ETV Bharat / bharat

ವೃದ್ಧ ಮಹಿಳೆಯರನ್ನು ಕೊಲೆಗೈದು ಶವದ ಜೊತೆ ಲೈಂಗಿಕ ಕ್ರಿಯೆ ​.. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್​ - ಪೊಲೀಸರು ತನಿಖೆ

ಒಬ್ಬ ಆರೋಪಿಯನ್ನು ಜನವರಿ 23ರಂದು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬನನ್ನು ಬಂಧಿಸಿದ್ದು, ಮತ್ತೆ ಯಾರಾದರೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರಾ ಎನ್ನುವುದನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

accused of killing and raping old women arrested
ವೃದ್ಧ ಮಹಿಳೆಯರನ್ನು ಕೊಂದು ಅತ್ಯಾಚಾರವೆಸಗಿದ್ದ ಮತ್ತೊಬ್ಬ ಆರೋಪಿ ಬಂಧನ
author img

By

Published : Mar 23, 2023, 5:00 PM IST

ಬಾರಾಬಂಕಿ (ಉತ್ತರ ಪ್ರದೇಶ): ಕಳೆದ ವರ್ಷ ಡಿಸೆಂಬರ್​ನಲ್ಲಿ ಇಬ್ಬರು ವೃದ್ಧ ಮಹಿಳೆಯರನ್ನು ಕೊಂದು ಮೃತದೇಹಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಇದೀಗ ಎರಡು ತಿಂಗಳುಗಳ ಅಂತರದಲ್ಲಿ ಪೊಲೀಸರು ಬಂದಿಸಿದ್ದಾರೆ. ಜನವರಿ 23 ರಂದು ಒಬ್ಬ ಆರೋಪಿ ಅಮರೇಂದರ್​ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆತನ ಸಹಚರ, ಇನ್ನೊಬ್ಬ ಆರೋಪಿ ಸುರೀಂದರ್​ನನ್ನು ನಿನ್ನೆ ಸಂಜೆ ಪೊಲೀಸರು ಬಂಧಿಸಿದ್ದಾರೆ.

ಜನವರಿ 23 ರಂದು ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಹುನ್​ಹುನಾ ಗ್ರಾಮದಲ್ಲಿ ಮತ್ತೊಬ್ಬ ವೃದ್ಧ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದ ವೇಳೆ ಅಮರೇಂದರ್​ನನ್ನು ಪೊಲೀಸರು ಬಂಧಿಸಿದ್ದರು. ಆ ವೇಳೆ ಸುರೀಂದರ್​ ಸ್ಥಳದಿಂದ ಪರಾರಿಯಾಗಿದ್ದನು. ಇಬ್ಬರೂ ಸೇರಿ ಮಹಿಳೆಯನ್ನು ಕೊಲೆ ಮಾಡಲು ಪ್ರಯತ್ನಿಸಿದಾಗ ಅವರು ಕಿರುಚಲು ಪ್ರಾರಂಭಿಸಿದ್ದರು. ಆಗ ಗ್ರಾಮದ ಜನರು ಓಡಿ ಬಂದಿದ್ದು, ಓರ್ವ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನೋರ್ವ ಪರಾರಿಯಾಗಿದ್ದ. ರಾಮಸನೇಹಿ ಘಾಟ್​ ಪೊಲೀಸ್​ ಠಾಣೆಯಲ್ಲಿ ಅಮರೇಂದರ್​ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

