ETV Bharat / bharat

ಕರ್ನಾಟಕದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ, 1 ಲಕ್ಷ ಹೊಸ ಉದ್ಯೋಗ: ಸಿಎಂ ಬೊಮ್ಮಾಯಿ - ಈಟಿವಿ ಭಾರತ ಕನ್ನಡ

ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಫೋನ್ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದರಿಂದ 1 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ, 2 ಲಕ್ಷ ಹೊಸ ಉದ್ಯೋಗ: ಸಿಎಂ ಬೊಮ್ಮಾಯಿ
Apple phone manufacturing plant in Karnataka, 2 lakh new jobs: CM Bommai
author img

By

Published : Mar 3, 2023, 1:17 PM IST

Updated : Mar 3, 2023, 1:39 PM IST

ಬೆಂಗಳೂರು : ಆ್ಯಪಲ್ ಪೋನ್ ತಯಾರಕ ಕಂಪನಿ ಆ್ಯಪಲ್ ಇಂಕ್​ನ ಪಾಲುದಾರ ಕಂಪನಿಯಾಗಿರುವ ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸುಮಾರು 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ವರದಿಯನ್ನು ಕೋಟ್ ಮಾಡಿ ಟ್ವೀಟ್​ ಮಾಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕದಲ್ಲಿ 300 ಎಕರೆ ಜಾಗದಲ್ಲಿ ಸ್ಥಾಪನೆಯಾಗಲಿರುವ ಕಾರ್ಖಾನೆಯಲ್ಲಿ ಆ್ಯಪಲ್ ಫೋನ್​ಗಳನ್ನು ತಯಾರಿಸಲಾಗುವುದು ಎಂದು ಬರೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಡಬಲ್ ಎಂಜಿನ್ ಸರ್ಕಾರಗಳು ಬಂಡವಾಳ ಹೂಡಿಕೆ, ಉದ್ಯೋಗ ಸೃಜನೆ ಹಾಗೂ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗಳ ಗುರಿಗಳ ಸಾಧನೆಗೆ ಕೆಲಸ ಮಾಡುತ್ತಿವೆ ಎಂದು ಬರೆದಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರ ಇದೇ ಟ್ವೀಟ್​ ಅನ್ನು ಕೋಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ್ಯಪಲ್ ಫೋನ್​ಗಳು ಶೀಘ್ರದಲ್ಲೇ ಕರ್ನಾಟಕದಲ್ಲಿ ತಯಾರಾಗಲಿವೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿವೆ ಮಾತ್ರವಲ್ಲದೆ, ಕರ್ನಾಟಕಕ್ಕೆ ವಿಭಿನ್ನ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಬರೆದಿದ್ದಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ 2025ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡುವ ಪ್ರಯತ್ನದಲ್ಲಿ ನಾವು ನಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣ ಬಳಿ ಹೊಸ ಘಟಕ ಸ್ಥಾಪನೆ ಸಾಧ್ಯತೆ: ಕರ್ನಾಟಕದಲ್ಲಿ ಫಾಕ್ಸ್​ಕಾನ್ ಆ್ಯಪಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸುವ ಬಗ್ಗೆ ಪ್ರಕಟ ವರದಿಯ ಪ್ರಕಾರ, ತೈವಾನ್ ಕಂಪನಿಯಾಗಿರುವ ಹಾಗೂ ತನ್ನ ಅಂಗಸಂಸ್ಥೆ ಹೋನ್ ಹಾಯ್ ಪ್ರಿಸಿಶನ್ ಇಂಡಸ್ಟ್ರಿ ಕಂಪನಿ ಹೆಸರಿನಿಂದ ಪ್ರಖ್ಯಾತವಾಗಿರುವ ಫಾಕ್ಸ್​ಕಾನ್, ಬೆಂಗಳೂರಿನ ವಿಮಾನ ನಿಲ್ದಾಣ ಬಳಿ 300 ಎಕರೆ ಜಾಗದಲ್ಲಿ ಆ್ಯಪಲ್ ಐಫೋನ್ ಬಿಡಿಭಾಗಗಳನ್ನು ತಯಾರಿಸುವ ಘಟಕ ಸ್ಥಾಪಿಸಲಿದೆ ಎಂದು ತಿಳಿಸಲಾಗಿದೆ. ಈ ಘಟಕದಲ್ಲಿ ಆ್ಯಪಲ್ ಬಿಡಿಭಾಗಗಳನ್ನು ತಯಾರಿಸುವುದು ಹಾಗೂ ಆ್ಯಪಲ್​ ಪೋನ್​ಗಳನ್ನು ಅಸೆಂಬಲ್ ಕೂಡ ಮಾಡಲಾಗುವುದು. ಅಲ್ಲದೆ ಆ್ಯಪಲ್​ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಗಳ ಕೆಲ ಭಾಗಗಳನ್ನು ಇಲ್ಲಿ ತಯಾರಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.

  • Apple phones to be built in the state soon. Apart from creating about 100,000 jobs, it will create a whole lot of opportunities for Karnataka. Under the visionary leadership of Hon’ble PM @narendramodi Ji, we will do our share to make India a $5 trillion economy by 2025. https://t.co/bdcVuVHkvT

    — Basavaraj S Bommai (@BSBommai) March 3, 2023 " class="align-text-top noRightClick twitterSection" data=" ">

ಚೀನಾದಿಂದ ಭಾರತದತ್ತ ಬಂಡವಾಳ ಹರಿವು: ಈ ಬಂಡವಾಳ ಹೂಡಿಕೆಯು ಭಾರತದಲ್ಲಿ ಫಾಕ್ಸ್​ಕಾನ್​ನ ಈವರೆಗಿನ ಅತಿದೊಡ್ಡ ಹೂಡಿಕೆಯಾಗಲಿದೆ. ವಿಶ್ವದ ಅತಿದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಮಾರುಕಟ್ಟೆಯಾಗಿರುವ ಚೀನಾ ನಿಧಾನವಾಗಿ ಆ ಸ್ಥಾನ ಕಳೆದುಕೊಳ್ಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ನೋಡಲಾಗುತ್ತಿದೆ. ಫಾಕ್ಸ್​ಕಾನ್​ನ ಉದ್ದೇಶಿತ ಭಾರತದ ಹೊಸ ಘಟಕವು ಸುಮಾರು 1 ಲಕ್ಷ ಉದ್ಯೋಗ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ಚೀನಾದ ಝೆಂಗಝೊ ನಲ್ಲಿರುವ ಈ ಘಟಕದಲ್ಲಿ ಸುಮಾರು 2 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: iPhone ನಿಂದ ಚಿತ್ರೀಕರಣಗೊಂಡ ಫಿಲಂ 'ಫುರಸತ್': ಆ್ಯಪಲ್ ಸಿಇಒ ಟಿಮ್ ಕುಕ್ ಶ್ಲಾಘನೆ

Last Updated : Mar 3, 2023, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.