ನವದೆಹಲಿ: ಆ್ಯಪಲ್ ಇತ್ತೀಚೆಗೆ ಐಮ್ಯಾಕ್ ಪ್ರೊ ಮಾಡಲ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತ್ತು. ಇದೀಗ 21.5-ಇಂಚಿನ ಐಮ್ಯಾಕ್ ನ ಎರಡು ಎರಡು ವಿನ್ಯಾಸಗಳು ಪ್ರಸ್ತುತ ಸ್ಥಗಿತಗೊಳ್ಳುತ್ತಿವೆ.
21.5-ಇಂಚಿನ ಐಮ್ಯಾಕ್‌ನ 512 ಜಿಬಿ ಮತ್ತು 1 ಟಿಬಿ ಎಸ್‌ಎಸ್‌ಡಿ ಸೆಟಪ್‌ಗಳು ಇನ್ನು ಮುಂದೆ ಖರೀದಿಗೆ ಲಭ್ಯವಿಲ್ಲ ಎಂದು ಮ್ಯಾಕ್‌ರಮರ್ಸ್ ನೀಡಿದ ವರದಿಯನ್ನು ದಿ ವರ್ಜ್ ಉಲ್ಲೇಖಿಸಿದೆ. ಕೇವಲ 256 ಜಿಬಿ ಎಸ್‌ಎಸ್‌ಡಿ ಮತ್ತು 1 ಟಿಬಿ ಫ್ಯೂಷನ್ ಡ್ರೈವ್ ಫಾರ್ಮ್‌ಗಳನ್ನು ಆ್ಯಪಲ್‌ನ ಸೈಟ್‌ನಲ್ಲಿ ಖರೀದಿಸಲು ಅವಕಾಶವಿದೆ.
ಐಮ್ಯಾಕ್‌ನ 27-ಇಂಚಿನ ಮತ್ತು 21.5-ಇಂಚಿನ ಆವೃತ್ತಿಗಳನ್ನು ಆ್ಯಪಲ್ ಮರುವಿನ್ಯಾಸಗೊಳಿಸಿದ ಐಮ್ಯಾಕ್ನೊಂದಿಗೆ ಬದಲಿಸುವ ನಿರೀಕ್ಷೆಯಿದೆ ಮತ್ತು ಈ ವರ್ಷದಲ್ಲಿ ಮ್ಯಾಕ್ ಪ್ರೊ ಅನ್ನು ನವೀಕರಿಸುವ ಸಾಧ್ಯತೆಯಿದೆ. ಕಂಪನಿಯು ಇಂಟೆಲ್ ಚಿಪ್‌ಗಳಿಂದ ದೂರ ಸರಿಯುತ್ತಿರುವುದರಿಂದ ಹೊಸ ಐಮ್ಯಾಕ್‌ಗಳು ಆಪಲ್ ಸಿಲಿಕಾನ್ ಚಿಪ್‌ಗಳನ್ನು ಬಳಸುವ ನಿರೀಕ್ಷೆಯಿದೆ ಎಂದು ದಿ ವರ್ಜ್ ವರದಿ ಮಾಡಿದೆ.
ಇದನ್ನೂ ಓದಿ:ಪ. ಬಂಗಾಳ; ಟಿಎಂಸಿ ಕಾರ್ಯಕರ್ತ ಸಾವು.. ಬಿಜೆಪಿ ವಿರುದ್ಧ ಕೊಲೆ ಆರೋಪ