ETV Bharat / bharat

'ಕಾಶ್ಮೀರ ಭೂಲೋಕದ ಸ್ವರ್ಗ'! ಜಿ20 ಸಭೆಗೂ ಮುನ್ನ ಅರಬ್ ಇನ್‌ಫ್ಲುಯೆನ್ಸರ್‌ ಬಣ್ಣನೆ

author img

By

Published : May 21, 2023, 10:33 AM IST

ಕಾಶ್ಮೀರದ ಸೌಂದರ್ಯಕ್ಕೆ ಮಾರುಹೋದ ಅರಬ್ ಪ್ರತಿನಿಧಿ ಅಮ್ಜದ್ ತಾಹಾ ಕೇಂದ್ರಾಡಳಿತ ಪ್ರದೇಶವನ್ನು 'ಭೂಮಿಯ ಮೇಲಿನ ಸ್ವರ್ಗ' ಎಂದು ಮೆಚ್ಚಿಕೊಂಡಿದ್ದಾರೆ.

Arab influencer Amjad Taha
ಅರಬ್ ಪ್ರತಿನಿಧಿ ಅಮ್ಜದ್ ತಾಹಾ

ಶ್ರೀನಗರ (ಜಮ್ಮು& ಕಾಶ್ಮೀರ): ಕೇಂದ್ರಾಡಳಿತ ಪ್ರದೇಶ ಕಾಶ್ಮೀರದ ಸೌಂದರ್ಯವನ್ನು ಹೊಗಳಿದ ಅರಬ್ ಪ್ರತಿನಿಧಿ ಅಮ್ಜದ್ ತಾಹಾ ಇದು 'ಭೂಮಿಯ ಮೇಲಿನ ಸ್ವರ್ಗ' ಎಂದು ಬಣ್ಣಿಸಿದ್ದಾರೆ. ಇದು ಸ್ವಿಟ್ಜರ್ಲೆಂಡ್ ಅಥವಾ ಆಸ್ಟ್ರಿಯಾ ಅಲ್ಲ, ಭಾರತ. ಕಾಶ್ಮೀರದಲ್ಲಿ ನಾಳೆ ಜಿ 20 ಶೃಂಗಸಭೆ ನಡೆಯಲಿದೆ. 'ಭೂಮಿಯ ಮೇಲಿನ ಸ್ವರ್ಗ' ಎಂದು ಕರೆಯಲಾಗುವ ಈ ಪ್ರದೇಶ ಭೂಮಿಯನ್ನು ಸಂರಕ್ಷಿಸಿದ ಸ್ಥಳ. ಹವಾಮಾನ ಬದಲಾವಣೆಗೆ ಇದು ಪರಿಹಾರವಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಮುಸ್ಲಿಮರು, ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿಯಿಂದ ಬದುಕುತ್ತಿರುವುದನ್ನು ನಾವು ನೋಡುತ್ತೇವೆ. ಭವಿಷ್ಯಕ್ಕಾಗಿ ವಿಶ್ವ ನಾವೀನ್ಯತೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ವೈವಿಧ್ಯಮಯ ಭೂಮಿಯನ್ನು ನಾವಿಲ್ಲಿ ನೋಡುತ್ತಿದ್ದೇವೆ" ಎಂದು ಅಮ್ಜದ್ ತಾಹಾ ಟ್ವಿಟರ್‌ನಲ್ಲಿ ಕೊಂಡಾಡಿದ್ದಾರೆ.

  • This is not Switzerland or Austria; this is India, and this is Kashmir where the G20 will take place. It's called the "paradise on Earth," a place that has preserved the Earth and can be the solution for climate change. In Kashmir, we see Muslims, Hindus, Sikhs, and Christians… pic.twitter.com/YgBm4wyTJv

    — Amjad Taha أمجد طه (@amjadt25) May 20, 2023 " class="align-text-top noRightClick twitterSection" data=" ">

ಕಾಶ್ಮೀರವು ಅಶಾಂತಿ ಮತ್ತು ಹಿಂಸಾಚಾರದ ಹೊರತಾಗಿಯೂ ಅದರ ಮನಮೋಹಕ ಸೌಂದರ್ಯ ಜನರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಇಂದಿಗೂ ಪ್ರಸಿದ್ಧ ಕವಿ ಅಮೀರ್ ಖುಸ್ರೂ ಅವರ "ಅಗರ್ ಫಿರ್ದೌಸ್ ಬಾರ್ ರೂ-ಇ ಜಮೀನ್ ಅಸ್ಟ್, ಹಮೀನ್ ಅಸ್ತ್-ಓ ಹಮೀನ್ ಅಸ್ತ್-ಓ ಹಮೀನ್ ಅಸ್ಟ್". (ಭೂಮಿಯ ಮೇಲೆ ಸ್ವರ್ಗವಿದ್ದರೆ ಅದು ಇಲ್ಲಿದೆ) ಎಂಬ ಮಾತುಗಳಿಗೆ ಅರ್ಥ ನೀಡುತ್ತದೆ ಎಂದು ಬಣ್ಣಿಸಿದ್ದಾರೆ.

ಮೇ 22 - 24ರವರೆಗೆ ಜಿ 20 ಸಭೆ: ಭಾರತದ ಅಧ್ಯಕ್ಷತೆಯಲ್ಲಿ 3ನೇ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆ ಮೇ 22 ರಿಂದ 24 ರವರೆಗೆ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸಿದೆ. ಆದಾಗ್ಯೂ ಪ್ರವಾಸೋದ್ಯಮ ಉದ್ಯಮದ ಮೇಲೆ ಪ್ರಭಾವ ಬೀರಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂದರ್ಶಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಜನರು ಜಿ 20 ಸಭೆಯು ಪ್ರಪಂಚದಾದ್ಯಂತದ ಹೂಡಿಕೆದಾರರು ಮತ್ತು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ನಂಬಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವುದಲ್ಲದೇ, ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಶ್ರೀನಗರದಲ್ಲಿ ನಡೆಯಲಿರುವ ಜಿ 20 ಸಭೆಗೆ ವಿವಿಧ ಇಲಾಖೆಗಳು ಸಿದ್ಧತೆ ಮಾಡಿಕೊಂಡಿವೆ.

ದಾಲ್ ಸರೋವರಕ್ಕೆ ಭೇಟಿ: ಗುಲ್ಮಾರ್ಗ್ ನಗರ ಮತ್ತು ದಾಲ್ ಸರೋವರಕ್ಕೆ 20 ದೇಶಗಳ ಪ್ರತಿನಿಧಿಗಳು ಭೇಟಿ ನೀಡಲಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಜಿ20 ಸಭೆ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗುತ್ತಿದೆ.

ಭಾರತವು ಡಿಸೆಂಬರ್ 1, 2022 ರಂದು ಜಿ 20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಮಧ್ಯೆ, ಚೀನಾ ಶುಕ್ರವಾರ ತನ್ನ ದೃಢ ನಿಲುವನ್ನು ಪ್ರತಿಪಾದಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ವಿವಾದಿತ ಪ್ರದೇಶದಲ್ಲಿ ಅಂತಹ ಯಾವುದೇ ಸಭೆ ನಡೆಸುವುದನ್ನು ವಿರೋಧಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಭಾರತ-ಬ್ರಿಟನ್ ಆಲಿಂಗನ: ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.