ಅಮರಾವತಿ( ವಿಜಯವಾಡ):ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕುರಿತು ಮೇಲ್ವಿಚಾರಣೆ ಮಾಡಲು ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ, ಸಿಎಂ ಜಗನ್ ಕೋವಿಡ್ ನಿಗ್ರಹಿಸುವ ಏಕೈಕ ಪರಿಹಾರವೆಂದರೆ ವ್ಯಾಕ್ಸಿನೇಷನ್ ಎಂದು ಹೇಳಿದ್ರು.
ದೇಶ ತಿಂಗಳಿಗೆ 7 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ , ಅದರಲ್ಲಿ ಒಂದು ಕೋಟಿ ಲಸಿಕೆಗಳು ಕೋವಾಕ್ಸಿನ್ ಮತ್ತು ಉಳಿದವು ಕೋವಿಶೀಲ್ಡ್, ಆದರೆ, ದೇಶದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ 26 ಕೋಟಿ ಜನರಿದ್ದಾರೆ ಎಂದು ಅವರು ಹೇಳಿದರು. ನಾಲ್ಕು ವಾರಗಳ ಅವಧಿಯಲ್ಲಿ ಅವರಿಗೆ ಎರಡು ಡೋಸ್‌ಗಳನ್ನು ನೀಡಬೇಕು, ಅದಕ್ಕೆ 52 ಕೋಟಿ ವ್ಯಾಕ್ಸಿನ್ಗಳು ಬೇಕು ಎಂದು ಹೇಳಿದ್ರು.ಮೊದಲ ಡೋಸ್ ಅನ್ನು 12 ಕೋಟಿ ಜನರಿಗೆ ನೀಡಲಾಗಿದ್ದು, ಕೇವಲ 2.60 ಕೋಟಿ ಜನರು ಮಾತ್ರ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ, ಇನ್ನು 39 ಕೋಟಿ ಲಸಿಕೆ ಅಗತ್ಯವಿದೆ ಎಂದು ಜಗನ್ ಹೇಳಿದರು.
ಭಾರತ್ ಬಯೋಟೆಕ್ ತಿಂಗಳಿಗೆ ಒಂದು ಕೋಟಿ ಲಸಿಕೆಗಳನ್ನು ತಯಾರಿಸುತ್ತಿದೆ ಮತ್ತು ಸೀರಮ್ ಸಂಸ್ಥೆ ತಿಂಗಳಿಗೆ ಆರು ಕೋಟಿ ಲಸಿಕೆಗಳನ್ನು ತಯಾರಿಸುತ್ತಿದೆ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ಮತ್ತು ಇತರ ಲಸಿಕೆಗಳು ಲಭ್ಯವಾಗಲು ಕೆಲವು ತಿಂಗಳುಗಳು ತೆಗೆದುಕೊಳ್ಳುತ್ತದೆ. ಆಗಸ್ಟ್ ವೇಳೆಗೆ 20 ಕೋಟಿ ಲಸಿಕೆಗಳು ಸಿದ್ಧವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ 39 ಕೋಟಿ ಲಸಿಕೆಗಳ ಬೇಡಿಕೆ ಈಡೇರಿಸಬಹುದು ಎಂದು ಇದೇ ವೇಳೆ ಜಗನ್ ತಿಳಿಸಿದ್ರು.
ದೇಶದಲ್ಲಿ 18-45 ವರ್ಷ ವಯಸ್ಸಿನ 60 ಕೋಟಿ ಜನರಿದ್ದು, ಸುಮಾರು 120 ಕೋಟಿ ವ್ಯಾಕ್ಸಿನ್ಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಪೂರ್ಣಗೊಂಡ ನಂತರ ಸೆಪ್ಟೆಂಬರ್‌ನಲ್ಲಿ 18-45 ವಯಸ್ಸಿನ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.18-45 ವಯಸ್ಸಿನ ಜನರಿಗೆ ವ್ಯಾಕ್ಸಿನೇಷನ್ ಪೂರ್ಣಗೊಳಿಸಲು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಅಂದರೆ ಜನವರಿ ಅಂತ್ಯದ ವೇಳೆಗೆ ಅವರಿಗೆ ವ್ಯಾಕ್ಸಿನೇಷನ್ ಪೂರ್ಣಗೊಳ್ಳಲಿದೆ.
ಪ್ರಸ್ತುತ ಪರಿಸ್ಥಿತಿ ಫೆಬ್ರವರಿ ತನಕ ಮುಂದುವರಿಯಲಿದೆ ಹಾಗಾಗಿ ಎಲ್ಲರೂ ಜಾಗರೂಕರಾಗಿರಿ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಎಚ್ಚರಿಸಿದರು.