ನವ ದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಈ ಬಾರಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿರುವ ಹಲವು ಕಟ್ಟಡಗಳ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮಾಜ ವಿರೋಧಿ ಘೋಷಣೆಗಳು ಕಂಡುಬಂದಿವೆ.
ಜೆಎನ್‌ಯು ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಗೋಡೆಗಳ ಮೇಲೆ "ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ", "ಶಾಖಾಗೆ ಹಿಂತಿರುಗಿ", "ಬ್ರಾಹ್ಮಣರೇ- ಬನಿಯಾಗಳೇ, ನಾವು ನಿಮಗಾಗಿ ಬರುತ್ತಿದ್ದೇವೆ, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ" ಎಂಬೆಲ್ಲ ಆಕ್ಷೇಪಾರ್ಹ ಘೋಷಣೆಗಳಿರುವ ಬರಹಗಳನ್ನು ಬರೆಯಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
-
While the Left-Liberal gang intimidate every dissenting voice, they appeal to elect EC representatives that "can assert the values of mutual respect and civility, & equal & just treatment of all."
— JNU Teachers' Forum (@jnutf19) December 1, 2022 " class="align-text-top noRightClick twitterSection" data="
'civility' & 'mutual respect'.
Highly deplorable act of vandalism! pic.twitter.com/pIMdIO9QsX
">While the Left-Liberal gang intimidate every dissenting voice, they appeal to elect EC representatives that "can assert the values of mutual respect and civility, & equal & just treatment of all."
— JNU Teachers' Forum (@jnutf19) December 1, 2022
'civility' & 'mutual respect'.
Highly deplorable act of vandalism! pic.twitter.com/pIMdIO9QsXWhile the Left-Liberal gang intimidate every dissenting voice, they appeal to elect EC representatives that "can assert the values of mutual respect and civility, & equal & just treatment of all."
— JNU Teachers' Forum (@jnutf19) December 1, 2022
'civility' & 'mutual respect'.
Highly deplorable act of vandalism! pic.twitter.com/pIMdIO9QsX
ಇದನ್ನೂ ಓದಿ: ಜೆಎನ್‌ಯು ಗಲಭೆ ಪ್ರಕರಣ: ಶಂಕಿತರಲ್ಲಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಕೂಡಾ ಒಬ್ಬರು!
ಮಾಹಿತಿಯ ಪ್ರಕಾರ, ಎಡಪಂಥೀಯ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಇಂತಹ ವಿಧ್ವಂಸಕ ಕೃತ್ಯ ಎಸಗಲಾಗುತ್ತಿದೆ ಎನ್ನಲಾಗಿದೆ. ಈ ಘೋಷಣೆಗಳನ್ನು ನವೆಂಬರ್ 30 ರ ರಾತ್ರಿ ಬರೆದಿದ್ದಾರೆ. ಆದ್ರೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಜೆಎನ್‌ಯು ಆಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಆಕ್ಷೇಪಾರ್ಹ ಬರಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಜೆಎನ್‌ಯು ಹಿಂಸಾಚಾರಕ್ಕೆ ಕರಗಿತು ಕನ್ನಡತಿ ಮನ.. ವಿದ್ಯಾರ್ಥಿಗಳಿಗೆ ನಟಿ ದೀಪಿಕಾ ಸಪೋರ್ಟ್!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್, 'ಇಂತಹ ಅಸಭ್ಯ ಹೇಳಿಕೆಗಳನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಈ ಕೃತ್ಯಕ್ಕೆ ಎಡಪಂಥೀಯ ವಿಚಾರಧಾರೆ ಹೊಂದಿರುವ ವಿದ್ಯಾರ್ಥಿಗಳೇ ಕಾರಣ. ಜೆಎನ್‌ಯು ಗೋಡೆಗಳ ಮೇಲೆ ಅವರೇ ಆಕ್ಷೇಪಾರ್ಹ ವಿಷಯಗಳನ್ನು ಬರೆದಿದ್ದಾರೆ. ಜೊತೆಗೆ ಎಐಎಸ್ಎ ಸಹ ಇದರಲ್ಲಿ ಭಾಗಿಯಾಗಿದೆ' ಎಂದು ಆರೋಪಿಸಿದರು. ಆದ್ರೆ, AISA ಗೆ ಸಂಬಂಧಿಸಿದ ವಿದ್ಯಾರ್ಥಿಗಳು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ನಟ ನಾನಾ ಪಾಟೇಕರ್ ಹೇಳಿದ್ದೇನು?