ಹೈದರಾಬಾದ್: ಫೇಸ್ಬುಕ್ನಲ್ಲಿ ಪರಿಚಯವಾದ (Facebook Love) ಯುವತಿಯೊಬ್ಬಳು ಯುವಕನೊಬ್ಬನಿಗೆ ಮದುವೆಯಾಗುವುದಾಗಿ ನಂಬಿಸಿ 95 ಲಕ್ಷ (95 lakh)ದೋಚಿರುವ ಘಟನೆ ಈಗ ಸಿಕಂದ್ರಾಬಾದ್ನಲ್ಲಿ ಸಂಚಲನ ಮೂಡಿಸಿದೆ.
ಇನ್ಸ್ಪೆಕ್ಟರ್ ಶ್ರೀನಿವಾಸ ರಾವ್ ಪ್ರಕಾರ, ಸಿಕಂದರಾಬಾದ್ನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ (Facebook Love) ಫೇಸ್ಬುಕ್ನಲ್ಲಿ ಸುಂದರ ಹುಡುಗಿಯೊಬ್ಬಳು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಆಕೆಯ ಕವರ್ ಫೋಟೋಗೆ ಫಿದಾ ಆದ ಇಂಜಿನಿಯರ್ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಚಾಟ್ ಮುಂದುವರಿಸಿದ್ದಾರೆ.
ನಾನು ಸಾಫ್ಟ್‌ವೇರ್ ಇಂಜಿನಿಯರ್ (Facebook Love) ಆಗಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶದ ಗುಂಟೂರಿನಲ್ಲಿ ಇರುವುದಾಗಿ ಯುವತಿ ಯುವಕನಿಗೆ ಹೇಳಿದ್ದಾಳೆ. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿದೆ (Facebook love). ಪ್ರೀತಿ ಮಾಡ್ತಿದ್ರೂ ಯುವಕ, ಯುವತಿಯನ್ನು ಒಮ್ಮೆಯೂ ನೋಡಿರಲಿಲ್ಲ (Honey trap). ಆದರೂ ಸಹ ಯುವಕನಿಗೆ ತನ್ನ ಪ್ರೀತಿ ಮೇಲೆ ನಂಬಿಕೆಯಿತ್ತು. ಹೀಗಾಗಿ ಆಕೆಯನ್ನು ನೋಡದೇ ಪ್ರೀತಿ ಮಾಡುತ್ತಿದ್ದ (Blind love).
ಇನ್ನೊಂದೆಡೆ ಯುವತಿ ನಮ ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಯುವಕನ ಬಳಿ ಹಣ ಕೇಳುತ್ತಿದ್ದಳು(Honey trap). ಯುವಕ ಹಿಂದೆ - ಮುಂದೆ ಆಲೋಚಿಸದೇ ಆಕೆ ಕೇಳಿದಾಗಲೆಲ್ಲ ಕಂತುಗಳ ಮುಖಾಂತರ ಒಟ್ಟು 95 ಲಕ್ಷ ರೂ, (95 lakh loot) ಆಕೆಯ ಖಾತೆಗೆ ವರ್ಗಾಯಿಸಿದ್ದಾನೆ.
ಹಣ ಪಡೆದ ಬಳಿಕ ಯುವತಿ ತನ್ನ ಫೇಸ್ಬುಕ್ ಖಾತೆಯನ್ನು ಡಿಲೀಟ್ (Facebook account delete) ಮಾಡಿದ್ದಾಳೆ. ಫೋನ್ ನಂಬರ್ ಸ್ವಿಚ್ಡ್ ಆಫ್ ಮಾಡಿದ್ದಾಳೆ. ಬಳಿಕ ನಾನು ಯುವತಿಯಿಂದ ಮೋಸ ಹೋಗಿದ್ದೇನೆ ಎಂಬ ಅರಿವು ಇಂಜಿನಿಯರ್ಗೆ ಆಗಿದೆ. ಇದರಿಂದ ತಡವಾಗಿ ಎಚ್ಚೆತ್ತ ಸಾಪ್ಟವೇರ್ ಇಂಜಿನಿಯರ್ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ (Hyderabad cyber crime police) ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.