ETV Bharat / bharat

ಭಕ್ತರಿಗೆ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲು ಟಿಟಿಡಿಯಿಂದ ಮೊಬೈಲ್​ ಆ್ಯಪ್​ ಬಿಡುಗಡೆ..

ಟಿಟಿಡಿಯಿಂದ ಭಕ್ತರಿಗೆ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲು ತಿರುಮಲ ತಿರುಪತಿ ದೇವಸ್ಥಾನಂ ಅಪ್ಲಿಕೇಶನ್ ಬಿಡುಗಡೆ - ಆ್ಯಪ್​ ಬಿಡುಗಡೆ ಮಾಡಿದ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ.

author img

By

Published : Jan 28, 2023, 10:09 PM IST

All the services for Tirumala devotees are in one app TTD created the app in collaboration with Jio
ಭಕ್ತರಿಗೆ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಲು ಟಿಟಿಡಿಯಿಂದ ಆ್ಯಪ್​ ಬಿಡುಗಡೆ

ತಿರುಪತಿ(ಆಂಧ್ರಪ್ರದೇಶ): ಭಕ್ತರಿಗೆ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲು ಟಿಟಿಡಿ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ, ಭಕ್ತರಿಗೆ ವಿಶೇಷ ಟಿಟಿ ದೇವಸ್ಥಾನಂ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಆ್ಯಪ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ವಿವರಿಸಿದರು. ತಿರುಮಲ ಭಕ್ತರಿಗೆ ಉತ್ತಮ ಮತ್ತು ಸುಲಭ ಸೇವೆಗಳನ್ನು ಒದಗಿಸಲು ತಿರುಮಲ ತಿರುಪತಿ ದೇವಸ್ಥಾನಂ ಅಪ್ಲಿಕೇಶನ್ ಸಿದ್ದಪಡಿಸಿದೆ.

ಈ ಅಪ್ಲಿಕೇಶನ್ ಅನ್ನು ಜಿಯೋ ಕಂಪನಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಆ್ಯಪ್​ನ್ನು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಅನ್ನಮಯ್ಯ ಕಟ್ಟಡದಲ್ಲಿ ಉದ್ಘಾಟಿಸಿದರು. ಈ ಅಪ್ಲಿಕೇಶನ್ ಮೂಲಕ ತಿರುಮಲದಲ್ಲಿ ಆಯೋಜಿಸಲಾದ ಪ್ರತಿಯೊಂದು ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು ಮತ್ತು ಭಕ್ತರು ನೇರ ಪ್ರಸಾರವನ್ನು ಈ ಅಪ್ಲಿಕೇಶನ್​ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.

ವರ್ಚುಯಲ್ ಸೇವೆಗಳನ್ನು ಬುಕ್ ಮಾಡಬಹುದು:ಎಸ್​ವಿಬಿಸಿ ಭಕ್ತಿ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಹ ಇದರಲ್ಲಿ ಲಭ್ಯವಿರುತ್ತವೆ. ಈ ಆ್ಯಪ್ ಬಳಸಿ ಭಕ್ತರು ದರ್ಶನ ಟಿಕೆಟ್, ಕೊಠಡಿಗಳು ಮತ್ತು ಸೇವಾ ಟಿಕೆಟ್ ಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್‌ನಲ್ಲಿ ವರ್ಚುಯಲ್ ಸೇವೆಗಳನ್ನು ಸಹ ಬುಕ್ ಮಾಡಬಹುದು. ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಗ್ಯಾಲರಿಯಲ್ಲಿರುವ ಆ್ಯಪ್ ನಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದರು. ತಿರುಮಲದ ಇತಿಹಾಸವೂ ಈ ಗ್ಯಾಲರಿಯಲ್ಲಿದೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ವಿವರಿಸಿದರು.

