ಚೆನ್ನೈ: ಎಂಟನೇ ತರಗತಿಯ ಅನುಷ್ಕಾ ಕೊಲ್ಲಾ ಕೋಡಿಂಗ್ ಮಾಸ್ಟರ್ ಆಗಿ ಹೊರ ಹೊಮ್ಮಿದ್ದಾರೆ. 12 ವರ್ಷದ ಅನುಷ್ಕಾ ಭಾರತೀಯ ನೌಕಪಡೆ ಕಮಾಂಡರ್ ಕೆಪಿ ಸಬರಿಶ್ ಮತ್ತು ಕೆಎಸ್ ರೇಣುಕಾ ಅವರ ಮಗಳು. ಅವರ ಪ್ರತಿ ಕೆಲಸದಲ್ಲಿದ್ದ ಶ್ರದ್ಧೆ, ಆಕೆಯ ಗ್ರಹಿಕೆ, ಸಾಮರ್ಥ್ಯ ಗಮನಿಸಿದ ಪೋಷಕರು ಕೋಡಿಂಗ್ ಮಹತ್ವ ತಿಳಿಸಿದ್ದಾರೆ. ಇದರ ಕಲಿಕೆಗೆ ಮುಂದಾದ ಅನುಷ್ಕಾ ಸದ್ಯ ಜೀನಿಯಸ್ ಆಗಿ ಹೊರ ಹೊಮ್ಮಿದ್ದಾರೆ.
ಮುಂದಿನ ಭವಿಷ್ಯದಲ್ಲಿ ಕೋಡಿಂಗ್ ಎಂಬುದು ಸಾಕಷ್ಟು ಪ್ರಾಮುಖ್ಯತೆ ಪಡೆಯಲಿದೆ. ಈ ಕೋಡಿಗೆ ಇರುವ ಮಾನ್ಯತೆ ಮನಗಂಡಿರುವ ಅನುಷ್ಕಾ ಸದ್ಯ ತನ್ನಲ್ಲಿನ ಈ ಕೋಡಿಂಗ್ ಜ್ಞಾನವನ್ನು ಉಚಿತವಾಗಿ 8ರಿಂದ 15 ವರ್ಷದ ಮಕ್ಕಳಿಗೆ ಆನ್ಲೈನ್ ಮೂಲಕ ಹಂಚುತ್ತಿದ್ದಾರೆ. ಇದಕ್ಕಾಗಿ ವಾರಕ್ಕೆ ಒಮ್ಮೆ ಕ್ಲಾಸ್ ನಡೆಸುತ್ತಾರೆ. ಮೊದಲ ಹಂತದಲ್ಲಿ ಬೇಸಿಕ್, ಎರಡನೆ ಹಂತದಲ್ಲಿ ಆ್ಯಪ್ ಅಭಿವೃದ್ಧಿ ಮತ್ತು ಮೂರನೇ ಹಂತದಲ್ಲಿ ವೃತ್ತಿಪರ ಅಧ್ಯಯನಗಳನ್ನು ತಿಳಿಸುತ್ತಾರೆ. ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳ ಕೌಶಲ್ಯ ಪರೀಕ್ಷೆಗೆ ಈಕೆ ಪ್ರಶ್ನೆಗಳನ್ನು ಕೂಡ ವಿನ್ಯಾಸ ಮಾಡಿದ್ದಾರೆ.
ಕೋಡಿಂಗ್ ಮೂಲಕ ಸಂಸ್ಕೃತಿಯ ಪಾಠ: ಕೋಡಿಂಗ್ ಮೂಲಕ ಅವರು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪುರಾಣಗಳನ್ನು ಕಲಿಸಲಾಗುತ್ತಿದೆ. ಯಾವುದೇ ಶಿಕ್ಷಣವನ್ನು ಕಲಿಯುವುದು ಒಂದು ಹಂತ, ಇತರರಿಗೆ ಕಲಿಸುವುದು ಮತ್ತೊಂದು ಹಂತ. ಈ ಎರಡರಲ್ಲೂ ಅನುಷ್ಕಾ ಉತ್ತಮವಾಗಿದ್ದಾರೆ. ಇದುವರೆಗೆ ಆಕೆ 500 ಮಕ್ಕಳಿಗೆ ಕೋಡಿಂಗ್ ಕಲಿಸಿದ್ದಾರೆ. ಅನುಷ್ಕಾ ಈ ಸಾಧನೆ ಗಮನಿಸಿದ ವಾಸವಿ ಕ್ಲಬ್ ಇಂಟರ್ನ್ಯಾಷನಲ್ ಮತ್ತು ಜಾಗತಿಕ ಆರ್ಯ ವೈಶ್ಯ ಮಹಾಸಭಾ ಆಕೆಗೆ ಬಾಲ ಉಪಧ್ಯಾಯ್, ಬಾಲ ದ್ರೋಣಾಚಾರ್ಯ ಗೌರವ ನೀಡಿ ಪ್ರಶಂಸಿದೆ. ಆರ್ಯ ವೈಶ್ಯ ಅಧಿಕಾರಿಗಳು ಮತ್ತು ಪ್ರೊಫೆಶನಲ್ ಅಸೋಸಿಯೇಷನ್ ನಿಂದ ಉಗಾದಿ ಪ್ರಶಸ್ತಿಯನ್ನು ನೀಡಲಾಗಿದೆ.
ಮಹಾತ್ಮ ಗಾಂಧಿ ಪ್ರಶಸ್ತಿ: ಮುಂಬೈನ ಆನಂದಶ್ರೀ ಫೌಂಡೇಶನ್ನಿಂದ ಮಹಾತ್ಮ ಗಾಂಧಿ ಪ್ರಶಸ್ತಿ. ಇಂಟರ್ನ್ಯಾಷನಲ್ ಬುಕ್ ರೆಕಾರ್ಡ್, ಒಎನ್ಜಿ ಬುಕ್ ಆಫ್ ರೆಕಾರ್ಡ್ ಅವರಿಂದ ಯಂಗ್ ಟೀಚರ್ ಪುರಸ್ಕಾರ ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನುಷ್ಕಾ ಸೇವೆ ಗಮನಿಸಿ ನಳಂದ ವಿಶ್ವವಿದ್ಯಾಲಯ ಕಳೆದ ಫೆಬ್ರವರಿಯಲ್ಲಿ ಡಾಕ್ಟರೇಟ್ ಕೂಡ ನೀಡಿದೆ.
ಜಯರಾಜ್ ಇಂಟರ್ನ್ಯಾಷನಲ್ ಮುಖ್ಯಸ್ಥ, ಉದ್ಯಮಿಯಾಗಿರುವ ತಡೆಪಲ್ಲ ರಾಜಶೇಖರ್ ಅನುಷ್ಕಾ ಅವರಿಗೆ 10 ಸಾವಿರ ನಗದು ಹಣ ನೀಡಿ ಗೌರವಿಸಿದ್ದಾರೆ. ಕೋಡಿಂಗ್ ಹೊರತಾಗಿ ಕರ್ನಾಟಿಕ್ ಸಂಗೀತ, ಪಾಶ್ಚಿಮಾತ್ಯ ಸಂಗೀತದ ಜೊತೆಗೆ ಫುಟ್ಬಾಲ್, ಸ್ಕೇಟಿಂಗ್ ಮತ್ತು ರನ್ನಿಂಗ್ನಲ್ಲೂ ಅನುಷ್ಕಾ ಮುಂದಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ಗಳು ಅರ್ಲಜಿಗಳ ತಾಣ; ಹೊಸ ಸಂಶೋಧನೆ ವಿಚಾರ ಬಯಲು