ETV Bharat / bharat

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರು ಕಂಡಿದ್ದ ಕನಸಿನ ದೇಶವಾಗಿ ನಾವು ಪ್ರಗತಿ ಹೊಂದುತ್ತಿದ್ದೇವೆಯೇ? - Progress of India

ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರು ಕಂಡಿದ್ದ ಕನಸಿನ ದೇಶವಾಗಿ ನಾವು ಪ್ರಗತಿ ಹೊಂದುತ್ತಿದ್ದೇವೆಯೇ ಎಂಬ ಬಗ್ಗೆ ಎಲ್ಲರಿಗೂ ಸಂಶಯ ಕಾಡುವುದು ಸಹಜ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಭಾರತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿವೆ.

dcsdsd
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರು ಕಂಡಿದ್ದ ಕನಸಿನ ದೇಶವಾಗಿ ನಾವು ಪ್ರಗತಿ ಹೊಂದುತ್ತಿದ್ದೇವೆಯೇ?
author img

By

Published : Apr 16, 2021, 5:14 PM IST

ಹೈದರಾಬಾದ್​: ಹಲವಾರು ವಿಧಾನಗಳನ್ನು ಗಮನಿಸುವುದಾದರೆ, ಈ ಪ್ರಶ್ನೆಗೆ ಉತ್ತರ: ಹೌದು, ಒಂದು ದೇಶವಾಗಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ನಿರಾಕರಿಸಲು ಸಾಧ್ಯವಿಲ್ಲದಂತ ಅಂತಹ ಪ್ರಗತಿಯ ಐದು ಕ್ಷೇತ್ರಗಳನ್ನು ನಾನು ಉಲ್ಲೇಖಿಸುತ್ತೇನೆ

1. ಮದುವೆಗೆ ಇರಬೇಕಾದ ಒಪ್ಪಿಗೆಯ ವಯಸ್ಸು. ಅಂದರೆ, ’ವಿವಾಹಿತರು’ ಎಂದು ಕರೆಯಬಹುದಾದ ಸರಾಸರಿ ವಯಸ್ಸು ನಮ್ಮ ಸಮಾಜದಲ್ಲಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಬಾಲ ತಾಯಂದಿರು ಸಾಯುವ ಸಂಭವ, ಪ್ರಸವ ನಂತರದ ರಕ್ತಸ್ರಾವ ಹಾಗೂ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಇದು ನಿಜಕ್ಕೂ ನಾವೆಲ್ಲ ಕೃತಜ್ಞರಾಗಿರಬೇಕಾದ ಸಂಗತಿ.

2. ಭಾರತದಲ್ಲಿ ಜನನಾಂತರದ ಸರಾಸರಿ ಜೀವಿತಾವಧಿ ನಾಟಕೀಯವಾಗಿ ಏರಿಕೆ ಕಂಡಿದೆ. ವ್ಯಾಪಕವಾದ ರೋಗನಿರೋಧಕ ಲಸಿಕೆ ಕಾರ್ಯಕ್ರಮಗಳು ಮತ್ತು ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಸುಧಾರಣೆಯಾಗಿದ್ದರೂ,ಇದು ಇನ್ನೂ ಸಾಕಷ್ಟು ಅಸಮರ್ಪಕ ಮತ್ತು ಅಸಮರ್ಥವಾಗಿಯೇ ಉಳಿದಿದೆ.

3. ನಗರ ಭಾರತದಲ್ಲಿ ಅಸ್ಪೃಶ್ಯತೆಯ ಅಭ್ಯಾಸ ಬಹುತೇಕ ಇಲ್ಲವಾಗುತ್ತಿದೆ. ನಮ್ಮ ಪಟ್ಟಣಗಳು ಮತ್ತು ನಗರಗಳಲ್ಲಿ ಸಾಮಾಜಿಕ ತಾರತಮ್ಯ ಎದುರಿಸುತ್ತಿದ್ದ ಹಿಂದುಳಿದ ವರ್ಗಗಳಲ್ಲಿ ಈಗ ಮೊದಲಿಗಿಂತ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ. ಹೀಗಿದ್ದಾಗ್ಯೂ, ಈ ವಿಷಯದಲ್ಲಿ ಗ್ರಾಮೀಣ ಭಾರತದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಕಂಡುಬಂದಿಲ್ಲ.

4. ಚುನಾವಣೆಗಳು ಈಗ ರಾಜಕೀಯ ಆಯ್ಕೆಯನ್ನು ಭಾರತದಲ್ಲಿ ಪ್ರಜಾಪ್ರಭುತ್ವದ ದಿನಚರಿಯನ್ನಾಗಿ ಮಾಡಿವೆ, ಚುನಾವಣಾ ವ್ಯವಸ್ಥೆಯನ್ನು ಆಡಳಿತಾತ್ಮಕ ಶಕ್ತಿ, ತಾಂತ್ರಿಕ ಬೆಂಬಲ ಮತ್ತು ಸಾಮೂಹಿಕ ಸಹಕಾರದ ನಡುವಿನ ಸಮನ್ವಯದ ಅದ್ಭುತ ಎಂದು ಮಾತ್ರ ಕರೆಯಬಹುದು - ಇದು ನಿಜಕ್ಕೂ ಸಾಧನೆಯ ಸಂಕೇತ.

5. ಭಾರತದಾದ್ಯಂತ ರಸ್ತೆ, ರೈಲು ಮತ್ತು ವಾಯು ಸಂಪರ್ಕವು ನಾಟಕೀಯವಾಗಿ ಸುಧಾರಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಊಹಿಸಲೂ ಆಗದ ರೀತಿಯಲ್ಲಿ ಪ್ರಯಾಣ ಮತ್ತು ಸಂವಹನಗಳು ಹೆಚ್ಚು ಸುಲಭವಾಗಿವೆ.

ಅದಾಗ್ಯೂ ಇನ್ನೂ ಅನೇಕ ವಿಧಗಳಲ್ಲಿ ನಾವು ಅಂತಹ ಪ್ರಗತಿಯನ್ನು ಸಾಧಿಸಿಲ್ಲ. ಇದಕ್ಕೂ ನಾನು ಮತ್ತೆ ಐದು ಕಾರಣಗಳನ್ನು ನೀಡುತ್ತೇನೆ.