'ವಿಚಾರಣೆ ಸಮಯದಲ್ಲಿ ಇಬ್ಬರೂ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಇಬ್ಬರು ಮಹಿಳೆಯರನ್ನು ಕೊಂದಿದ್ದಾರೆ ಎಂದು ತಿಳಿದುಬಂದಿತ್ತು. ತನಿಖೆ ನಡೆಯುತ್ತಿದ್ದು, ಆರಂಭದಲ್ಲಿ ನಾವು ಸರಣಿ ಹತ್ಯೆಯ ಪ್ರಕರಣ ಎಂದು ಭಾವಿಸಿದ್ದೆವು. ಆರೋಪಿ ಅಮರೇಂದರ್ ವಿಚಾರಣೆ ಸಮಯದಲ್ಲಿ ಕೃತ್ಯದಲ್ಲಿ ಸುರೀಂದರ್ ಕೂಡ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ್ದನು. ಅಲ್ಲಿಂದ ಎರಡನೇ ಆರೋಪಿಯನ್ನು ಹುಡುಕಲು ಪ್ರಾರಂಭಿಸಿದ್ದೆವು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮರೇಂದರ್​ ​ಬಂಧನದ ನಂತರ ಸಹಚರನೊಂದಿಗೆ ಸೇರಿ ವಯಸ್ಸಾದ ಮಹಿಳೆಯರನ್ನು ಪತ್ಯೇಕ ಸ್ಥಳಗಳಲ್ಲಿ ಕೊಂದು, ಮೃತದೇಹಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂಬುದು ತಿಳಿದುಬಂದಿತ್ತು. ಶವಪರೀಕ್ಷೆಯ ವರದಿ ಕೂಡ ಆರೋಪಿಗಳ ಉದ್ದೇಶವನ್ನು ದೃಢಪಡಿಸಿತ್ತು. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸುರೀಂದರ್ ಬಂಧನವನ್ನು ದೃಢಪಡಿಸಿದ ಪೊಲೀಸ್ ಠಾಣಾ ಮುಖ್ಯಸ್ಥ ಲಾಲಚಂದ್ರ ಸರೋಜ್, 'ಜಿಲ್ಲೆಯಲ್ಲಿ ವೃದ್ಧೆಯರನ್ನು ಕೊಂದು ಅತ್ಯಾಚಾರವೆಸಗಿದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಇಬ್ಬರು ಮಹಿಳೆಯರನ್ನು ಕೊಂದಿದ್ದಾರೆ. ಅವರು ಇನ್ನೊಬ್ಬ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಗ್ರಾಮಸ್ಥರು ಆರೋಪಿಗಳಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬುಧವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅವನ ಮೊದಲ ಬಲಿಪಶು ಖುಶೆತಿಯ 60 ವರ್ಷದ ಮಹಿಳೆ. ಆ ಮಹಿಳೆ 2022ರ ಡಿಸೆಂಬರ್ 5 ರಂದು ತನ್ನ ಮನೆಯಿಂದ ಹೊರ ಹೋಗಿದ್ದಳು. ಆದರೆ ಮನೆಯಿಂದ ಹೊರ ಹೋದವಳು ಸಂಜೆಯಾದರೂ ಮನೆಗೆ ಮನೆಗೆ ಹಿಂತಿರುಗದೇ ಇದ್ದಾಗ, ಆಕೆಯ ಕುಟುಂಬವು ಪೊಲೀಸರಿಗೆ ಕಾಣೆಯಾಗಿರುವ ಕುರಿತು ದೂರು ದಾಖಲಿಸಿತ್ತು. ದೂರು ನೀಡಿದ ಮರುದಿನವೇ ಪೊಲೀಸರಿಗೆ ಮಹಿಳೆಯ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು. ಡಿ.17ರಂದು ಇಬ್ರಾಹಿಂಬಾದ್ ಗ್ರಾಮದಲ್ಲಿ ಮತ್ತೊಬ್ಬ ವೃದ್ಧೆಯ ಶವ ಪತ್ತೆಯಾಗಿತ್ತು.

ಕೊಲೆಗಾರರ ವೈಯಕ್ತಿಕ ವಿವರಗಳು ಇನ್ನೂ ಬಹಿರಂಗವಾಗದಿದ್ದರೂ, ಇಬ್ಬರೂ ಆರೋಪಿಗಳು ರೈಸ್ ಮಿಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲಿ ಅವರು ಸ್ನೇಹಿತರಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರೂ ಒಟ್ಟಿಗೆ ಅಶ್ಲೀಲ ವಿಷಯಗಳನ್ನು ವೀಕ್ಷಿಸುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್, 'ಈ ಪ್ರಕರಣದಲ್ಲಿ ಇತರ ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ. ಆರೋಪಿಯನ್ನು ರಾಮಸನೇಹಿ ಘಾಟ್‌ನ ದಯಾರಾಮ್ ಪೂರ್ವಾ ನಿವಾಸಿ ಸುರೀಂದರ್ ಎಂದು ಗುರುತಿಸಲಾಗಿದೆ. ಇಬ್ಬರೂ ಸೇರಿ ಇಬ್ಬರು ಮಹಿಳೆಯರನ್ನು ಕೊಂದಿದ್ದಾರೆ. ಇನ್ನೊಬ್ಬ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಗ್ರಾಮಸ್ಥರು ಆರೋಪಿಗಳಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮತ್ತೊಬ್ಬ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಪ್ರಕರಣ: 638 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.