ETV Bharat / bharat

ಇಬ್ಬರು ಉಗ್ರರ ಎನ್‌ಕೌಂಟರ್​ ವೇಳೆ ಗುಂಡೇಟು ತಿಂದಿದ್ದ ಸೇನೆಯ ಶ್ವಾನ ಝೂಮ್ ಇನ್ನಿಲ್ಲ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಭಾರತೀಯ ಸೇನೆಯ ಶ್ವಾನ ಝೂಮ್ ಮೃತಪಟ್ಟಿದೆ.

army-dog-zoom-passed-away
ಇಬ್ಬರು ಉಗ್ರರ ಎನ್‌ಕೌಂಟರ್​ಗೆ ನೆರವಾಗಿ ಗುಂಡೇಟು ತಿಂದಿದ್ದ ಸೇನೆಯ ಶ್ವಾನ ಝೂಮ್ ಇನ್ನಿಲ್ಲ
author img

By

Published : Oct 13, 2022, 4:38 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತೀಯ ಸೇನೆಯ ಶ್ವಾನ ಝೂಮ್ ಗುರುವಾರ ಕೊನೆಯುಸಿರೆಳೆದಿದೆ ಎಂದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅನಂತನಾಗ್‌ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಸದೆ ಬಡಿಯುವಲ್ಲಿ ಶ್ವಾನ ಝೂಮ್ ನೆರವಾಗಿತ್ತು. ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಎರಡು ಗುಂಡೇಟುಗಳಿಂದ ಶ್ವಾನ ಝೂಮ್ ಗಾಯಗೊಂಡಿತ್ತು. ಆದರೂ, ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಇದರ ಪರಿಣಾಮ ಭಯೋತ್ಪಾದಕರು ಹತರಾಗಿದ್ದರು.

  • #UPDATE | Army dog Zoom, under treatment at 54 AFVH (Advance Field Veterinary Hospital ), passed away around 12 noon today. He was responding well till around 11:45 am when he suddenly started gasping & collapsed: Army officials

    He had received 2 gunshot injuries in an op in J&K pic.twitter.com/AaEdKYEhSh

    — ANI (@ANI) October 13, 2022 " class="align-text-top noRightClick twitterSection" data=" ">

ಈ ಗುಂಡಿನ ಕಾಳಗದ ವೇಳೆ ಶ್ವಾನ ಝೂಮ್ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು. ನಂತರ ಶ್ವಾನ ಝೂಮ್​ನನ್ನು ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್ (54 AFVH)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅದು ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗ್ಗೆ 11:45ರ ಸುಮಾರಿಗೆ ಶ್ವಾನ ಝೂಮ್ ಉತ್ತಮವಾಗಿಯೇ ಸ್ಪಂದಿಸುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಏದುಸಿರು ಬಿಡಲು ಪ್ರಾರಂಭಿಸಿ ಕುಸಿದು ಬಿತ್ತು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಶ್ವಾನವು ಆಪರೇಷನ್ ಟ್ಯಾಂಗ್‌ಪಾವಾಸ್‌ನ ಯುದ್ಧ ತಂಡದಲ್ಲೂ ಭಾಗವಹಿಸಿತ್ತು.

ಇದನ್ನೂ ಓದಿ: ಕಾಡುಗಳ್ಳರ ಸಿಂಹಸ್ವಪ್ನ ಬಂಡೀಪುರದ ರಾಣಾ ಇನ್ನಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.