1 ನಮ್ಮ ಸಂವಿಧಾನವು ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತಿದ್ದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರು ಹೆಚ್ಚು ಶೋಷಣೆಗೆ ಒಳಪಡುತ್ತಿರುವ ಕೌಟುಂಬಿಕ ಹಿಂಸಾಚಾರ, ಹಾಗೂ ಮಾನವ ಕಳ್ಳಸಾಗಣೆಯ ಮೂಲಕ ಮಕ್ಕಳ ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಪಡಿಸುತ್ತಿರುವುದು ಅಬಾಧಿತವಾಗಿ ಮುಂದುವರೆದಿದೆ.

2. ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಹೊಂದಿರುವ ಹಾಗೂ ಅವರ ಪ್ರಮುಖ, ಹಸಿರು ಕ್ರಾಂತಿಯ ಹರಿಕಾರ ಮತ್ತು ಅದು ಜಾರಿಗೊಳ್ಳಲು ಕಾರಣಕರ್ತರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಹಾಗೂ ಹೈನು ಉತ್ಪನ್ನಗಳನ್ನು ಹೆಚ್ಚು ಸಮೃದ್ಧವಾಗಿ ಉತ್ಪಾದನೆ, ವಿತರಣೆ ಹಾಗೂ ಲಭ್ಯವಾಗುವಂತೆ ಮಾಡಿರುವ ’ಅಮುಲ್’ ಬ್ರ್ಯಾಂಡ್‌ನ ಡಾ. ವರ್ಗೀಸ್ ಕುರಿಯನ್ ಸಾಧನೆಯ ಹೊರತಾಗಿಯೂ, ಬೆಳೆಯುತ್ತಿರುವ ವರ್ಷಗಳಲ್ಲಿ ಮಕ್ಕಳಲ್ಲಿ ಕಂಡು ಬರುತ್ತಿರುವ ವ್ಯಾಪಕ ಪ್ರಮಾಣದ ಅಪೌಷ್ಟಿಕತೆಯು ಗ್ರಾಮೀಣ ಭಾರತ ಮತ್ತು ನಗರ / ಉಪನಗರ ಕೊಳೆಗೇರಿಗಳ ಭಾರತದಲ್ಲಿ ತುಂಬಾ ಸ್ಪಷ್ಟವಾಗಿ ಕಾಣುತ್ತಿದೆ.

3. ಆಕ್ರಮಣಕಾರಿ ‘ಅಭಿವೃದ್ಧಿ’ ಮತ್ತು ‘ನಿರ್ಮಾಣ’ ಲಾಬಿಯು ಅತ್ಯಂತ ಸಕ್ರಿಯವಾಗಿದ್ದು, ಇದರಿಂದಾಗಿ ಬುಡಕಟ್ಟು ಜನಾಂಗದವರು ಸೇರಿದಂತೆ ದಲಿತರ ವಿರುದ್ಧದ ಶೋಷಣೆ ಮತ್ತು ಪರಸ್ಪರರ ವಿರುದ್ಧದ ಹಿಂಸಾಚಾರ ವ್ಯಾಪಕವಾಗಿಯೇ ಮುಂದುವರಿದಿದೆ. ಬೆಜ್ವಾಡಾ ವಿಲ್ಸನ್ ಬೆಳಕಿಗೆ ತಂದ ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವಂತಹ ವಿದ್ಯಮಾನವು ಈ ಶೋಷಣೆ ಮತ್ತು ಹಿಂಸೆಯ ಅತ್ಯಂತ ಗೋಚರ ‘ಅಗೋಚರ’ ರೂಪವಾಗಿದೆ.

4. ನಮ್ಮ ಚುನಾವಣೆಗಳಲ್ಲಿ ಅತಿದೊಡ್ಡ, ಕಠಿಣ ಮತ್ತು ಸದಾ ಜಯಶಾಲಿಯಾಗುವ ಅಭ್ಯರ್ಥಿಗಳೆಂದರೆ ಶ್ರೀ ಸಂಪತ್ತು (ಹಣ) ಮತ್ತು ಅದರ ಸೋದರಸಂಬಂಧಿ ಶ್ರೀ ತೋಳ್ಬಲ. ಈ ಎರಡು ತಲೆಯ ರಾಕ್ಷಸನಿಂದಾಗಿ ಚುನಾವಣಾ ಪ್ರಕ್ರಿಯೆಯೇ ವಿರೂಪಗೊಂಡಿದ್ದು, ಚುನಾವಣಾ ಪ್ರಜಾಪ್ರಭುತ್ವವನ್ನು ಅಪಹಾಸ್ಯಕ್ಕೆ ಈಡು ಮಾಡುತ್ತಿದೆ.

5. ದೈಹಿಕವಾಗಿ, ನಾವು ಈಗ ಪರಸ್ಪರ ಜೋಡಿಸಲ್ಪಟ್ಟಿದ್ದರೂ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನಾವು ಒಗ್ಗಟ್ಟಿನಿಂದ ದೂರವೇ ಇದ್ದೇವೆ. ನಗರ ಮತ್ತು ಮಹಾನಗರ ಭಾರತ ಮತ್ತು ಬಡ ಭಾರತದಲ್ಲಿ ತಾಂತ್ರಿಕವಾಗಿ ಸಶಕ್ತ ಹಾಗೂ ಆರ್ಥಿಕವಾಗಿ ಒತ್ತಡಕ್ಕೊಳಗಾದ ವರ್ಗದ ನಡುವಿನ ಅಂತರವು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಅದು ಮೇಲ್ಮುಖವಾಗಿ ಬೆಳೆಯುತ್ತ ಹೊರಟಿದೆ. ನಮ್ಮ ಕೃಷಿ ಸಮುದಾಯವು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಈ ಪರಿಸ್ಥಿತಿಯನ್ನು ಯಾವುದೇ ಒಬ್ಬ ವ್ಯಕ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಖ್ಯಾತ ಬರಹಗಾರ ಪಾಲಗುಮ್ಮಿ ಸಾಯಿನಾಥ್ ಜಗತ್ತಿನ ಗಮನಕ್ಕೆ ತಂದಿದ್ದಾರೆ.

