ನವದೆಹಲಿ : ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಇಂದು ಕೊರಿಯಾ ಗಣರಾಜ್ಯಕ್ಕೆ ಭೇಟಿ ನೀಡಿದ್ದು, ಮೂರು ದಿನಗಳ ಪ್ರವಾಸ ಇದಾಗಿದೆ.
ಜನರಲ್ ನರವಾಣೆ ಅವರು ಕೊರಿಯಾ ಗಣರಾಜ್ಯದ ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ನಾಗರಿಕ ನಾಯಕರನ್ನು ಭೇಟಿಯಾಗಲಿದ್ದಾರೆ. ಸಿಯೋಲ್‌ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ರಾಷ್ಟ್ರೀಯ ರಕ್ಷಣಾ ಸಚಿವರು, ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು, ಜಂಟಿ ಮುಖ್ಯಸ್ಥರು, ಅಧ್ಯಕ್ಷರು ಮತ್ತು ರಕ್ಷಣಾ ಸ್ವಾಧೀನ ಯೋಜನಾ ಆಡಳಿತ ಸಚಿವರನ್ನು (ಡಿಎಪಿಎ) ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅಲ್ಲಿ ಅವರು ಭಾರತ-ಆರ್ಒಕೆ ನಡುವಿನ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಹಿಮದ ಹೊದಿಕೆಯಲ್ಲಿ ಶಿಮ್ಲಾ.. ಸುಂದರ ದೃಶ್ಯ ನೀವೂ ಕಣ್ತುಂಬಿಕೊಳ್ಳಿ..
ಇಂಜೆ ಕಂಟ್ರಿಯಲ್ಲಿರುವ ಕೊರಿಯಾ ಯುದ್ಧ ತರಬೇತಿ ಕೇಂದ್ರ ಮತ್ತು ಡೇಜಿಯಾನ್‌ನಲ್ಲಿ ಗ್ಯಾಂಗ್‌ವಾನ್ ಪ್ರಾಂತ್ಯ ಮತ್ತು ಡೇಜಿಯಾನ್‌ನಲ್ಲಿನ ಅಡ್ವಾನ್ಸ್ ಡಿಫೆನ್ಸ್ ಡೆವಲಪ್‌ಮೆಂಟ್ (ಎಡಿಡಿ)ಗೆ ಭೇಟಿ ನೀಡಲಿದ್ದಾರೆ.
ಸೇನಾ ಮುಖ್ಯಸ್ಥರ ಭೇಟಿಯು ಉಭಯ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಕಾರ್ಯತಂತ್ರದ ಸಂಬಂಧಗಳ ಪ್ರತಿಬಿಂಬವಾಗಿ ಮತ್ತು ರಕ್ಷಣಾ ಹಾಗೂ ಭದ್ರತಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಮತ್ತಷ್ಟು ತೆರೆಯುವ ನಿರೀಕ್ಷೆಯಿದೆ.