ಮಲ್ಕನ್ಗಿರಿ(ಒಡಿಶಾ): ಮಾವೋವಾದಿಗಳು ವಿರುದ್ಧ ಒಡಿಶಾದ ಜಿಲ್ಲಾ ಸ್ವಯಂಸೇವಾ ಪಡೆ (DVF), ವಿಶೇಷ ಕಾರ್ಯಾಚರಣೆಗಳ ಪಡೆ (SOG) ಮತ್ತು ಮಲ್ಕಂಗಿರಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಥಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ಪಹಾದ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಶುಕ್ರವಾರ ಮುಂಜಾನೆ ಆರಂಭವಾದ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಶನಿವಾರದವರೆಗೆ ಮಾವೋ-ವಿರೋಧಿ ಕಾರ್ಯಾಚರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜಿಲ್ಲಾ ಸ್ವಯಂಸೇವಾ ಪಡೆ, ವಿಶೇಷ ಕಾರ್ಯಾಚರಣೆಗಳ ಪಡೆ ಮತ್ತು ಮಲ್ಕನ್ಗಿರಿ ಜಿಲ್ಲಾ ಪೊಲೀಸರು ವಾಪಸ್ ಆದ ಬಳಿಕ ಕಾರ್ಯಾಚರಣೆಯ ಫಲಿತಾಂಶ ಗೊತ್ತಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಪಾರ್ವತಿ ನದಿಯಲ್ಲಿ ಮುಳುಗಿ ಐವರು ಸಾವು.. ದುರ್ಗಾ ಮೂರ್ತಿ ನಿಮಜ್ಜನ ವೇಳೆ ದುರಂತ