಿರ್ವಾಹಕಿಯ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ: ಬಂಧಿತ ಮೂವರು ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ನಂಟು..!

Last Updated : May 19, 2023, 10:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.