ETV Bharat / bharat

ಪಿಐಎ ಎಂದು ಬರೆದಿರುವ ಮತ್ತೊಂದು ಬಲೂನ್​ ಜಮ್ಮುವಿನಲ್ಲಿ ಪತ್ತೆ..! - ಜಮ್ಮು ಸುದ್ದಿ

ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್​​​​​ಲೈನ್​​ ವಿಮಾನ ಹೋಲುವ ರೀತಿಯ ಬಲೂನ್​ ಒಂದು ಜಮ್ಮುವಿನ ಬಲ್ವಾಲ್ ಪ್ರದೇಶದಲ್ಲಿ ಇಂದು ಪತ್ತೆಯಾಗಿದೆ.

ಬಲೂನ್
PIA marked balloon
author img

By

Published : Mar 16, 2021, 1:29 PM IST

ಶ್ರೀನಗರ: ಜಮ್ಮುವಿನ ಬಲ್ವಾಲ್ ಪ್ರದೇಶದಲ್ಲಿ ಮಂಗಳವಾರ 'ಪಿಐಎ' ಎಂದು ಬರೆದಿರುವ ವಿಮಾನ ಆಕಾರದ ಬಲೂನ್ ಪತ್ತೆಯಾಗಿದ್ದು, ಬಲೂನ್ ಅನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಐಎ ಎಂದು ಬರೆದಿರುವ ಮತ್ತೊಂದು ಬಲೂನ್​ ಜಮ್ಮುವಿನಲ್ಲಿ ಪತ್ತೆ

ಬಲ್ವಾಲ್ ಪ್ರದೇಶದ ನಿವಾಸಿಗಳು ಇಂದು ಬೆಳಗ್ಗೆ ಬಲೂನ್ ಅನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಮ್ಮ ತಂಡ ಸ್ಥಳಕ್ಕೆ ತಲುಪಿ ಅದನ್ನು ವಶಕ್ಕೆ ತೆಗೆದುಕೊಂಡಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಟಿವಿ ಭಾರತ್‌ಗೆ ತಿಳಿಸಿದ್ದಾರೆ.

"ಬಲೂನ್ ನಿಖರವಾಗಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್​​​​​ಲೈನ್ಸ್​​ (ಪಿಐಎ) ವಿಮಾನವನ್ನು ಹೋಲುತ್ತದೆ ಮತ್ತು ಅದರ ಮೇಲೆ ಬಾಗಿಲು ಮತ್ತು ಕಿಟಕಿಗಳನ್ನು ಚಿತ್ರಿಸಲಾಗಿದೆ" ಎಂದು ಅವರು ಹೇಳಿದರು. ಈ ಮಧ್ಯೆ ಪೊಲೀಸರು ಅದರ ಮೂಲವನ್ನು ಕಂಡು ಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಜಮ್ಮು ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಎರಡನೇ ಬಲೂನ್ ಇದಾಗಿದೆ. ಕಳೆದ ವಾರ ಜಮ್ಮುವಿನ ಹಿರಾನಗರ್ ವಲಯದಿಂದ ಇದೇ ರೀತಿಯ ಬಲೂನ್ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.