ಅನೇಕ ವಿಷಯಗಳಲ್ಲಿ ನಾವಿನ್ನೂ ಸಾಧನೆಯಿಂದ ದೂರ ದೂರ

ದೇಶವು ಸ್ವತಂತ್ರವಾದ 7 ದಶಕಗಳ ನಂತರವೂ ನಾವಿನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿದ್ದೇವೆ. ಬಡತನ, ನಿರುದ್ಯೋಗ, ಅಪೌಷ್ಟಿಕತೆ ಮತ್ತು ಲಿಂಗ ಅಸಮಾನತೆಯ ವಿಷಯದಲ್ಲಿ ನಾವು ಅನೇಕ ಸಮೀಕ್ಷೆಗಳಲ್ಲಿ ಮೊದಲ ಸಾಲಿನಲ್ಲಿ ಇದ್ದೇವೆ. ಇದು ನಮ್ಮೆಲ್ಲರಿಗೂ ಅವಮಾನ ತರುವಂಥದಲ್ಲವೆ?

ಅತ್ಯಂತ ‘ಅಭಿವೃದ್ಧಿ ಹೊಂದಿದ’ ಯಾವ ದೇಶವೂ ’ಅಭಿವೃದ್ಧಿ’ಯಾಗದೇ ನಿಂತಿಲ್ಲ. ಆದ್ದರಿಂದ, ‘ಅಭಿವೃದ್ಧಿ ಹೊಂದುತ್ತಿರುವ’ ರಾಷ್ಟ್ರವಾಗಿರುವುದು ತಪ್ಪೂ ಅಲ್ಲ, ಅಸಾಧಾರಣ ಸಂಗತಿಯೂ ಅಲ್ಲ. ನಮ್ಮ ಪಂಚವಾರ್ಷಿಕ ಯೋಜನೆಗಳು ಬೇರೆ ಬೇರೆ ರೀತಿಯ ಯಶಸ್ಸಿನ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದು, ಅದು ಕೇವಲ ಶ್ರೀಮಂತ ಭಾರತದ ನಿರ್ಮಾಣವಾಗಿರದೇ ನ್ಯಾಯಯುತ ಭಾರತದ ನಿರ್ಮಾಣದ ಉದ್ದೇಶ ಹೊಂದಿತ್ತು. ಇತ್ತೀಚಿನ ದಿನಗಳಲ್ಲಿ ನಮ್ಮ ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ ಸಮಸ್ಯೆ ಇದ್ದು, ಅನ್ಯಾಯ ಮತ್ತು ಪರಿಸರದ ಪರಿಭಾಷೆಯಲ್ಲಿ ಅದು ಅತೀವವಾಗಿ, ಅಪಾಯಕಾರಿಯಾಗಿ ಹಾಗೂ ಅತ್ಯಂತ ತಪ್ಪಾಗಿ ನಿರ್ದೇಶಿಸಲ್ಪಟ್ಟಿದೆ.

ಸಾರ್ವಜನಿಕ ನೀತಿ ಮತ್ತು ಖಾಸಗಿ ಹೂಡಿಕೆಗಳು ಹೇಗೆ ಹೊರಟಿವೆ ಎಂದರೆ ಗ್ರಾಮೀಣ ಭೂಮಿ ಎಂದರೆ ಕೈಗಾರಿಕಾ ಎಸ್ಟೇಟ್ ಎಂದೂ, ಕೆರೆಗಳು ಎಂದರೆ ಭವಿಷ್ಯದ ಎತ್ತರದ ಪ್ಲಾಟ್‌ಗಳೆಂದೂ, ಬಡ ಗ್ರಾಮೀಣರ ಮನೆ ಅಥವಾ ಕೃಷಿ ಭೂಮಿ ಎಂದರೆ ಹಣ ತಂದು ಕೊಡುವ ರಿಯಲ್ ಎಸ್ಟೇಟ್ ಎಂದೂ, ನದಿಗಳು ಎಂದರೆ ವಿದ್ಯುತ್ ಎಂದೂ, ಕಾಡುಗಳು ಎಂದರೆ ಮರಮುಟ್ಟು ಎಂದೂ ಹಾಗೂ ಬಂಡೆಗಳು ಎಂದರೆ ಸಿಮೆಂಟ್ ಎಂದೂ ಅರ್ಥೈಸಲ್ಪಟ್ಟಿವೆ. ನಾವು ನಮ್ಮೆಲ್ಲ ಸಂಪನ್ಮೂಲಗಳನ್ನು ಸುರಿಯುತ್ತಿರುವುದು ನೆಲಕ್ಕೆ. ಆ ಮೂಲಕ ನಾವು ಎರಡು ರೀತಿಯ ಭಾರತಗಳನ್ನು ನಿರ್ಮಿಸಲು ಹೊರಟಿದ್ದೇವೆ. ಈ ಪೈಕಿ ಒಬ್ಬರು ಶ್ರೀಮಂತರು ಮತ್ತು ಇನ್ನೊಬ್ಬರು ಬಡವರು. ದೇಶದೊಳಗಿನ ಈ ಆರ್ಥಿಕ ವಿಭಜನೆಯು ಚುನಾವಣಾ ಸಮಯದಲ್ಲಿ ರಾಜಕೀಯ ಯುದ್ಧವಾಗಿ ಸ್ಫೋಟಿಸುವುದನ್ನು ಹಣದ ಆಟವು ತಡೆಯುತ್ತಿದ್ದು, ಇದು ನಮ್ಮ ಪ್ರಜಾಪ್ರಭುತ್ವ ರಾಜಕೀಯಕ್ಕೆ ಸವಾಲು ಹಾಕುತ್ತದೆ. ತೀರಾ ತಡವಾಗುವುದಕ್ಕೂ ಮುನ್ನ, ನಮ್ಮ ಅಮೂಲ್ಯವಾದ ಸ್ವಾತಂತ್ರ್ಯದ ಪರಂಪರೆಯನ್ನು ಪ್ರಪಾತದ ಅಂಚಿನಿಂದ ಹಿಂದಕ್ಕೆ ಎಳೆದುಕೊಳ್ಳಬೇಕಾದ ಅವಶ್ಯಕತೆಯಿದೆ.

ಚೀನಾ, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದವು. ಆದರೆ ಅವು ಭಾರತಕ್ಕಿಂತ ಬಹಳ ಮುಂದಿವೆ! ಅನೇಕ ರಂಗಗಳಲ್ಲಿ ನಾವು ಈ ದೇಶಗಳೊಂದಿಗೆ ಏಕೆ ಸ್ಪರ್ಧಿಸುತ್ತಿಲ್ಲ !?