ಡಿಜಿಟಲ್ ಗೇಟ್‌ವೇ ಆಗಿ ಬಳಸಬಹುದು: ಭಕ್ತರು ಎಲ್ಲ ಅಗತ್ಯತೆಗಳಿಗೆ ಈ ಆ್ಯಪ್ ಅನ್ನು ಡಿಜಿಟಲ್ ಗೇಟ್‌ವೇ ಆಗಿ ಬಳಸಬಹುದು ಎಂದು ಟಿಟಿಡಿ ಇಒ ಎವಿ ಧರ್ಮ ರೆಡ್ಡಿ ಹೇಳಿದರು. ಭಕ್ತರು ಯಾವುದೇ ಪಾಸ್ ವರ್ಡ್ ಇಲ್ಲದೇ ಲಾಗ್ ಇನ್ ಆಗಲು ಯೂಸರ್ ನೇಮ್ ಮತ್ತು ಒಟಿಪಿ ನಮೂದಿಸಬೇಕು ಎಂದು ಹೇಳಿದರು. ಆ್ಯಪ್ ಅನ್ನು ಕಡಿಮೆ ಸಂಕೀರ್ಣತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲ ವಯಸ್ಸಿನ ಜನರು ಇದನ್ನು ಸುಲಭವಾಗಿ ಬಳಸಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಟಿಟಿಡಿ ಜೆಇಒ ವೀರಬ್ರಹ್ಮ, ಸಿವಿಎಸ್​ಒ ನರಸಿಂಹ ಕಿಶೋರ್, ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನೀಶ್ ಶಾ, ಐಟಿ ಸಲಹೆಗಾರ ಅಮರ್, ಐಟಿ ಜಿಎಂ ಸಂದೀಪ್ ಮತ್ತು ಆ್ಯಪ್ ರಚಿಸಿದ ತಂಡವು ಭಾಗವಹಿಸಿತು.

ಬಳಕೆದಾರ ಸ್ನೇಹಿ ಅಪ್ಲಿಕೇಶನ್: ಟಿಟಿ ದೇವಸ್ಥಾನಂ ಅಪ್ಲಿಕೇಶನ್ ಬಳಕೆದಾರ ಸ್ನೇಹಿಯಾಗಿದೆ, ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿಕೊಂಡು ಯಾತ್ರಿ-ಸ್ನೇಹಿ ಲಾಗಿನ್, ನೈಜ-ಸಮಯದ ಮಾಹಿತಿ, ವಿಡಿಯೋಗಳು ಮತ್ತು ಆಡಿಯೊಗಳ ಲೈವ್ ಸ್ಟ್ರೀಮಿಂಗ್ ಸುಲಭವಾಗಿ ಪಡೆಯಬಹುದು, ಬುಕಿಂಗ್ ಸೇವೆಗಳಂತಹ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿಶೇಷ ಪ್ರವೇಶ ದರ್ಶನ, ವಸತಿ, ಶ್ರೀವಾರಿ ಸೇವೆಗಳು, ಹೀಗೆ ಹುಂಡಿ ಮತ್ತು ಕಾಣಿಕೆ ಸ್ವೀಕಾರ ಮಾಹಿತಿ ನೀಡಲಿದೆ.

ಇದಲ್ಲದೇ, ಮೊಬೈಲ್ ಅಪ್ಲಿಕೇಶನ್ ಪ್ರಮುಖ ಪ್ರಕಟಣೆಗಳಿಗಾಗಿ ಪುಶ್ ಅಧಿಸೂಚನೆಗಳು, ಲೈವ್-ಸ್ಟ್ರೀಮಿಂಗ್ ಪ್ರವೇಶ ಮತ್ತು ವಿಡಿಯೊಗಳು, ರಿಂಗ್‌ಟೋನ್‌ಗಳು, ವಾಲ್‌ಪೇಪರ್‌ಗಳನ್ನು ಹೊಂದಿದೆ.

ಇದನ್ನೂ ಓದಿ:Watch.. ಮಹಾರಾಷ್ಟ್ರದ ಕೃಷಿ ಉತ್ಸವದಲ್ಲಿ ಕರ್ನಾಟಕದ ಗಜೇಂದ್ರನ ನೋಡಲು ಮುಗಿಬಿದ್ದ ರೈತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.