ETV Bharat / bharat

ಹರಿಯಾಣದಲ್ಲಿ ಮತಾಂತರ ತಡೆ ಕಾಯ್ದೆ ಜಾರಿ: ಕಾಂಗ್ರೆಸ್​ ತೀವ್ರ ವಿರೋಧ

ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ದಂಡ ಸಂಹಿತೆಯಲ್ಲಿ (IPC) ನಿಬಂಧನೆಗಳಿರುವಾಗ ವಿಶೇಷ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವ ಅಗತ್ಯವೇನೆಂದು ಪ್ರಶ್ನಿಸಿದ್ದಾರೆ.

ಹರಿಯಾಣದಲ್ಲಿ ಮತಾಂತರ ತಡೆ ಕಾಯ್ದೆ ಜಾರಿ: ಕಾಂಗ್ರೆಸ್​ ತೀವ್ರ ವಿರೋಧ
Anti Conversion Act passed in Haryana amid strong opposition from Congress
author img

By

Published : Nov 27, 2022, 1:21 PM IST

ಚಂಡೀಗಢ: ಹರಿಯಾಣದ ಬಿಜೆಪಿ ಸರ್ಕಾರವು 'ಹರಿಯಾಣ ಕಾನೂನುಬಾಹಿರ ಧರ್ಮ ಮತಾಂತರ ತಡೆ ಮಸೂದೆ, 2022' ಅನ್ನು ಸಮರ್ಥಿಸಿಕೊಂಡಿದೆ. ಬಲಪಂಥೀಯ ಗುಂಪಿನ ಲವ್ ಜಿಹಾದ್ ಆರೋಪಗಳನ್ನು ಎತ್ತಿ ಹಿಡಿಯುವ ಮಸೂದೆಗೆ ಮಾರ್ಚ್​ನಲ್ಲಿ ರಾಜ್ಯ ವಿಧಾನಸಭೆ ಅಂಕಿತ ಹಾಕಿದೆ. ಈ ಕಾನೂನಿಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದರೂ ಆಡಳಿತಾರೂಢ ಬಿಜೆಪಿ ಮಾತ್ರ ಅದನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ದಂಡ ಸಂಹಿತೆಯಲ್ಲಿ (IPC) ನಿಬಂಧನೆಗಳಿರುವಾಗ ವಿಶೇಷ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವ ಅಗತ್ಯವೇನೆಂದು ಪ್ರಶ್ನಿಸಿದ್ದಾರೆ. ಬಲವಂತದ ಮತಾಂತರವನ್ನು ಲವ್ ಜಿಹಾದ್ ಎಂದು ಆರೋಪಿಸುವ ಬಲಪಂಥೀಯರ ಬೇಡಿಕೆಯನ್ನು ಈಡೇರಿಸುವ ಕ್ರಮವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಸೂದೆ ಅಂಗೀಕಾರವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಇದು ಅಪರಾಧ ಎಸಗುವವರಲ್ಲಿ ಭಯ ಹುಟ್ಟುಹಾಕುವ ಗುರಿಯಿಂದ ಕಾಯದೆ ತರಲಾಗಿದೆ ಎಂದು ಹೇಳಿದ್ದಾರೆ.

ಯಾವುದೇ ವ್ಯಕ್ತಿಯು ತನ್ನ ಸ್ವಂತ ಇಚ್ಛೆಯಿಂದ ಧರ್ಮ ಬದಲಾಯಿಸಬಹುದು. ಆದರೆ ಅದು ಬಲವಂತವಾಗಿ ಯಾರನ್ನೂ ಧರ್ಮಾಂತರ ಮಾಡಲು ಬಿಡಲ್ಲ ಎಂದು ಅವರು ಹೇಳಿದ್ದಾರೆ. ಮೋಸದಿಂದ ಅಥವಾ ಯಾವುದೇ ರೀತಿಯ ದುರಾಸೆಯಿಂದ ಮತಾಂತರ ಮಾಡಿದರೆ ಅಂಥ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಲವಂತದ ಧಾರ್ಮಿಕ ಮತಾಂತರ ನಿಯಂತ್ರಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ 127 ಎಫ್‌ಐಆರ್ ದಾಖಲಾಗಿವೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ಯಮುನಾನಗರ, ಪಾಣಿಪತ್, ಗುರುಗ್ರಾಮ್, ಪಲ್ವಾಲ್ ಮತ್ತು ಫರಿದಾಬಾದ್​ ಈ ಐದು ಜಿಲ್ಲೆಗಳಲ್ಲಿ ಹೆಚ್ಚಿನ ಬಲವಂತದ ಮತಾಂತರಗಳು ನಡೆದಿವೆ ಎಂದು ಖಟ್ಟರ್ ವಿಧಾನಸಭೆಗೆ ಮಾಹಿತಿ ನೀಡಿದ್ದರು.

ಬೆದರಿಕೆ, ಬಲವಂತ, ಮದುವೆ ಅಥವಾ ಯಾವುದೇ ಮೋಸದ ವಿಧಾನಗಳಿಂದ ಧಾರ್ಮಿಕ ಮತಾಂತರ ಮಾಡಿದಲ್ಲಿ, ಅದಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡಲು ಇಂಥ ಕಾನೂನು ತಂದ 11 ನೇ ಬಿಜೆಪಿ ಆಡಳಿತದ ರಾಜ್ಯ ಹರಿಯಾಣ ಆಗಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಕೂಡ 2019 ರಲ್ಲಿ ಬಲವಂತದ ಧಾರ್ಮಿಕ ಮತಾಂತರವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ಮಸೂದೆಯನ್ನು ಅಂಗೀಕರಿಸಿತ್ತು.

ಇದನ್ನೂ ಓದಿ: ಕ್ರಿಮಿನಲ್​ ಆರೋಪ ಹೊತ್ತವರಿಂದ ಮತಾಂತರ ನಿಷೇಧ ಕಾಯಿದೆ ಪ್ರಶ್ನಿಸಿ ಪಿಐಎಲ್​: ವಿವರಣೆ ಕೇಳಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.