ಇತರರೊಂದಿಗೆ ಸ್ಪರ್ಧಿಸುವುದಕ್ಕಲ್ಲ ಸ್ವಾತಂತ್ರ್ಯ

ಇತರರೊಂದಿಗೆ ಸ್ಪರ್ಧಿಸುವುದರಿಂದಲ್ಲ ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡಿರುವುದು. ಸ್ವರಾಜ್‌ಗೆ ನಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನದಿಂದಾಗಿ ಸ್ವಾತಂತ್ರ್ಯ ನಮ್ಮ ಬಳಿಗೆ ಬಂದಿದ್ದು. ಐರ್ಲೆಂಡ್, ಅಮೆರಿಕಗಳಂತೆ ಇತರ ಕಡೆ ನಡೆದಿದ್ದ ಸ್ವಾತಂತ್ರ್ಯ ಸಂಗ್ರಾಮಗಳ ಕುರಿತು ಮಹಾತ್ಮ ಗಾಂಧಿಯವರಿಗೆ ಗೊತ್ತಿತ್ತು. ಆದರೆ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಅದ್ಭುತ ಫಲಿತಾಂಶಗಳನ್ನು ಹೊಂದಿದ್ದ ಒಂದು ವಿನೂತನ ಮತ್ತು ಸ್ವತಂತ್ರವಾಗಿ ರೂಪಿಸಿದ್ದ ನಿರ್ದೇಶನವನ್ನು ನೀಡಿದರು. ಇದರ ಜೊತೆಗೆ, ಎರಡನೆಯ ಮಹಾಯುದ್ಧ ಕೂಡಾ ಜಾಗತಿಕ ಪರಿಸ್ಥಿತಿಯನ್ನು ರೂಪಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿತು. ಇದೇ ರೀತಿ ಡಾ. ಅಂಬೇಡ್ಕರ್ ಕೂಡಾ ಇತರ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಸಂವಿಧಾನಗಳ ನಿಬಂಧನೆಗಳನ್ನು ‘ನಕಲಿಸದೆ’ ಅವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ, ಅಂದರೆ, ನ್ಯಾಯದ ಮೊದಲು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬಂತಹ ನೀತಿಗಳ ಮೂಲಕ ಸಂವಿಧಾನದ ಕರಡಿಗೆ ವಿಶಿಷ್ಟ ಭಾರತೀಯ ದೃಷ್ಟಿಕೋನವನ್ನು ನೀಡಿದರು. ಆದ್ದರಿಂದ, ನಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸುವ ಅಥವಾ ನಮ್ಮದೇ ಆದ ಹಣೆಬರಹವನ್ನು ಪೂರೈಸಲು ಇತರರ ಸಂವಿಧಾನವನ್ನು ನಕಲಿ ಮಾಡುವ ಅಥವಾ ಆ ಮೂಲಕ ಅವರೊಂದಿಗೆ ಸಮವಾಗಿ ಸ್ಪರ್ಧಿಸುವುದು ದಾರಿಯಾಗಬೇಕಿದ್ದಿಲ್ಲ.

ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಜನರನ್ನು ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತವೆ. ಹಣ, ಮದ್ಯ ಮತ್ತು ತೋಳ್ಬಲಗಳು ಪ್ರಮುಖ ಪಾತ್ರ ವಹಿಸುತ್ತವೆ! ಇಂತಹ ಚುನಾವಣಾ ಪ್ರಕ್ರಿಯೆಯೇ ಅನೇಕ ದುಷ್ಕೃತ್ಯಗಳಿಗೆ ಮೂಲ ಕಾರಣವಾಗಿದೆ.

ಅವುಗಳನ್ನು ತಡೆಯಲು ನಮ್ಮ ಚುನಾವಣಾ ವ್ಯವಸ್ಥೆಗೆ ಏಕೆ ಸಾಧ್ಯವಾಗಲಿಲ್ಲ?

ನಾವು ಏನಾಗಿದ್ದೇವೆಯೋ ಹಾಗಿವೆ ನಮ್ಮ ರಾಜಕೀಯ ಪಕ್ಷಗಳು. ಅದೇ ರೀತಿ ಮತದಾರ ಹೇಗಿದ್ದಾನೋ ಚುನಾವಣಾ ವ್ಯವಸ್ಥೆಯೂ ಹಾಗೇ ಆಗುತ್ತದೆ.

ಭಾರತವು ‘ಬಲವಾದ ಕೇಂದ್ರ - ದುರ್ಬಲ ರಾಜ್ಯಗಳ’ ಗತಿಯತ್ತ ಸಾಗುತ್ತಿದೆ. ಇದು ಮುಂದುವರಿದರೆ ಮುಂದಿನ ದಿನಗಳಲ್ಲಿ ಏನಾಗಬಹುದು?

ನಮ್ಮ ಅನುಭವದಲ್ಲಿ, ದುರ್ಬಲ ಕೇಂದ್ರ ಮತ್ತು ಬಲವಾದ ರಾಜ್ಯಗಳನ್ನು ಸಹ ನಾವು ಹೊಂದಿದ್ದೆವು. ಅದು ನಮ್ಮ ಸಮಸ್ಯೆಗಳಿಗೆ ಉತ್ತರವಾಗಿರಲಿಲ್ಲ. ಯಾರು ಬಲಶಾಲಿ ಅಥವಾ ದುರ್ಬಲರು ಎಂಬುದಲ್ಲ ವ್ಯತ್ಯಾಸ ಉಂಟು ಮಾಡುವುದು. ಬದಲಾಗಿ, ಯಾರು ನ್ಯಾಯಪರ ಮತ್ತು ಅನ್ಯಾಯ ಪರ ಎಂಬುದು ಅದನ್ನು ನಿರ್ಧರಿಸುತ್ತದೆ.

