ETV Bharat / bharat

ಆಕ್ಸಿಜನ್‌ ಸಿಗದೆ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ದೆಹಲಿ ಸರ್ಕಾರ

author img

By

Published : May 28, 2021, 6:52 AM IST

ಈಗಾಗಲೇ ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದ ಅರವಿಂದ್‌ ಕೇಜ್ರಿವಾಲ್ ನೇತೃತ್ವದ ದೆಹಲಿ ಆಪ್‌ ಸರ್ಕಾರ ಇದೀಗ ಆಕ್ಸಿಜನ್​ ಸಿಗದೆ ಪ್ರಾಣ ಬಿಡುವ ಕೊರೊನಾ ರೋಗಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುತ್ತಿದೆ.

Delhi govt to give Rs 5 lakhs for death due to lack of oxygen
ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್

ನವದೆಹಲಿ: ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಕೋವಿಡ್​ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಪ್ರಕಟಿಸಿದೆ.

ಈ ಮೊದಲೇ ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ 50 ಸಾವಿರ ರೂ. ಪರಿಹಾರ ಘೋಷಿಸಿದ್ದರು. ಬಳಿಕ ಆಕ್ಸಿಜನ್​ ಸಿಗದೆ ಪ್ರಾಣ ಬಿಡುವ ಕೊರೊನಾ ರೋಗಿಗಳ ಕುಟುಂಬಕ್ಕೆ ನೆರವು ನೀಡುವ ಸಲುವಾಗಿ ಆಮ್ ಆದ್ಮಿ ಸರ್ಕಾರ ಆರು ವೈದ್ಯರ ಸಮಿತಿಯೊಂದನ್ನು ರಚಿಸಿದೆ.

ಈ ಸಮಿತಿಯು ಆಸ್ಪತ್ರೆಗಳಲ್ಲಿನ ಆಮ್ಲಜನಕ ಸಂಗ್ರಹ, ಪೂರೈಕೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪರೀಕ್ಷಿಸುವ ಹಕ್ಕನ್ನು ಹೊಂದಿರುತ್ತದೆ. ಆಸ್ಪತ್ರೆಗಳ ಆಕ್ಸಿಜನ್​ ಸ್ಥಿತಿಗತಿ ಹಾಗೂ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟವರ ಕುರಿತಂತೆ ವಾರಕ್ಕೊಮ್ಮೆ ತನ್ನ ವರದಿಯನ್ನು ದೆಹಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸುತ್ತದೆ.

ಈ ಸುದ್ದಿಯನ್ನೂ ಓದಿ: ದೆಹಲಿಯಲ್ಲಿ ಬ್ಲ್ಯಾಕ್​​ ಫಂಗಸ್​ನ ಅಪರೂಪದ ಪ್ರಕರಣ ಬೆಳಕಿಗೆ: ಮಹಿಳೆ ಆಸ್ಪತ್ರೆಗೆ ದಾಖಲು

ದೇಶದಲ್ಲಿ ಕೊರೊನಾ ಅಲೆ ಉಲ್ಬಣಗೊಳ್ಳುತ್ತಿದ್ದ ವೇಳೆ ರಾಷ್ಟ್ರ ರಾಜಧಾನಿಯ ಕೆಲ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕೋವಿಡ್​ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದರು. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ, ಇತ್ತ ರಾತ್ರೋರಾತ್ರಿ ಪ್ರಾಣವಾಯುವಿನ ಅಭಾವವಾಗುತ್ತಿತ್ತು. ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡ ಅರವಿಂದ್​ ಕೇಜ್ರಿವಾಲ್ ಏಪ್ರಿಲ್​ 19 ರಿಂದ ಲಾಕ್​ಡೌನ್​ ಜಾರಿ ಮಾಡಿ, ಲಾಕ್​ಡೌನ್​ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್ ಸೇರಿದಂತೆ ಇತರ ತುರ್ತು ವೈದ್ಯಕೀಯ ಸೇವೆಯ ವ್ಯವಸ್ಥೆ​ ಮಾಡಿದರು.

ದೆಹಲಿಯಲ್ಲಿ ತಗ್ಗಿದ ಕೋವಿಡ್ ಆರ್ಭಟ: ಪಾಸಿಟಿವಿಟಿ ದರ ಶೇ 1.53

2ನೇ ಅಲೆ ಆರಂಭದಲ್ಲಿ ದಿನವೊಂದರಲ್ಲೇ 40 ಸಾವಿರ ಕೋವಿಡ್​ ಕೇಸ್​ಗಳು, ಸುಮಾರು 400 ಸಾವು ವರದಿಯಾಗುತ್ತಿದ್ದ ದೆಹಲಿಯಲ್ಲಿ ಇದೀಗ ಪರಿಸ್ಥಿತಿ ಸುಧಾರಿಸಿದೆ. ಗುರುವಾರ 1,072 ಸೋಂಕಿತರು ಪತ್ತೆಯಾಗಿದ್ದು, 117 ಮಂದಿ ಅಸುನೀಗಿದ್ದಾರೆ. ಪಾಸಿಟಿವಿಟಿ ರೇಟ್​ ಶೇ.1.53ಕ್ಕೆ ಇಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.