ಶ್ರೀನಗರ(ಜಮ್ಮು ಕಾಶ್ಮೀರ): ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರು ಬುಧವಾರದಿಂದ ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿದ್ದು, ಅಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಸೇನಾ ಕಾರ್ಯಾಚರಣೆಗಳ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ ಮತ್ತು ರಜೌರಿಯ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನರವಾಣೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ವಾರಗಳಲ್ಲಿ ನರವಾಣೆ ಇದು ಎರಡನೇ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಸೇನಾ ಸಿಬ್ಬಂದಿಯ ಮುಖ್ಯಸ್ಥ ನರವಾಣೆ ಜಮ್ಮು ಪ್ರದೇಶಕ್ಕೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಸೇನೆ ಮತ್ತು ಕಮಾಂಡರ್ಗಳೊಂದಿಗೆ ಅವರು ಸಂವಾದ ನಡೆಸಲಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. ಇದಕ್ಕೂ ಮೊದಲು ಅಕ್ಟೋಬರ್ 18 ಮತ್ತು 19ರಂದು ನರವಾಣೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.
-
General MM Naravane #COAS carried out aerial reconnaissance of forward areas in Jammu Region. #COAS was also briefed by the commanders on ground on the prevailing security situation along the Line of Control. #IndianArmy#StrongAndCapable pic.twitter.com/nE2T3jpeGY
— ADG PI - INDIAN ARMY (@adgpi) November 3, 2021 " class="align-text-top noRightClick twitterSection" data="
">General MM Naravane #COAS carried out aerial reconnaissance of forward areas in Jammu Region. #COAS was also briefed by the commanders on ground on the prevailing security situation along the Line of Control. #IndianArmy#StrongAndCapable pic.twitter.com/nE2T3jpeGY
— ADG PI - INDIAN ARMY (@adgpi) November 3, 2021General MM Naravane #COAS carried out aerial reconnaissance of forward areas in Jammu Region. #COAS was also briefed by the commanders on ground on the prevailing security situation along the Line of Control. #IndianArmy#StrongAndCapable pic.twitter.com/nE2T3jpeGY
— ADG PI - INDIAN ARMY (@adgpi) November 3, 2021
ಎರಡು ದಿನಗಳ ಭೇಟಿಯ ವೇಳೆ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ವಿರುದ್ಧ ಸೇನಾ ಕಾರ್ಯಾಚರಣೆ ಬಗ್ಗೆಯೂ ಮೇಲ್ವಿಚಾರಣೆ ನಡೆಸಿದ್ದರು. ಇದರೊಂದಿಗೆ ಗಡಿ ಜಿಲ್ಲೆಗಳಾದ ರಜೌರಿ ಮತ್ತು ಪೂಂಚ್‌ಗೂ ಭೇಟಿ ನೀಡಿದ್ದರು.
ಮೆಂಧಾರ್, ಸುರನ್‌ಕೋಟೆ ಮತ್ತು ಥಾನಮಂಡಿ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರ ಪತ್ತೆಗೆ ಅಕ್ಟೋಬರ್ 11ರಿಂದ ಭಾರೀ ಕಾರ್ಯಾಚರಣೆ ನಡೆಯುತ್ತಿದ್ದು, ಈ ವೇಳೆಯೇ ನರವಾಣೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಅಕ್ಟೋಬರ್ 11ರಂದು ಭಯೋತ್ಪಾದಕರ ದಾಳಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೈನಿಕರ ಹತ್ಯೆಯ ನಂತರ ಭಾರತೀಯ ಸೇನೆ ಬೃಹತ್ ಕಾರ್ಯಾಚರಣೆ ಕೈಗೊಂಡಿತ್ತು. ಇದರ ಜೊತೆಗೆ ಜಮ್ಮು ಪ್ರದೇಶದ ರಜೌರಿ ಮತ್ತು ಪೂಂಚ್ನಲ್ಲಿ ಒಳನುಸುಳುವವರ ಪ್ರಮಾಣವೂ ಹೆಚ್ಚಾಗಿದೆ.
ಇದನ್ನೂ ಓದಿ: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