ಶ್ರೀಮಂತ - ಬಡವ ಎಂಬ ವಿಭಜನೆ ಹೆಚ್ಚುತ್ತಿದೆ. ಬಹು ಕೋಟ್ಯಾಧೀಶರರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗವು ಬಡತನ ರೇಖೆಗಿಂತ ಕೆಳಗಿದೆ! ಸಂವಿಧಾನದ ವಾಸ್ತುಶಿಲ್ಪಿಗಳು ಇದನ್ನು ಗ್ರಹಿಸಲು ವಿಫಲರಾಗಿದ್ದಾರೆಯೆ?

ಸಂವಿಧಾನವು ನಮ್ಮನ್ನು ವಿಫಲವಾಗಿಸಿಲ್ಲ, ನಾವು ಸಂವಿಧಾನವನ್ನು ವಿಫಲಗೊಳಿಸಿದ್ದೇವೆ. (ನನ್ನ ನುಡಿಗಟ್ಟು ಅಲ್ಲ, ಎರವಲು ಪಡೆದಿದ್ದು). ಅದರ ನಿರ್ಮಾತೃಗಳು ನಮ್ಮ ಗಣರಾಜ್ಯವನ್ನು ನಿಯಂತ್ರಿಸುವ ಕೆಲಸವನ್ನು ಮಾಡಿದ್ದಾರೆ, ಅದನ್ನು ನಿರ್ವಹಿಸುವ ಕೆಲಸವನ್ನು ನಾವು ಮಾಡಿಲ್ಲ, ಅಷ್ಟೇ.

ಭಾರತ ಸ್ವಾತಂತ್ರ್ಯವಾಗುವುದಕ್ಕೂ ಮುನ್ನವೇ ಬಲವಾದ ಸಾರ್ವಜನಿಕ ವಲಯದ ಅಡಿಪಾಯವನ್ನು ಎಲ್ಲಾ ರಂಗಗಳಲ್ಲಿಯೂ ಹಾಕಲಾಗಿತ್ತು. ಆದರೆ ಸರ್ಕಾರಗಳು ಸಾರ್ವಜನಿಕ ವಲಯದಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿವೆ. ಹಾಗಾದರೆ, ಸಾರ್ವಜನಿಕ ವಲಯದ ಭವಿಷ್ಯ ಹೇಗಿರುತ್ತದೆ?

ಥೇಟ್ ನಮ್ಮ ಸಾರ್ವಜನಿಕರು ಇರುವಂತೆಯೇ.

ಭಾರತೀಯ ಸಮಾಜವು ಅಂತರ್ಗತವಾಗಿ ಜಾತ್ಯತೀತವಾಗಿದೆಯೇ? ಹಾಗಿದ್ದಲ್ಲಿ, ನಮ್ಮ ಸಮಾಜದಲ್ಲಿ ಇತ್ತೀಚೆಗೆ ಕಂಡಬರುತ್ತಿರುವ ಬಲಪಂಥೀಯ ಬದಲಾವಣೆಗೆ ಕಾರಣಗಳು ಯಾವುವು.

ಬಲ ಮತ್ತು ಎಡ ಎಂಬುವುಗಳು ಸ್ಥಳಗಳಲ್ಲ, ಬದಲಾಗಿ ಅವು ನಿರ್ದೇಶನಗಳು. ಅವು ಬದಲಾಗಬಹುದು, ಹಾಗೂ ನಂತರವೂ ಮಾಡಬಹುದು. ಭಾರತವು ಒಂದು ಸ್ಥಳವೇ ಹೊರತು ನಿರ್ದೇಶನವಲ್ಲ. ತನ್ನ ಮೇಲೆ ಬೀಸುವ ರಾಜಕೀಯ ಗಾಳಿಯ ನಿರ್ದೇಶನಗಳನ್ನು ಮೀರಿ ಅದು ಬದುಕುತ್ತಿದೆ ಮತ್ತು ಮುಂದೆಯೂ ಮೀರಲಿದೆ.

ಕಾಂಗ್ರೆಸ್ ಮತ್ತು ಎಡ ಪಕ್ಷಗಳಂತಹ ಕೇಂದ್ರಿತ ಪಕ್ಷಗಳು ಯಾವುದೇ ಕಾರ್ಯಸಾಧು ಪರ್ಯಾಯವನ್ನು ನಿಕಟ ಭವಿಷ್ಯದಲ್ಲಿ ಒದಗಿಸಬಲ್ಲವೆ?

ಎಡಪಂಥೀಯ ಒಲವು ತೋರುವಲ್ಲಿ ಕಾಂಗ್ರೆಸ್ ಹಾಗೂ ಪ್ರಜಾಪ್ರಭುತ್ವವಾದಿಗಳಾಗಿ ಎಡಪಂಥೀಯರು ಮುಂದುವರಿದರೆ ಅವರು ಶಕ್ತರಾಗಿಯೇ ಉಳಿಯುತ್ತಾರೆ. ಒಂದು ವೇಳೆ ಅವರು ಕೈಜೋಡಿಸಿ ಕೆಲಸ ಮಾಡಿದರೆ ಹಾಗೂ ಇತರ ಪ್ರಜಾಪ್ರಭುತ್ವ ಪಕ್ಷಗಳೊಂದಿಗೆ, ಅವುಗಳ ಅಹಂಕಾರವನ್ನು ಲೆಕ್ಕಿಸದೆ ಸಹಕರಿಸಿದರೆ, ಅವರನ್ನು ಮೀರಿಸುವುದು ಸಾಧ್ಯವಿಲ್ಲ. ಬ್ರಿಟನ್ ನಮ್ಮನ್ನು ‘ವಿಭಜಿಸಿ ಆಳಲಿಲ್ಲ’. ನಾವು ವಿಭಜಿಸಿಕೊಂಡೆವು ಹಾಗೂ ಅವರು ಆಳಿದರು. (ಇದು ಮತ್ತೆ ನನ್ನ ಬುದ್ಧಿವಂತ ನುಡಿಗಟ್ಟು ಅಲ್ಲ; ನಾನು ಅದನ್ನು ಎರವಲು ಪಡೆಯುತ್ತಿದ್ದೇನೆ. ಮಾಧ್ಯಮಗಳಿಗೆ ಉತ್ತರಗಳನ್ನು ಬರೆಯುವಾಗಲೂ ನಾವು ಪ್ರಾಮಾಣಿಕವಾಗಿರಬೇಕು!)

