ಅಮರಾವತಿ: ಮಂಗಳವಾರ ಆಂಧ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ಫೋರ್ಸ್ ಮುಖ್ಯಸ್ಥ) ದಾಮೋದರ್ ಗೌತಮ್ ಸವಾಂಗ್ರನ್ನು ಸರ್ಕಾರ ಹುದ್ದೆಯಿಂದ ಹಠಾತ್ತನೆ ವಜಾಗೊಳಿಸಿದೆ. ತೆರವಾದ ಸ್ಥಾನಕ್ಕೆ ಕೆವಿ ರಾಜೇಂದ್ರನಾಥ್ ರೆಡ್ಡಿರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ಪ್ರಸ್ತುತ ಗುಪ್ತಚರ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಾಜೇಂದ್ರನಾಥ್ರನ್ನು ಆಂಧ್ರಪ್ರದೇಶ ನೂತನ ಡಿಜಿಪಿಯಾಗಿ ಆಯ್ಕೆ ಮಾಡಲಾಗಿದೆ.
ಓದಿ: ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ... ಸಿಎಂ ಸಂತಾಪ
ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಂತೆ ಸವಾಂಗ್ಗೆ ಆಂಧ್ರ ಮುಖ್ಯ ಕಾರ್ಯದರ್ಶಿ ಸಮೀರ್ ಶರ್ಮಾ ಸೂಚಿಸಿದ್ದಾರೆ. 1986ರ ಬ್ಯಾಚ್‌ನ ಅಧಿಕಾರಿಯಾಗಿರುವ ಸವಾಂಗ್, ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇ 30, 2019 ರಿಂದ ರಾಜ್ಯ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇನ್ನು ಸವಾಂಗ್ ಜುಲೈ 31, 2023 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ರಾಜೇಂದ್ರನಾಥ್ರನ್ನು ಡಿಜಿಪಿಯಾಗಿ ನೇಮಿಸುವಲ್ಲಿ ಸರ್ಕಾರವು ಅವರ ಇಬ್ಬರು ಬ್ಯಾಚ್‌ಮೇಟ್‌ಗಳು ಸೇರಿದಂತೆ ಕನಿಷ್ಠ 10 ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಆಯ್ಕೆ ಮಾಡಿದೆ.
ಓದಿ: ಘಂಟೆ ಶಬ್ದ ಕಡಿಮೆ ಮಾಡುವಂತೆ ದೇವಾಲಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ: ಆನಂದ್ ಸಿಂಗ್ ಸ್ಪಷ್ಟನೆ
ಔಪಚಾರಿಕವಾಗಿ, DGP (HoPF) ಹುದ್ದೆಗೆ ಒಬ್ಬರನ್ನು ಆಯ್ಕೆ ಮಾಡಲು ಸರ್ಕಾರವು ಮೂರು ಅರ್ಹ ಅಧಿಕಾರಿಗಳ ಹೆಸರಿನ ಫಲಕವನ್ನು UPSC ಗೆ ಕಳುಹಿಸಬೇಕಾಗುತ್ತದೆ. ಯುಪಿಎಸ್‌ಸಿಯ ಅನುಮತಿಯ ಮೇರೆಗೆ ರಾಜೇಂದ್ರನಾಥ್ರನ್ನು ನಿಯಮಿತ ಡಿಜಿಪಿಯಾಗಿ ನೇಮಿಸಬಹುದಾಗಿದೆ.