ETV Bharat / bharat

ಪೊಲೀಸರ ಮಿಂಚಿನ ಕಾರ್ಯಾಚರಣೆ: ಇಂಡೋ-ಭೂತಾನ್​​ ಗಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ - ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಸೇರಿದಂತೆ ಆರು ಮಂದಿಯ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Arms and ammunition
Arms and ammunition
author img

By

Published : May 23, 2021, 9:08 PM IST

Updated : May 23, 2021, 9:45 PM IST

ಗುವಾಹಟಿ(ಅಸ್ಸೋಂ): ಇಲ್ಲಿನ ಇಂಡೋ-ಭೂತಾನ್​ ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಾರಂಗ್​ ಹಾಗೂ ತಮುಲ್ಪುರ್​​ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

ದಾರಂಗ್ ಜಿಲ್ಲೆ​ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ 8 ಜೋಡಿ ಸೇನಾ ಸಮವಸ್ತ್ರ ಹಾಗೂ ಮನೆಯಲ್ಲಿ ತಯಾರಿಸಿದ್ದ 5 ರೈಫಲ್​ ವಶಕ್ಕೆ ಪಡೆದಿದ್ದಾರೆ. ಇವರ ಕಾರ್ಯಾಚರಣೆ ಮಂಗಲ್ಡೊಯ್​ ಜಿಲ್ಲೆಯ ಚಾರ್​ ಪ್ರದೇಶದಲ್ಲಿ ನಡೆದಿತ್ತು.

ಇಂಡೋ-ಭೂತಾನ್​​ ಗಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ

ಈ ವೇಳೆ ಪೊಲೀಸ್​ ಸಮವಸ್ತ್ರ ಹಾಕಿಕೊಂಡಿದ್ದ ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದು, ಅವರನ್ನ ಹರುನುಲ್​ ರಶೀದ್​ ಮತ್ತು ಸಹರ್​ ಅಲಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕೋವಿಡ್​ ಸೋಂಕಿಗೊಳಗಾಗಿದ್ದೀರಾ? ಹೆದರಬೇಡಿ, ಈ ಗೈಡ್​ಲೈನ್ಸ್​​ ಪಾಲಿಸಿ ಗುಣಮುಖರಾಗಿ

ಮತ್ತೊಂದು ಕಾರ್ಯಾಚರಣೆ ವೇಳೆ ಶಾಂತಿಪುರ ದರಂಗಾ ಪ್ರದೇಶದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿವೆ. 10 ಕೈ ಗ್ರೆನೇಡ್​​, ಆರು 9 ಎಂಎಂ ಪಿಸ್ತೂಲ್​ ಬುಲೆಟ್ಸ್​, ಎಕೆ 47ನ ಒಂದು ಖಾಲಿ ಮ್ಯಾಗಜಿನ್, ಎಕೆ 47ನ 235 ಬುಲೆಟ್ಸ್​​, 9 ಲಿವರ್ಸ್​​(Levers) 3 ಡಿಟೋನೇಟರ್​(detonators), ಹಾಗೂ ಒಂದು ರಿವಾಲ್ವರ್​ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಕ್ಸಾ ಜಿಲ್ಲೆಯ ತಮುಲ್ಪುರ್​ನ ಇಂಡೋ-ಭೂತಾನ್​ ಗಡಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಈ ಕಾರ್ಯಾಚರಣೆಯ ನೇತೃತ್ವವನ್ನ ತಮುಲ್ಪುರ್​​ ಉಪವಿಭಾಗದ ಪೊಲೀಸ್ ಅಧಿಕಾರಿ ಅಸಿಮಾ ಕಾಲಿತಾ ಹಾಗೂ ಉಸ್ತುವಾರಿ ಪೊಲೀಸ್​​ ದ್ವಿಪೆನ್​ ಕಾಲಿತಾ ವಹಿಸಿಕೊಂಡಿದ್ದರು. ಈ ವೇಳೆ ನಾಲ್ವರನ್ನು ಬಂಧಿಸಲಾಗಿದ್ದು, ಇವರನ್ನ ಬೆಥೆಲಾ ಮುಚಾರಿ, ಬಿಲಾಶ್​ ಒವರಿ, ಸೋಮ್​ಖೌರ್​​ ಮುಚಾರಿ ಹಾಗೂ ಕೀರ್ತಿ ರಾಜ್​ ಬಸುಮಾಟರಿ ಎಂದು ಗುರುತಿಸಲಾಗಿದೆ.

Last Updated : May 23, 2021, 9:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.