ನಮ್ಮ ದೇಶದ ಒಕ್ಕೂಟ ಚೌಕಟ್ಟಿನ ನೀತಿಯ ಉಲ್ಲಂಘನೆಗೆ ನಾವು ಸಾಕ್ಷಿಯಾಗಿದ್ದೇವೆ. ಅಭಿವೃದ್ಧಿ ಹೊಂದಿದವರು ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗುತ್ತಾರೆ ಎಂದು ಹೇಳುತ್ತಾರೆ ಕೆಲವು ಬುದ್ಧಿಜೀವಿಗಳು. ಭವಿಷ್ಯದ ಪರಿಣಾಮವನ್ನು ನೀವು ಹೇಗೆ ಗ್ರಹಿಸುತ್ತೀರಿ?

ಭಾರತದ ದಕ್ಷಿಣ ಮತ್ತು ಈಶಾನ್ಯ ಭಾಗವು ನಮ್ಮ ಸಂವಿಧಾನದ ಸಂಯುಕ್ತ ಆತ್ಮಕ್ಕೆ ಭದ್ರಕೋಟೆಯಾಗಿಯೇ ಉಳಿಯಬೇಕು. ಆ ಎರಡೂ ಪ್ರದೇಶಗಳು ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಪೋಷಿಸುತ್ತಿದ್ದವು ಹಾಗೂ ನಂತರ ಆ ವಿಚಾರಗಳು ಪ್ರಜಾಪ್ರಭುತ್ವ ಭಾರತದಲ್ಲಿ ಕಾರ್ಯಸಾಧ್ಯವಲ್ಲದ ಮತ್ತು ಅನಗತ್ಯ ಎಂದು ಬಿಟ್ಟುಕೊಟ್ಟವು. ಕೇಂದ್ರ ಮತ್ತು ರಾಜ್ಯಗಳ ಅಧಿಕಾರಗಳ ನಡುವೆ ಭಾರತಕ್ಕೆ ಸರಿಯಾದ ಸಮತೋಲನವನ್ನು ನೀಡಲು ಅವು ಆದರ್ಶಯುತವಾಗಿ ಸೂಕ್ತವಾಗಿವೆ.

ಆದರೆ, ನಾವು ಈಗ ಭೌಗೋಳಿಕ-ರಾಜಕೀಯ ರಾಜ್ಯಗಳ ಬಗ್ಗೆ, ಸಹಜವಾಗಿ ಅದು ಜೀವನದ ಕಟು ವಾಸ್ತವ ಹಾಗೂ ಮುಂದೆಯೂ ಹಾಗೇ ಇರಲಿದೆ ಎಂದಾಗಿದ್ದಾಗಲೂ ಕೂಡಾ, ಹಾಗೆ ಯೋಚಿಸುವುದನ್ನು ಮೀರಿ ಮುಂದೆ ಹೋಗಬೇಕಾಗಿದೆ, (ಮುಂಬರುವ ವರ್ಷಗಳಲ್ಲಿ ಇನ್ನಷ್ಟು ರಾಜ್ಯಗಳು ರೂಪುಗೊಳ್ಳುವ ಸಾಧ್ಯತೆಯಿದೆ). ಭಾರತಕ್ಕೆ ಅದರ ಪರಿಸರ ಸ್ಥಳಗಳನ್ನು ಗೌರವಿಸುವಂತಹ ಹೊಸ ಭೌಗೋಳಿಕ ನಕಾಶೆಯ (ಕಾರ್ಟೋಗ್ರಫಿ) ಕುರಿತು ನಾವು ಯೋಚಿಸಬೇಕಿದೆ ಎಂದು ನಾನು ಕೂಡಾ ದೃಢವಾಗಿ ನಂಬುತ್ತೇನೆ. ಭಾರತದ ಪ್ರಸ್ತುತ ರಾಜಕೀಯ ನಕ್ಷೆ ಮತ್ತು ಅದರ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ, ನಮ್ಮ ಹಿತಕ್ಕಾಗಿ, ಮರುಭೂಮಿ ಭಾರತ, ಅರಣ್ಯ ಭಾರತ, ತೀರ ಭಾರತ, ಹಿಮಾಲಯ ಭಾರತ ಮತ್ತು ಇನ್ನಿತರ ಪ್ರದೇಶಗಳನ್ನು ಗುರುತಿಸುವ ಭಾರತದ ಪರಿಸರ ನಕ್ಷೆಯನ್ನು ನಾವು ಹೊಂದಬೇಕಿದೆ. ಇದು ಅವುಗಳನ್ನು ಸಂರಕ್ಷಿಸಲಿಕ್ಕಾಗಿಯೇ ಹೊರತು ಅವುಗಳನ್ನು ಶೋಷಿಸಲು ಅಲ್ಲ, ಅವುಗಳನ್ನು ರಕ್ಷಿಸಲಿಕ್ಕೇ ಹೊರತು ಅವುಗಳನ್ನು ಹರಿದು ಹಾಕಲು ಅಲ್ಲ. ನಮ್ಮ ದ್ವೀಪಗಳು - ಅಂಡಮಾನ್ ಮತ್ತು ಲಕ್ಷದ್ವೀಪಗಳನ್ನು ನಾವು ಭಾರತದ ತಾಂತ್ರಿಕ-ವಾಣಿಜ್ಯ ಅಭಿವೃದ್ಧಿಯ ಸಂಭಾವ್ಯ ಸಂಪನ್ಮೂಲಗಳಾಗಿ ನೋಡುತ್ತೇವೆಯೇ ಹೊರತು ಅವು ದುರ್ಬಲವಾದ ವಾಸಸ್ಥಳಗಳೆಂದಾಗಲಿ, ಇವು ಜಾಗತಿಕ ಅನಿಶ್ಚಿತತೆ ಮತ್ತು ಮೌಲ್ಯದ ಪರಿಸರ-ಮೇಲ್ಮೈಗಳಾಗಿ ಎಂದಾಗಲಿ, ಹೆಚ್ಚು ವಿಭಿನ್ನ ಮತ್ತು ಸೂಕ್ಷ್ಮ ಮಾನವ ಜನಸಂಖ್ಯೆಯೊಂದಿಗೆ ಪಾಲಿಸಬೇಕಾದ ಅರ್ಹತೆ ಹೊಂದಿವೆ ಎಂದಾಗಲಿ ಅಲ್ಲ.

