ETV Bharat / bharat

ಅರವಕುರಿಚಿಯಲ್ಲಿ ಅಣ್ಣಾಮಲೈ ಪರ ಗೋಡೆ ಬರಹದಲ್ಲಿದ್ದ ಮೋದಿ ಹೆಸರು ಮಾಯ!

ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಣ್ಣಾಮಲೈ ಪರ ಅರವಕುರಿಚಿ ಕ್ಷೇತ್ರದಾದ್ಯಂತ ಬರೆಯಲಾಗಿದ್ದ ಗೋಡೆ ಬರಹದಿಂದ ಪ್ರಧಾನಿ ಮೋದಿಯ ಹೆಸರು ಅಳಿಸಲಾಗಿದೆ.

Aravakurichi BJP candidate Annamalai erases Modi's name in wall advertisement
ಅಣ್ಣಾಮಲೈ ಪರ ಗೋಡೆ ಬರಹದಲ್ಲಿದ್ದ ಮೋದಿ ಹೆಸರು ಮಾಯ
author img

By

Published : Mar 30, 2021, 4:03 PM IST

ಕರೂರು (ತಮಿಳುನಾಡು) : ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಅರವಕುರಿಚಿ ಕ್ಷೇತ್ರದ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ಅಣ್ಣಾಮಲೈ ಪರ ಬರೆದಿದ್ದ ಗೋಡೆ ಬರಹದಿಂದ ಪ್ರಧಾನಿ ಮೋದಿ ಹೆಸರನ್ನು ಅಳಿಸಿ ಹಾಕಲಾಗಿದೆ.

ಅರವಕುರಿಚಿ ಕ್ಷೇತ್ರದ ಅನೇಕ ಕಡೆ, 'ಭಾರತ್ ಮಾತಾಕಿ ಜೈ, ಕಮಲಕ್ಕೆ ಮತ ನೀಡಿ , ಮೋದಿ ಆಶೀರ್ವದಿತ ಅಭ್ಯರ್ಥಿ ಅಣ್ಣಾಮಲೈ' ಎಂಬ ಘೋಷವಾಕ್ಯಗಳಿಂದ ಕೂಡಿದ ಪ್ರಚಾರ ಗೋಡೆ ಬರಹ ಬರೆಯಲಾಗಿತ್ತು. ಸದ್ಯ, ಗೋಡೆ ಬರದಹದಲ್ಲಿನ ಕೆಲವೊಂದು ವಾಕ್ಯಗಳನ್ನು ಅಳಿಸಲಾಗಿದೆ. ವಿಶೇಷವಾಗಿ 'ಮೋದಿ ಆಶೀರ್ವದಿತ ಅಭ್ಯರ್ಥಿ' ಎಂಬ ವಾಕ್ಯವನ್ನು ಅಳಿಸಿ ಹಾಕಲಾಗಿದೆ. ಅರವಕುರಿಚಿ, ಪಲ್ಲಪಟ್ಟಿ, ಚಿನ್ನಥರಪುರಂ, ಈಸನಾಥಂ ಕರೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ವಾಸಿಸುವ ಸ್ಥಳಗಳಾಗಿವೆ. ಹೀಗಾಗಿ, ವಿರೋಧಗಳು ವ್ಯಕ್ತವಾಗಬಹುದು ಎಂಬ ನಿಟ್ಟಿನಲ್ಲಿ ಗೋಡೆ ಬರಹದ ಸ್ಲೋಗನ್​ಗಳನ್ನು ಅಳಿಸಲಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ : ನಂದಿಗ್ರಾಮದಲ್ಲಿ ಅಮಿತ್ ಶಾ ಭರ್ಜರಿ ರೋಡ್​ ಶೋ - ಜನಸಾಗರದ ವಿಡಿಯೋ ನೋಡಿ

ಮೋದಿ ಹೆಸರನ್ನು ಅಳಿಸಿ ಜಾಗದಲ್ಲಿ 'ಅಮ್ಮ ಆಶೀರ್ವದಿತ ಅಭ್ಯರ್ಥಿ' ಎಂದು ಬರೆಯಲಾಗಿದೆ. ಈ ಮೂಲಕ ಎಐಡಿಎಂಕೆಯ ಬ್ರ್ಯಾಂಡ್​ ನೇಮ್ ಅನ್ನು ಬಿಜೆಪಿಯೂ ಚುನಾವಣಾ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದೀಗ ಈ ಗೋಡೆ ಬರಹಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ತಮಿಳುನಾಡಿನ ಜನರು ಸಾಮಾನ್ಯವಾಗಿ ಪ್ರಾದೇಶಿಕತೆಗೆ ಹೆಚ್ಚಿನ ಮಣೆ ಹಾಕುವುದರಿಂದ ಮೋದಿ ಅಥವಾ ಬಿಜೆಪಿ ಹೈಕಮಾಂಡ್ ನಾಯಕರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಜನರಿಂದ ವಿರೋಧ ವ್ಯಕ್ತವಾಗಬಹುದು ಎಂಬ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಯಕರ ಹೆಸರು, ಫೋಟೋಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ಎನ್​ಡಿಎ ಮೈತ್ರಿಕೂಟದ ಪ್ರಮುಖ ಪಕ್ಷ ಎಐಡಿಎಂ ನಾಯಕಿ ಮತ್ತು ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ತಮಿಳುನಾಡಿನಲ್ಲಿ ಅಮ್ಮ ಎಂದೇ ಪ್ರಸಿದ್ಧರಾಗಿದ್ದು, ಅಮ್ಮ ಅಪಾರ ಅಭಿಮಾನಗಳನ್ನು ಹೊಂದಿದ್ದಾರೆ. ಹಾಗಾಗಿ, ಅಮ್ಮ ಹೆಸರು ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.