ETV Bharat / bharat

ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಅನಂತ್​ ಅಂಬಾನಿ.. 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ

ಸಾಯಿ ಸಂಸ್ಥೆಯ ಸಿಇಒ ಭಾಗ್ಯಶ್ರೀ ಬನಾಯತ್, ಮುಖೇಶ್​ ಅಂಬಾನಿ ಪುತ್ರ ದೇಣಿಗೆ ನೀಡಿದ ಬಗ್ಗೆ ತಿಳಿಸಿದರು. ಶಿರಡಿ ಸಾಯಿಬಾಬಾ ಭಕ್ತರಾಗಿರುವ ಅಂಬಾನಿ ಕುಟುಂಬವು ಸಾಯಿಬಾಬಾಗೆ ಯಾವಾಗಲೂ ಅಪಾರವಾದ ದೇಣಿಗೆಗಳನ್ನು ನೀಡುತ್ತಾರೆ ಎಂದು ಭಾಗ್ಯಶ್ರೀ ಬನಾಯತ್ ಹೇಳಿದರು.

Anil Ambani  donated 1 crore 51 lakh rupees to Shirdi Sai Baba temple
ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಅನಂತ್​ ಅಂಬಾನಿ
author img

By

Published : Oct 25, 2022, 1:53 PM IST

ಶಿರಡಿ(ಮಹಾರಾಷ್ಟ್ರ): ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಉದ್ಯಮಿ ಅನಂತ್ ಅಂಬಾನಿ ಸಾಯಿಬಾಬಾ ಸಂಸ್ಥೆಗೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಸಾಯಿ ಬಾಬಾಗೆ ಅನಂತ್​​ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಸಾಯಿ ಸಂಸ್ಥೆಯ ಸಿಇಒ ಭಾಗ್ಯಶ್ರೀ ಬನಾಯತ್, ಮುಖೇಶ್​ ಅಂಬಾನಿ ಪುತ್ರ ಸಾಯಿಬಾಬಾ ಮಂದಿರಕ್ಕೆ ದೇಣಿಗೆ ನೀಡಿದ ಬಗ್ಗೆ ತಿಳಿಸಿದರು. ಶಿರಡಿ ಸಾಯಿಬಾಬಾ ಭಕ್ತರಾಗಿರುವ ಅಂಬಾನಿ ಕುಟುಂಬವು ಸಾಯಿಬಾಬಾಗೆ ಯಾವಾಗಲೂ ಅಪಾರವಾದ ದೇಣಿಗೆಗಳನ್ನು ನೀಡುತ್ತಾರೆ ಎಂದು ಭಾಗ್ಯಶ್ರೀ ಬನಾಯತ್ ಇದೇ ವೇಳೆ ನೆನಪಿಸಿಕೊಂಡರು.

ಸಾಯಿಬಾಬಾಗೆ ಶಿರಡಿ ಮಜೆ ಪಂಢರಪುರದ ಕಿರು ಆರತಿ ಮಾಡಿದ ಅನಂತ್,​ ಪಾಡ್ಯ ಪೂಜೆ ನೆರವೇರಿಸಿದರು. ಸಾಯಿಬಾಬಾ ದರ್ಶನದ ಬಳಿಕ ಸಾಯಿ ಸಂಸ್ಥಾನದ ಸಿಇಒ ಭಾಗ್ಯಶ್ರೀ ಬನಾಯತ್ , ಅನಂತ್ ಅಂಬಾನಿಗೆ ಸಾಯಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಸಾಯಿಚಾರಿ ಅವರಿಗೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದರು. ದೇಣಿಗೆ ಚೆಕ್ ಅನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇದೇ ವೇಳೆ ಹಸ್ತಾಂತರಿಸಲಾಯಿತು.

ಇದನ್ನು ಓದಿ:ಷೇರುಪೇಟೆಯಲ್ಲಿ ದೀಪಾವಳಿ ಸಂಭ್ರಮ: ಶುಭಗಳಿಗೆಯಲ್ಲಿ 500 ಅಂಕ ಏರಿಕೆ ಕಂಡ ಸೆನ್ಸೆಕ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.