ಒಕ್ಕೂಟ ವ್ಯವಸ್ಥೆ ಎಂಬುದು ಕೇವಲ ರಾಜಕೀಯ ಅಧಿಕಾರ ಮತ್ತು ತೆರಿಗೆಗಳನ್ನು ಮಾತ್ರ ಹಂಚಿಕೊಳ್ಳುವ ಬಗ್ಗೆ ಮಾತ್ರ ಅಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವೈವಿಧ್ಯತೆಯನ್ನು - ಮತ್ತು ಸೂಕ್ಷ್ಮತೆಯನ್ನು ಗುರುತಿಸುವಂಥದು ಮತ್ತು ಗೌರವಿಸುವಂಥದು.

ಇಂದು ಗಾಂಧಿ ಪರಂಪರೆಯ ನಿಜವಾದ ಉತ್ತರಾಧಿಕಾರಿಗಳು ಇದ್ದಾರೆಯೇ?

ಒಂದು ವೇಳೆ ಅವರು ಇದ್ದರೆ ಅದರಿಂದ ಏನೂ ವ್ಯತ್ಯಾಸವಿಲ್ಲ; ಒಂದು ವೇಳೆ ಇಲ್ಲದಿದ್ದರೆ, ಅದರಿಂದಲೂ ಏನೂ ವ್ಯತ್ಯಾಸವಾಗದು. ಇನ್ನು, ಗಾಂಧೀಜಿಯವರಿಗೂ ಇದರಿಂದ ಏನೂ ತೊಂದರೆಯಿಲ್ಲ! ವ್ಯತ್ಯಾಸವಾಗುವಂಥದು ಏನೆಂದರೆ ಹಾಗೂ ಗಾಂಧೀಜಿ ನಮ್ಮ ಕುರಿತು ಬಯಸಿದ್ದು ಏನೆಂದರೆ - ನಾವೆಲ್ಲ ಸುರಾಜ್ ಆಗಬೇಕಿದ್ದ ಸ್ವರಾಜ್‌ನ ಪರಂಪರೆಯ ಉತ್ತರಾಧಿಕಾರಿಗಳು ಎಂಬುದನ್ನು ನಾವು ತಿಳಿದಿರಬೇಕು.

ಸ್ವಾತಂತ್ರ್ಯ ಹೋರಾಟದ ಉತ್ಸಾಹವನ್ನು ಮುಂದುವರಿಸುವ ಕುರಿತು ಯುವ ಜನಾಂಗಕ್ಕೆ ನಿಮ್ಮ ಸಲಹೆ ಏನು? ಉತ್ತಮ ಮತ್ತು ಉಲ್ಲಾಸದಾಯಕ ಭಾರತ ನಿರ್ಮಾಣದಲ್ಲಿ ಅವರ ರಚನಾತ್ಮಕ ಪಾತ್ರ ಏನು?

ಸಲಹೆ ನೀಡಲು ನಾನು ಯಾರು? ನನ್ನ ತಲೆಮಾರಿನವರು ಮಾತನಾಡಿದ್ದೇ ಮಾತನಾಡಿದ್ದು. ಯುವ ಜನಾಂಗವು ಅನಾರೋಗ್ಯದಿಂದ ಬಳಲುತ್ತಿದೆ. ಪ್ರಮಾದಗಳನ್ನು ಎಸಗಿರುವ, ಒದ್ದಾಡುತ್ತಿರುವ, ಹೀಗಿದ್ದರೂ ತಮ್ಮನ್ನು ಇನ್ನೂ ಬುದ್ಧಿವಂತಿಕೆಯ ಭಂಡಾರ ಎಂದು ಭ್ರಮಿಸಿರುವ ಮುದುಕರ ಸಲಹೆಗಳಿಂದ ಅವರು ರೋಸಿಹೋಗಿದ್ದಾರೆ ಹಾಗೂ ಸುಸ್ತಾಗಿದ್ದಾರೆ. ಯುವಕರು ಏನು ಬಯಸುತ್ತಾರೆ ಮತ್ತು ಏನನ್ನು ಪಡೆಯಲು ಅರ್ಹರೆಂದರೆ, ತಪ್ಪುಗಳನ್ನು ನಮ್ರವಾಗಿ ಒಪ್ಪಿಕೊಳ್ಳುವ ವಿನಯವಂತಿಕೆಯ ಆಧಾರದ ಮೇಲೆ ನೀಡುವಂತಹ ಪ್ರಾಮಾಣಿಕ ಶಬ್ದಗಳ ಉದಾಹರಣೆಗಳನ್ನು. ಸ್ವಯಂ ಸರಿಪಡಿಸಿಕೊಳ್ಳುವ ಸಿದ್ಧತೆ ಮತ್ತು ನಮ್ರತೆ ಹಾಗೂ ರಾಜಕೀಯ ಅಥವಾ ಆರ್ಥಿಕ ಪ್ರಭಾವಲಯ ಸೃಷ್ಟಿಸಿಕೊಳ್ಳುವ ಮತ್ತು ಅಧಿಕಾರದ ದಾಹ ಇಲ್ಲದಿರುವಿಕೆಯನ್ನು.

ಆರು ದಶಕಗಳ ಕಾಂಗ್ರೆಸ್ ಆಡಳಿತದ ಹೊರತಾಗಿಯೂ, ಹಿಂದೂ ಬಹುಸಂಖ್ಯಾತತೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದು ಯಾವುದು ಎಂದು ನೀವು ಭಾವಿಸುತ್ತೀರಿ? ಅಂತಹ ಬೆಳವಣಿಗೆಗೆ ತಡೆಯೊಡ್ಡಲು ಕಾಂಗ್ರೆಸ್ ಪಕ್ಷಕ್ಕೆ ಏಕೆ ಸಾಧ್ಯವಾಗಲಿಲ್ಲ?

ವಕೀಲೆ ಮತ್ತು ರಾಜಕೀಯ ತತ್ವಜ್ಞಾನಿ ಮೇನಕಾ ಗುರುಸ್ವಾಮಿ ಇತ್ತೀಚೆಗೆ ಭಾರತವನ್ನು ‘ಬಹುಸಂಖ್ಯಾತ ಅಲ್ಪಸಂಖ್ಯಾತರು’ ಎಂದು ಬಣ್ಣಿಸಿದರು. ಅದರ ನಿಜವಾದ ವಿವರಣೆ ಏನು ಎಂಬುದು ನನಗೆ ತಿಳಿದಿಲ್ಲ. ನವರೋಜಿ, ಬೆಸೆಂಟ್, ತಿಲಕ್, ಗೋಖಲೆ, ಗಾಂಧಿ, ಪಟೇಲ್, ಆಜಾದ್, ನೆಹರೂ, ರಾಜಾಜಿ, ಪೆರಿಯಾರ್, ಕಾಮರಾಜ್, ಇಎಂಎಸ್ ನಂಬೂದರಿಪಾದ್, ಜಯಪ್ರಕಾಶ್ ನಾರಾಯಣ್ ಅವರ ಕಾಂಗ್ರೆಸ್‌ಗೆ ಈ ವಿಷಯ ತಿಳಿದಿತ್ತು. ಅದೇ ರೀತಿ ಬಿ.ಆರ್. ಅಂಬೇಡ್ಕರ್, ದಾಕ್ಷಾಯಿಣಿ ವೇಲಾಯುಧಂ, ಅಮ್ಮು ಸ್ವಾಮಿನಾಥನ್, ದುರ್ಗಾಬಾಯಿ ದೇಶಮುಖ್, ಹಂಸ ಮೆಹ್ತಾ, ಕುಡ್ಸಿಯಾ ಐಜಾಜ್ ರಾಸು, ರಾಜ್‌ಕುಮಾರಿ ಅಮೃತ್ ಕೌರ್ ಅವರ ಸಂವಿಧಾನ ಸಭೆಗೂ ಕೂಡಾ. ಆ ‘ಅಲ್ಪಸಂಖ್ಯಾತರ ಸಂಗಮ’ ವನ್ನು ಮರೆತು ‘ಅಲ್ಪಸಂಖ್ಯಾತರಲ್ಲಿ ಬಹುಸಂಖ್ಯಾತರು’ ಎಂಬ ಪ್ರತಿ ತರ್ಕದಿಂದ ಪ್ರಭಾವಿತರಾಗಿರುವುದೇ ಬಹುಸಂಖ್ಯಾತತೆಯ ಏರಿಕೆಗೆ ಕಾರಣವಾಗಿದೆ. ಆದರೆ, ಇದಾಗಲಿ ಅಥವಾ ಯಾವುದೇ ಬಹುಸಂಖ್ಯಾತತೆಯನ್ನು ಮುಂಚಿನಂತೆ ಮಾಡಲಾಗದು ಎಂಬುದನ್ನು ನಾನು ನಂಬುವುದಿಲ್ಲ. ಭಾರತದಲ್ಲಿಯಂತೂ ಅದು ಸಾಧ್ಯವೇ ಇಲ್ಲ. ವಾಸ್ತವವಾಗಿ ಇದು ನದಿಯು ಮತ್ತೆ ಬೆಟ್ಟವನ್ನು ಏರಿದಂತೆ, ಅವಾಸ್ತವಿಕ.

ಭಾರತೀಯ ಇತಿಹಾಸವು ಹಿಂದೂ ಬಲಪಂಥೀಯ ದೃಷ್ಟಿಕೋನದಿಂದ ಪುನಃ ಬರೆಯಲ್ಪಟ್ಟಿದೆ ಎಂದು ತೋರುತ್ತದೆ? ಇಂತಹ ಕಸರತ್ತಿನಿಂದ ಉಂಟಾಗಬಹುದಾದ ಪರಿಣಾಮಗಳೇನು?

ಯಾವುದೇ ಇತಿಹಾಸದಂತೆ ಭಾರತೀಯ ಇತಿಹಾಸವು, ಅದನ್ನು ಬರೆಯಬೇಕು ಎಂದುಕೊಂಡವರು ಬರೆದಂತೆ ಇಲ್ಲ. ಇದು ಜೀವನದ ಕಾಗದರಹಿತ ಸುರುಳಿಯ ಮೇಲೆ ಜೀವನ ಎಂಬ ಮಸಿರಹಿತ ಲೇಖನಿಯಿಂದ ಬರೆಯಲ್ಪಟ್ಟಿದೆ.

ಈಗ ಅಸ್ತಿತ್ವದಲ್ಲಿರುವ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ನಿಮ್ಮ ಮೌಲ್ಯಮಾಪನ ಏನು? ಕಳೆದ ಕೆಲವು ವರ್ಷಗಳಿಂದ ನಗಣ್ಯಗೊಳಿಸಲಾಗುತ್ತಿರುವ ತಮ್ಮ ಅಸ್ತಿತ್ವವನ್ನು ಅವು ಮತ್ತೆಂದಾದರೂ ಪುನಃ ಪಡೆದುಕೊಳ್ಳಲು ಸಾಧ್ಯವಾಗಬಲ್ಲುದು ಎಂದು ನೀವು ಭಾವಿಸುತ್ತೀರಾ?

1984ರಲ್ಲಿ ಬಾಹ್ಯಾಕಾಶ ನೌಕೆಯಲ್ಲಿದ್ದಾಗ, ಮೊದಲ ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತ ಅಲ್ಲಿಂದ ಹೇಗೆ ಕಾಣುತ್ತದೆ ಎಂದು ಕೇಳಿದ್ದರು. ಆಗ ರಾಕೇಶ್ ಶರ್ಮಾ ಅವರು ಯಾವುದೇ ಪೂರ್ವ ಸಿದ್ಧತೆ ಇಲ್ಲದೇ, ’ಸಾರೇ ಜಹಾಂ ಸೆ ಅಚ್ಛಾ’ ಎಂದು ಉತ್ತರಿಸಿದ್ದರು. ಭಾರತವು ತನ್ನ ಎಲ್ಲಾ ದೊಡ್ಡ ಸಾಧನೆಗಳಿಗಿಂತ ದೊಡ್ಡದಾಗಿದೆ ಮತ್ತು ತನ್ನೆಲ್ಲ ಸಾಮರ್ಥ್ಯಕ್ಕಿಂತ ಹೆಚ್ಚು ಸಮರ್ಥವಾಗಿದೆ ಎಂದು ನಾನು ನಂಬುತ್ತೇನೆ. ಅದನ್ನು ದುರ್ಬಲಗೊಳಿಸುವುದು ಯಾವುದರಿಂದಲೂ ಸಾಧ್ಯವಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.